22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಲಾಯಿಲ: ಪುತ್ರಬೈಲಿ‌ನಲ್ಲಿ ಸರಕಾರದ ಕುಡಿಯುವ ನೀರಿನ ಬಾವಿ ಕಲುಷಿತಗೊಳಿಸಿ ಜಾಗ ಒತ್ತುವರಿ

ಬೆಳ್ತಂಗಡಿ : ಸರಕಾರ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ಬಾವಿಯನ್ನು ನಿರ್ಮಾಣ ಮಾಡಿರುವುದನ್ನು ಸ್ಥಳೀಯ ನಿವಾಸಿ ಸರಕಾರಿ ಜಾಗವನ್ನು ಸಮೇತ ಒತ್ತುವರಿ ಮಾಡಿಕೊಂಡಿದ್ದರೂ ಗ್ರಾಮ ಪಂಚಾಯತ್ ಮಾತ್ರ ಮೌನವಹಿಸಿರುವ ಬಗ್ಗೆ ಗ್ರಾಮಸ್ಥರೊಬ್ಬರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ಬಳಿಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿರುವ ಸಾರ್ವಜನಿಕರಿಗಾಗಿ ಲಾಯಿಲ ಗ್ರಾಮ ಪಂಚಾಯತ್ ವತಿಯಿಂದ ಕುಡಿಯುವ ಬಾವಿಯನ್ನು ಸರಕಾರಿ ಜಾಗದಲ್ಲಿ ಮಾಡಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅದನ್ನು ಒತ್ತುವರಿ ಮಾಡಿಕೊಂಡ ಬೇಲಿಯನ್ನು ಹಾಕಿ ನೀರನ್ನು ಯಾರು ಕುಡಿಯದಂತೆ ನೀರಿನ ಬಾವಿಯೊಳಗೆ ಮಣ್ಣು ಮತ್ತು ಕಸವನ್ನು ಹಾಕಿ ಉಪಯೋಗಿಸದಂತೆ ಮಾಡಿದ್ದಾರೆ.

ಈ ಬಾವಿಯ ಬಗ್ಗೆ ಸ್ಥಳೀಯ ಆಡಳಿತ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಇದರ ಬಗ್ಗೆ ಕೂಲಂಕುಷ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅದಲ್ಲದೆ ಈ ಬಾವಿಯನ್ನು ಕಲುಷಿತ ಮಾಡಿದವರಿಂದಲ್ಲೇ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಉಪಯೋಗಕ್ಕೆ ಅನುಕೂಲ ಮಾಡಿಕೊಂಡಬೇಕಾಗಿ ಲಾಯಿಲ ನಿವಾಸಿ ಅನ್ಸರ್ ಬಿ ಎಂಬವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಬೆಳ್ತಂಗಡಿ ತಹಶೀಲ್ದಾರ್, ಲಾಯಿಲ ಅಭಿವೃದ್ಧಿ ಅಧಿಕಾರಿ, ಲಾಯಿಲ ಗ್ರಾಮ ಪಂಚಾಯತ್ ಗೆ ಜ.19 ರಂದು ದೂರು ಅರ್ಜಿ ಸಲ್ಲಿಸಿದ್ದಾರೆ.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಸುವರ್ಣ ಸಂಭ್ರಮದ ಪ್ರಯುಕ್ತ ‘ಸುವರ್ಣ ಸೇವಾ ವನಮಹೋತ್ಸವ’

Suddi Udaya

ಎಸ್.ಡಿ.ಎಂ. ನೆನಪಿನಂಗಳ ವಾರ್ಷಿಕ ಪುನರ್ಮಿಲನ: ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಬ್ಬರಿಗೆ ಸನ್ಮಾನ

Suddi Udaya

ನಿಡ್ಲೆ: ಗೋವಾ ಕೊಂಕಣ್ ರೈಲ್ವೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೊಂಬಯ್ಯಗೌಡ ಹೃದಯಾಘಾತದಿಂದ ನಿಧನ

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಪೂರ್ವ ತಯಾರಿ ಸಭೆ

Suddi Udaya

ಶಿಶಿಲದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ ಬಂಡಿಹೊಳೆ ಕೆಮ್ಮಣ್ಣು ಎಂಬಲ್ಲಿ ಬರೆ ಜರಿದು ರಸ್ತೆ ಬಂದ್

Suddi Udaya
error: Content is protected !!