23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಫೆ.6-14: ಗುರುವಾಯನಕರೆ ಉರೂಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಗುರುವಾಯನಕರೆ ಇಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಫೆ. 6 ರಿಂದ 14 ರ ವರೆಗೆ ನಡೆಯಲಿದ್ದು, ಜ.16ರಂದು ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಸುನ್ನೀ ಸಂಯುಕ್ತ ಜಮಾಅತ್ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರ ನೇತೃತ್ವದಲ್ಲಿ, ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ, ಕೇರಳದ ಪ್ರಮುಖ ಧಾರ್ಮಿಕ ವಿದ್ವಾಂಸರಿಂದ ಉಪನ್ಯಾಸ ಮಾಲಿಕೆಗಳು ನಡೆಯಲಿದೆ.


ಉರೂಸ್ ಪ್ರಯುಕ್ತ ದಾನಿಗಳ‌ ನೆರವಿನಿಂದ ನಡೆಸಿಕೊಂಡು ಬರುತ್ತಿರುವ ಸಾಮೂಹಿಕ ವಿವಾಹ ಸಮಾರಂಭ ಫೆ. 8.ರಂದು ನಡೆಯಲಿದೆ. ಇದರಲ್ಲಿ‌ ದಾಂಪತ್ಯ ಜೀವನಕ್ಕೆ ಕಾಲಿರಿಸುವ ವಧುಗಳಿಗೆ ಚಿನ್ನಾಭರಣ, ವಸ್ರ್ತ, ವರ ರಿಗೆ ವಸ್ರ್ತ ಹಾಗೂ ವಾಚ್ ಕೊಡುಗೆಯಾಗಿ ನೀಡಲಾಗುವುದು.

ಫೆ.12 ರಂದು ಶಹೀದೈನಿ ಮಾಲೆ ಆಲಾಪನೆ ಹಾಗೂ ವಿವರಣೆ ನಡೆಯಲಿದೆ. ಅದೇ ದಿನ ರಾತ್ರಿ ವಾರ್ಷಿಕ್ ದಿಕ್ರ್ ಹಲ್ಖಾ ಮಜ್ಲಿಸ್ ನಡೆಯಲಿದೆ. ಫೆ.14 ರಂದು ಖತ್ಮುಲ್ ಕುರ್‌ಆನ್, ರಾತ್ರಿ ಉರೂಸ್ ಸಮಾರೋಪ ನಡೆಯಲಿದೆ. ಸಯ್ಯಿದ್ ಕುಂಬೋಳ್ ತಂಙಳ್, ಸಯ್ಯಿದ್ ಸಾದಾತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ವಾದಿ ಇರ್ಫಾನ್ ತಂಙಳ್, ಸಯ್ಯಿದ್ ಮನ್ಶರ್ ತಂಙಳ್, ಸಯ್ಯಿದ್ ದಾರುಸ್ಸಲಾಂ ತಂಙಳ್, ಸಯ್ಯಿದ್ ಮಸ್‌ಊದ್ ತಂಙಳ್ ಕೂರತ್ ಮೊದಲಾದವರಲ್ಲದೆ ವಿವಿಧ ದಿನಗಳಲ್ಲಿ ಅನೇಕ ಮಂದಿ ಧಾರ್ಮಿಕ ವಿದ್ವಾಂಸರುಗಳು,‌ ಸಾಮಾಜಿಕ ಕ್ಷೇತ್ರದ ಗಣ್ಯರುಗಳು ಭಾಗವಹಿಸಲಿದ್ದಾರೆ.

ಪೋಸ್ಟರ್ ಬಿಡುಗಡೆಯ ಸಂದರ್ಭ ಖತೀಬ್ ಅಬ್ದುಲ್ ಬಾರಿ ಸ‌ಅದಿ, ಜಮಾಅತ್ ಅಧ್ಯಕ್ಷ ಯಾಕೂಬ್ ಮುಸ್ಲಿಯಾರ್ ಸಹಿತ ಉರೂಸ್ ಸಮಿತಿ ಹಾಗೂ ಆಡಳಿತ ಸಮಿತಿ ಪದಾಧಿಕಾರಿಗಳು, ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು, ಜಮಾಅತ್ ಬಾಂಧವರು ಉಪಸ್ಥಿತರಿದ್ದರು.

Related posts

ತೆಕ್ಕಾರು ಗ್ರಾ.ಪಂ. ಅಧ್ಯಕ್ಷರಾಗಿ ರಹಿಯಾನತ್, ಉಪಾಧ್ಯಕ್ಷರಾಗಿ ಪುಷ್ಪಾ ಆಯ್ಕೆ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಭೇಟಿ

Suddi Udaya

ಯಕ್ಷಭಾರತಿ ಸಂಸ್ಥೆಯ ವತಿಯಿಂದ ಕೋಳ್ಯೂರು ರಾಮಚಂದ್ರ ರಾವ್ ರವರಿಗೆ ಸನ್ಮಾನ

Suddi Udaya

ಕೊಕ್ಕಡ: ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಕ್ಕೊಳಗಾಗಿದ್ದ ನೇಪಾಳಿ ಮಹಿಳೆ ಸಾವು

Suddi Udaya

ರಕ್ತೇಶ್ವರಿಪದವು ಪೌಷ್ಟಿಕಾಹಾರ ಪೋಷಣ್ ಅಭಿಯಾನ

Suddi Udaya

ಬೆಳ್ತಂಗಡಿ: ತಾಲೂಕು ಆಡಳಿತ ಸೌಧದಲ್ಲಿ ಕುವೆಂಪುರವರ ಜನ್ಮದಿನಾಚರಣೆಯ ಪ್ರಯುಕ್ತ ವಿಶ್ವ ಮಾನವ ದಿನಾಚರಣೆ

Suddi Udaya
error: Content is protected !!