32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ದಯಾ ವಿಶೇಷ ಶಾಲೆಯಲ್ಲಿ ದಿ.ಕೆ. ವಸಂತ ಬಂಗೇರರವರ 80ನೇ ವರ್ಷದ ಹುಟ್ಟುಹಬ್ಬ ಆಚರಣೆ

ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಬೆಳ್ತಂಗಡಿ ಮಾಜಿ ಶಾಸಕ ದಿ. ವಸಂತ ಬಂಗೇರರವರ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದಿ. ವಸಂತ ಬಂಗೇರರವರ ಸಂಸ್ಥೆಯೊಂದಿಗಿನ ಒಡನಾಟ ಮತ್ತು ಶಾಲೆಯ ವಿಭಿನ್ನ ಸಾಮರ್ಥ್ಯದ ಮಕ್ಕಳ ಬಗೆಗಿನ ಅವಾರ ಕಾಳಜಿಯಿಂದಾಗಿ ಪ್ರತೀ ವರ್ಷವೂ ವಿಭಿನ್ನ ಕಾರ್ಯಕ್ರಮಗಳನ್ನು ಶಾಲೆಯ ಮಕ್ಕಳಿಗಾಗಿ ಅವರ ಹುಟ್ಟು ಹಬ್ಬ ಹಾಗೂ ಪುಣ್ಯಸ್ಮರಣೆಯ ಅಂಗವಾಗಿ ಅವರ ಕುಟುಂಬಸ್ಥರು ಆಚರಿಸುತ್ತಾ ಬಂದಿರುತ್ತಾರೆ.

ಈ ಬಾರಿಯೂ ಶ್ರೀಯುತರ 80 ನೇ ವರ್ಷದ ಹುಟ್ಟುಹಬ್ಬದ ಪರವಾಗಿ ಶಾಲೆಯ ವಿಭಿನ್ನ ಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕರು, ವಿಶೇಷ ಚೇತನ ಮಕ್ಕಳು ಹಾಗೂ ಸಿಬ್ಬಂದಿಗಳು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲೆಂದು ಭಗವಂತನಲ್ಲಿ ಬೇಡುತ್ತಾ, ಅವರ ಕುಟುಂಬಸ್ಥರ ಈ ಉದಾತ್ತ ಹೃದಯಕ್ಕೆ ಹಾಗೂ ಶಾಲೆಯ ವಿಶೇಷ ಚೇತನ ಮಕ್ಕಳ ಪರ ಅವರು ತೋರುತ್ತಿರುವ ಅಕ್ಕರೆ, ವಾತ್ಸಲ್ಯಕ್ಕೆ ವಂದಿಸಿದರು.

ಶಾಲೆಯ 107 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶೇಷ ಭೋಜನವನ್ನು ಸವಿದು, ದಿ. ವಸಂತ ಬಂಗೇರ ರವರ ಆತ್ಮದ ಚಿರಶಾಂತಿಗಾಗಿ ಹಾಗೂ ಅವರ ಕುಟುಂಬಸ್ಥರ ಉತ್ತಮ ಆಯುರಾರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.

Related posts

ಮಚ್ಚಿನ ಸಹಕಾರಿ ಸಂಘಕ್ಕೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರ ಮಾರಾಟ ಮಳಿಗೆ ಯೋಜನೆ

Suddi Udaya

ಸೆ.15 ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡರಿಂದ ಪ್ರಚಾರಕ್ಕೆ ಚಾಲನೆ

Suddi Udaya

ಪದ್ಮಂಜ ಸೇವಾ ಸಹಕಾರಿ ಸಂಘದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕಡಿರುದ್ಯಾವರ: ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

Suddi Udaya

ಧರ್ಮಸ್ಥಳದಲ್ಲಿ ನಾಳೆ(ಫೆ.15) ಶಿವರಾತ್ರಿ ವೈಭವ : ಪಾದಯಾತ್ರಿಗಳ ಗಡಣ, ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಜಾಗರಣೆ, ಕಲಾಸೇವೆ

Suddi Udaya
error: Content is protected !!