25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಗುರುವಾಯನಕೆರೆಯಲ್ಲಿ ಬೃಹತ್ ಹಿಂದೂ ಸಂಗಮ

ಗುರುವಾಯನಕೆರೆ: ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಮಂಡಲ ಇದರ ವತಿಯಿಂದ ಕುವೆಟ್ಟು, ಓಡಿಲ್ನಾಳ, ಕಳಿಯ, ನ್ಯಾಯತರ್ಪು, ಮೇಲಂತಬೆಟ್ಟು ಮತ್ತು ಮುಂಡೂರು ಗ್ರಾಮಗಳ ‘ಹಿಂದೂ ಸಂಗಮ’ ಬೃಹತ್ ಸಮಾವೇಶ‌ ಜ.18 ರಂದು ನವಶಕ್ತಿ ಮೈದಾನ, ಶಕ್ತಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.


ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಹಿಂದೂ ಧರ್ಮ, ಸಮಾಜ, ಪರಂಪರೆ, ಸಂಸ್ಕೃತಿಯ ಮೇಲೆ ನಿರಂತರ ಅಕ್ರಮಣ, ದೌರ್ಜನ್ಯ ನಡೆದರೂ, ನಮ್ಮ ಅಸ್ಮಿತೆ ಇಂದಿಗೂ ಉಳಿದುಕೊಂಡಿದೆ ಎಂದರೆ ಇದಕ್ಕೆ ನಮ್ಮ ಸಂಘಟನೆ ಕಾರಣವಾಗಿದೆ.

ಸನಾತನ ಹಿಂದೂ ಧರ್ಮ ಸಂಘಟಿತರಾದರೆ, ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು. ವಿಶ್ವ ಉಳಿಯ ಬೇಕಾದರೆ, ದೇಶ ಉಳಿಯಬೇಕು, ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ, ಸದೃಢ ಹಿಂದೂ ಸಮಾಜ ಬೆಳೆಯಲು ಸಾಧುಸಂತರು, ಜ್ಞಾನಿಗಳು, ಧಾರ್ಮಿಕ ಮುಖಂಡರು ಮಾಗ೯ದಶ೯ನ ನೀಡಬೇಕು. ಪ್ರತಿ ಗ್ರಾಮ, ಮನೆ, ಮನೆಗಳಲ್ಲಿ ಹಿಂದೂ ಸಂಗಮ ನಡೆಯಬೇಕು ಎಂದು ತಿಳಿಸಿದರು.


ಅಧ್ಯಕ್ಷತೆಯನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ನವಶಕ್ತಿ ವಹಿಸಿ ಮಾತನಾಡಿ, ಎಲ್ಲಾ ಜಾತಿಯವರು ಒಂದೇ ಕಡೆ ಸೇರುವುದು ಹಿಂದುತ್ವ ವಾಗಿದ್ದು, ನಮ್ಮ ಆಚರಣೆ, ಸಂಪ್ರದಾಯ, ಧಮ೯ಗಳ ವಿಚಾರಣೆಯನ್ನು ಮಕ್ಕಳಿಗೆ ತಿಳಿಸಬೇಕು. ಪ್ರಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ, ಪ್ರತಿ ಮನೆಯಲ್ಲೂ ಭಜನಾ ಸಂಕೀರ್ತನೆ ನಡೆಯಿತು ಎಂದು ಸಲಹೆ ನೀಡಿದರು.

ಕಾಯ೯ಕ್ರಮದ ವಕ್ತಾರರಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸಂಯೋಜಕ ನಂದೀಶ್. ಜಿ. ಮಾತನಾಡಿ, ಹಿಂದು ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಸಮಾಜದ ಸಂರಕ್ಷಣೆ ಹಿಂದೂ ಸಂಗಮದ ಮುಖ್ಯ ಉದ್ದೇಶವಾಗಿದ್ದು, ಹಿಂದೂ ರಾಷ್ಟ್ರವನ್ನು ಮತ್ತೆ, ಮತ್ತೆ
ನೆನಪಿಸುವ ಕಾರ್ಯ ಈ ಸಮಾವೇಶದ ಮೂಲಕ ನಡೆಯುತ್ತದೆ ಎಂದರು. ಹಿಂದೂ ಸಂಘಟನೆ ಮೂಲಕ ರಾಷ್ಟ್ರ ಪರಮ ವೈಭವ ಕಾಣಬೇಕು, ಪ್ರತಿಯೊಬ್ಬ ಹಿಂದು ಸಂಘಟನೆಯಾಗಿ ಹಿಂದೂ ಸಮಾಜದ ಸಮಸ್ಯೆಗಳ ಬಗ್ಗೆ ಚಿಂತನೆ ಮಾಡಬೇಕು ಎಂದು ತಿಳಿಸಿದರು.


