37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಧಾರ್ಮಿಕವರದಿ

ಐತಿಹಾಸಿಕ ಕಾಜೂರು ಮಖಾಂ ಉರೂಸ್ ಉದ್ಘಾಟನೆ: ಅಲ್ಲಾಹನ‌ ನೋಟ ಹೃದಯಕ್ಕೆ ಮಾತ್ರ; ವೈಎಂಕೆ ಡಾ. ಅಬ್ದುಲ್ಲ ಕುಂಞಿ

ಬೆಳ್ತಂಗಡಿ: ಕಾಜೂರು ಮಖಾಂ ಶರೀಫ್ ನಲ್ಲಿ ಅಂತ್ಯವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಇಷ್ಟದಾಸರಾದ ಔಲಿಯಾಗಳು ಆಂತರ್ಯದ ಭಕ್ತಿ ಶ್ರದ್ಧೆಯಿಂದ ಅಲ್ಲಾಹನೆಡೆಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ನಮ್ಮ ಜೀವನದಲ್ಲೂ ಇದೇ ಮಾದರಿ ಅನುಸರಿಸಬೇಕಿದೆ. ಅಲ್ಲಾಹನ‌ ನೋಟ ಬಾಹ್ಯ ಚಟುವಟಿಕೆಗಳ ಬದಲು ನಮ್ಮ ಆಂತರ್ಯದ ಭಾವನೆಯನ್ನಾಗಿದೆ ಎಂದು ಯೆನಪೋಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ವೈಎಮ್‌ಕೆ ಡಾ. ಅಬ್ದುಲ್ಲ ಕುಂಞಿ ಹೇಳಿದರು.

ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಜ.16 ರಿಂದ ಆರಂಭಗೊಂಡ ಉರೂಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಅಲೈಡ್ & ಹೆಲ್ತ್ ಕೇರ್ ಕೌನ್ಸಿಲ್‌ ಚೇರ್ಮೆನ್ ಡಾ. ಯು.ಟಿ ಇಫ್ತಿಕಾರ್ ಅಲಿ ಅವರು ಮಾತನಾಡಿ, ಕಾಜೂರಿಗೆ ಶಾದಿಮಹಲ್ ನಿರ್ಮಾಣದ ಉದ್ದೇಶಕ್ಕೆ ಸಚಿವ ಝಮೀರ್ ಅಹಮ್ಮದ್ ಬಳಿ ನಿಮ್ಮ ನಿಯೋಗವನ್ನೇ ಕರೆದುಕೊಂಡುಹೋಗಿ ಕ್ರಮವಹಿಸಲಾಗುವುದು. ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ, ಪ್ಯಾರಾ ಮೆಡಿಕಲ್ ಇತ್ಯಾಧಿ ಅಧ್ಯಯನಾಸಕ್ತ ಅರ್ಹ ವಿದ್ಯಾರ್ಥಿಗಳಿದ್ದರೆ ಅಂತವರಿಗೆ ನಮ್ಮ ಫೌಂಡೇಶನ್ ಮೂಲಕ ಕಲಿಕಾ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಕಿಲ್ಲೂರಿನಿಂದ‌ ಸಂದಲ್ ಮೆರವಣಿಗೆ:ಉರೂಸ್ ಸಂಪ್ರದಾಯದಂತೆ ಕಿಲ್ಲೂರಿನಿಂದ ಸಂದಲ್ ಮೆರವಣಿಗೆ ಆಗಮಿಸಿ,‌ ಕಾಜೂರು ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು. ಬಳಿಕ ಮೇಲಿನ‌ ದರ್ಗಾ ಪರಿಸರದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.ನಾಡಿನ ಕ್ಷೇಮಕ್ಕಾಗಿ ಮತ್ತು ಕೋಮು ಸೌಹಾರ್ದತೆಗಾಗಿ ಔಲಿಯಾಗಳ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಸಯ್ಯಿದ್‌ ಕಾಜೂರು ತಂಙಳ್ ಉದ್ಘಾಟನೆ ನೆರವೇರಿಸಿದರು. ಸಯ್ಯಿದ್‌ ಕಿಲ್ಲೂರು ತಂಙಳ್ ದರ್ಗಾ ಝಿಯಾರತ್ ಗೆ ನೇತೃತ್ವ ನೀಡಿದರು.ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ನೂರುದ್ದೀನ್ ಸಾಲ್ಮರ, ಅಕ್ಬರ್ ಬೆಳ್ತಂಗಡಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಡಿ. ಡಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮೊದಲಾದವರು ಶುಭಕೋರಿದರು. ವೇದಿಕೆಯಲ್ಲಿಕಿಲ್ಲೂರು‌ ಮುದರ್ರಿಸ್ ಅಬ್ದುಲ್ ರಹಿಮಾನ್ ಬಾಖವಿ ಕಕ್ಕಿಂಜೆ, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಕೋಶಾಧಿಕಾರಿ ಡಿ ವೈ ಉಮರ್, ಹಿರಿಯ ಸದಸ್ಯ ಬದ್ರುದ್ದೀನ್ ಕಾಜೂರು, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಪ್ರಮುಖರಾದ ನಝೀರ್ ಮಠ, ಚಾರ್ಮಾಡಿ ಹಸನಬ್ಬ, ಕೆ.ಯು ಉಮರ್ ಸಖಾಫಿ, ಕೆ.‌ಮುಹಮ್ಮದ್ ಪುತ್ತುಮೋನು ಕಿಲ್ಲೂರು, ಹಾಜಿ ಅಬ್ದುಲ್‌ ರಝಾಕ್ ಸಖಾಫಿ ಮಡಂತ್ಯಾರ್, ಸಾದಿಕ್‌ ಮಾಸ್ಟರ್‌ ಮಲೆಬೆಟ್ಟು, ದಾಸಪ್ಪ ಗೌಡ ಕಾಂಜಾನು, ಕೆ.ಯು ಮುಹಮ್ಮದ್‌ ಮಲವಂತಿಗೆ, ಶಾಹುಲ್ ಹಮೀದ್‌ ಮಿತ್ತಬಾಗಿಲು, ಮುಹಮ್ಮದ್ ರಫಿ ಬೆಳ್ತಂಗಡಿ, ಕೆ ಶೇಖಬ್ಬ ಕುಕ್ಕಾವು, ಬಿ.ಎ ಯೂಸುಫ್ ಶರೀಫ್, ಹಾಜಿ ಇಬ್ರಾಹಿಂ ಮದನಿ, ಚಂದ್ರಶೇಖರ ಗೌಡ, ಬಿ.ಹೆಚ್ ಅಬೂಬಕ್ಕರ್ ಹಾಜಿ, ಜೆ.ಹೆಚ್ ಅಬ್ಬಾಸ್, ಕೆ.ಹೆಚ್ ಮುಹಮ್ಮದ್, ಹಾಜಿ ಸಲೀಂ ಪೀಚಲಾರ್,‌ ಅಬ್ದುಲ್ ರಹಿಮಾನ್ ಬಿ.ಆರ್.ಆರ್, ಮುಸ್ತಫ ರೂಬಿ ಕಾಟಿಪಳ್ಳ, ಯು.ಕೆ ಅಬ್ದುಲ್‌ ಶುಕೂರ್, ಅಬ್ದುಲ್‌‌ ಸಮದ್, ಅನ್ಸಾರ್ ತಾಜ್ ಲಾಯಿಲ, ಅಬ್ದುಲ್‌ ಹನೀಫ್ ಲಾಯಿಲ, ಬಿ.ಎಂ ಇಲ್ಯಾಸ್, ಸುಲೈಮಾನ್ ಹಾಜಿ ಚಾರ್ಮಾಡಿ, ಹಾರಿಸ್ ಪುತ್ರಬೈಲು, ಅಬ್ದುಲ್ ಮುತ್ತಲಿಬ್ ಇಂದಬೆಟ್ಟು, ವಝೀರ್ ಮುಹಮ್ಮದ್ ಬಂಗಾಡಿ, ಹಮೀದ್ ಎರ್ಮಾಳ, ಬಿ ಸಲೀಂ ಬೆದ್ರಬೆಟ್ಟು, ಮುಹಮ್ಮದ್ ಪೆರ್ದಾಡಿ, ಎಂ.ಎ ಕಾಸಿಂ ಮಲ್ಲಿಗೆಮನೆ, ಮುಹಮ್ಮದ್ ಕೊಲ್ಲಿಬೆಟ್ಟು, ಕೆ.ಪಿ ಮುಹಮ್ಮದ್ ಕಾಜೂರು, ನಝೀರ್ ಪೆರ್ದಾಡಿ, ಶರೀಫ್ ಮುಈನಿ ಪೆರ್ದಾಡಿ, ವಝೀರ್ ಕೋಟೆಹೊಳೆ ಕಳಸ ಮೊದಲಾದವರು ಉಪಸ್ಥಿತರಿದ್ದರು.‌

ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ ಪ್ರಸ್ತಾವನೆಗೈದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಧನ್ಯವಾದವಿತ್ತರು. ಬಂದಂತಹ ಸಾವಿರಾರು ಭಕ್ತಾದಿಗಳಿಗೆ ಸಮಿತಿಯ ವತಿಯಿಂದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Related posts

ಅಳದಂಗಡಿ ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚನೆ

Suddi Udaya

ಜಮೀಯತುಲ್ ಫಲಾಹ್ ಘಟಕದಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ

Suddi Udaya

ಕುಂಟಿನಿ ಅಲ್-ಬುಖಾರಿ ಜುಮಾ ಮಸ್ಜಿದ್ ನೂತನ ಆಡಳಿತ ಸಮಿತಿ ರಚನೆ

Suddi Udaya

ಧರ್ಮಸ್ಥಳ: ನಮ್ಮೂರು ನಮ್ಮ ಕೆರೆ ಸಮಿತಿ ಸದಸ್ಯರೊಂದಿಗೆ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

ಸ.ಹಿ.ಪ್ರಾ.ಶಾಲೆ ಕುಂಟಾಲಪಲ್ಕೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya
error: Content is protected !!