ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಉಜಿರೆ ಕಾಶಿಬೆಟ್ಟುವಿನ ಸಹನ ಶ್ರೀ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಾಮಾಜಿಕ ಬದ್ಧತೆಯ ಕಾರ್ಯಕ್ರಮದಡಿಯಲ್ಲಿ ಸುಮಾರು ಇಪ್ಪತೈದು ಸಾವಿರ ರೂಪಾಯಿಯ ಚೆಕ್ ನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ಧರ್ಮ ಗುರುಗಳಿಗೆ ಹಸ್ತಾಂತರಿಸಿದರು.
ವಿವಿಧ ವ್ಯಕ್ತಿಗಳ, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನೆಲ್ಯಾಡಿಯ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮ ಗುರುಗಳಾದ ವಂ| ಫಾ. ಶಾಜಿ ಮಾತ್ಯು ಹಾಗೂ ಇತರ ಸಹೃದಯಿ ವ್ಯಕ್ತಿಗಳ ಸಹಕಾರದಲ್ಲಿ ನಿರ್ಮಾಣಕ್ಕೆ ಸಹಾಯ ಮಾಡಿರುವ ಹತ್ತೊಂಬತ್ತನೆ ಮನೆಯಾಗಿದೆ ಇದು. ಸಹನಶ್ರೀ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರು ಭಾರತೀಯ ರೈಲ್ವೆ ಗ್ರಾಹಕ ಕುಂದು ಕೊರತೆ ಸಮಿತಿಯ ಮಾಜಿ ಸದಸ್ಯ ರಾಜೇಶ್ ಪುದುಶೇರಿ ಚೆಕ್ ನ್ನು ಹಸ್ತಾಂತರಿಸಿದರು.