ವೇದಿಕೆಯಲ್ಲಿ ಕಿರಾತ ಮೂರ್ತಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೊಯಾ೯ರು, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ರಮಾನಂದ ಸಾಲಿಯಾನ್, ಪಾಡ್ಯಾರು ಬೀಡುವಿನ ಪ್ರವೀಣ್ ಕುಮಾರ್, ಗುರುವಾಯನಕೆರೆ ಅರಮನೆ ಬೆಟ್ಟ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಕಡಂಬು,ನಾಳ ದೇವಸ್ಥಾನದ ಅಧ್ಯಕ್ಷ ಹರೀಶ್ ಕುಮಾರ್, ನಳಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ, ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅಧ್ಯಕ್ಷ ನಾರಾಯಣ ಪೂಜಾರಿ, ಉದ್ಯಮಿ ನಾಣ್ಯಪ್ಪ ಪೂಜಾರಿ, ಸಂಪತ್ ಸುವರ್ಣ ಭಾಗವಹಿಸಿದ್ದರು.


ವೇದಿಕೆಯಲ್ಲಿ ಹಿಂದೂ ಸಂಗಮ ಯೋಜನಾ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅಜಿತ್ ಜಿ ಶೆಟ್ಟಿ, ಉಪಾಧ್ಯಕ್ಷರುಗಳಾದ ಶ್ರೀಮತಿ ಪ್ರೀತಿ ರಾವ್‌ ಬೆಳ್ತಂಗಡಿ, ದಾಮೋದರ ಬಂಗೇರ ಸವಣಾಲು, ಗಂಗಾಧರ್ ರಾವ್ ಕೆವುಡೇಲು, ವಸಂತ ಮಜಲು ಕಳಿಯ, ಸೇಸಪ್ಪ ಸಾಲಿಯಾನ್ ಬಾರ್ಯ, ಮನೋಹರ ಶೆಟ್ಟಿ ಬಾರ್ಯ,
ಪುಷ್ಪರಾಜ್ ಶೆಟ್ಟಿ ಕಾಶಿಬೆಟ್ಟು, ಶ್ರೀಮತಿ ಜಯ ಅನಂತಕೃಷ್ಣ ಭಟ್ ಕೊಯ್ಯೂರು, ರಕ್ಷಿತ್ ಪಣೆಕ್ಕರ. ಕಾರ್ಯದರ್ಶಿ ವಸಂತ ಮರಕಡ ಮಚ್ಚಿನ, ಜೊತೆ ಕಾರ್ಯದರ್ಶಿಗಳಾದ ತುಕರಾಮ್ ಬಿ ಬೆಳ್ತಂಗಡಿ, ಶ್ರೀಮತಿ ಶ್ರೇಯಾ ಶೆಟ್ಟಿ ಗುರುವಾಯನಕೆರೆ, ಕು| ಸುರಕ್ಷಾ ಆಚಾರ್ಯ ಲಾಯಿಲ, ದಯಾನಂದ ರೈ ಸವಣಾಲು ಮನೋಹರ ಗೌಡ ಮೊಗೆರಡ್ಕ, ವೀರೇಂದ್ರ ಕುಮಾರ್ ಮಡಂತ್ಯಾರು ರೋಹಿತ್‌ ಶೆಟ್ಟಿ ಕುಪ್ಪೆಟ್ಟಿ, ಕೋಶಾಧಿಕಾರಿ ಸ್ವಸ್ತಿಕ್ ಬೆಳ್ತಂಗಡಿ ,ಸಹ ಕೋಶಾಧಿಕಾರಿ
ಪ್ರಭಾಕರ ಶೆಟ್ಟಿ ಉಪ್ಪಡ್ಕ ತಾಲೂಕು ಸಂಯೋಜಕರಾದ ಅನಿಲ್‌ ಕುಮಾರ್ ಯು. ಗುರುವಾಯನಕೆರೆ ಮಂಡಲ ನಿರ್ವಹಣಾ ತಂಡದ ಮಂಡಲ ಸಂಯೋಜಕರಾದ ಚಿದಾನಂದ ಇಡ್ಯಾ, ಪ್ರಮುಖರಾದ ಭುವನೇಶ್ ಗೇರುಕಟ್ಟೆ, ಆನಂದ ಶೆಟ್ಟಿ ಐಸಿರಿ, ವಸಂತ ಶೆಟ್ಟಿ ಮಠ, ಅಶೋಕ್ ಆಚಾರ್ಯ ಲಕ್ಷ್ಮಿ ಕಾಂತ್ ಶೆಟ್ಟಿ ಮೂಡೈಲ್, ಜಯರಾಮ್ ಶೆಟ್ಟಿ ಕಿನ್ನಿಗೋಳಿ, ಸಂದೇಶ್ ಅನಿಲ, ಹರೀಶ್ ಬಂಗೇರ, ಪ್ರಶಾಂತ್ ಆಚಾರ್ಯ, ಸುಕೇಶ್ ಕಡಂಬು, ಕುಶಾಲಪ್ಪ ಗೌಡ, ಸಂದೀಪ್ ಗಾಣಿಗ ನಾಳ, ನಾಣ್ಯಪ್ಪ ಪೂಜಾರಿ ಕಲ್ಲಾಪು, ಲೋಕೇಶ್ ಆಚಾರ್ಯ, ಸುಂದರ ನ್ಯಾಕ, ಗೋಪಾಲ ಬನ, ಸೋಮಣ್ಣ ಗೌಡ ನಾಳ, ಪ್ರದೀಪ್ ಶೆಟ್ಟಿ ಪಾಡ್ಯಾರ್, ಮನೋಹ‌ರ್ ಕೇದಳಿಕೆ, ಶ್ರೀಮತಿ ಗಿರಿಜಾ ನಲ್ಕೆತ್ತಾರು, ಶ್ರೀಮತಿ ಶಾಂತಾ ಬ೦ಗೇರಾ, ಶ್ರೀಮತಿ ಸೌಮ್ಯ ನವೀನ್, ಶ್ರೀಮತಿ ಮಮತಾ ಶೆಟ್ಟಿ ನಾಳ, ಶ್ರೀಮತಿ ಭಾರತೀ ಆಚಾರ್ಯ, ಶ್ರೀಮತಿ ಗೀತಾ ಎಸ್ ಶೆಟ್ಟಿ ಮಾಪಲಾಡಿ ಮೊದಲಾದವರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಬೃಹತ್ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಿದ್ದರು. ಆರಂಭದಲ್ಲಿ ಗೋಪೂಜೆ ಹಾಗೂ ಭಾರತಮಾತೆಗೆ ಪುಷ್ಷಾಚ೯ನೆ‌ ಮಾಡಲಾಯಿತು.
ಮಂಡಲ ಸಂಯೋಜಕರಾದ ಚಿದಾನಂದ ಇಡ್ಯಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.‌ ಪ್ರಭಾಕರ ಉಪ್ಪಡ್ಕ ವಂದಿಸಿದರು.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಕಸದಿಂದ ರಸ ಸ್ಪರ್ಧೆ

Suddi Udaya

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ವೇಣೂರು ಪೊಲೀಸರಿಂದ ಆರೋಪಿ ಬಂಧನ

Suddi Udaya

ಎ.13ರ ಒಳಗೆ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರ ಒಪ್ಪಿಸಲು ಸೂಚನೆ

Suddi Udaya

ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಸುಪ್ರೀಂ ಕೋರ್ಟ್ ಅನುಮತಿ ಕಂಬಳ ಅಭಿಮಾನಿಗಳ ಹೋರಾಟಕ್ಕೆ ಸಂದ ಜಯ :ರಕ್ಷಿತ್ ಶಿವರಾಂ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಸ್ಪೈನಲ್ ಸರ್ಜರಿ

Suddi Udaya

ಜು.3: ವಿದ್ಯುತ್ ನಿಲುಗಡೆ

Suddi Udaya
error: Content is protected !!