September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸಂತೋಷ್ ಕುಮಾರ್ ಜೈನ್ ಅಭಿಮಾನಿ ಬಳಗದಿಂದ ಪಡಂಗಡಿಯಲ್ಲಿ ಲೆಜೆಂಡ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆಮಂತ್ರಣ ಪತ್ರಿಕೆ ಬಿಡುಗಡೆ: ರ್‍ಯಾಶ್ ತಂಡದಲ್ಲಿ ಆಡಲಿದ್ದಾರೆ ಶಾಸಕ ಹರೀಶ್ ಪೂಂಜ,ಆಟಗಾರರು ಪುಲ್ ಖುಷ್

ಪಡಂಗಡಿ: ಸಂತೋಷ್ ಕುಮಾರ್ ಜೈನ್ ಅಭಿಮಾನಿ ಬಳಗದಿಂದ ಹಾಮದ ಬಾವ ಸವಿ ನೆನಪಿಗಾಗಿ, ದಿ ಸುಬ್ರಹ್ಮಣ್ಯ ಪ್ರಸಾದ್ ವೇದಿಕೆಯಲ್ಲಿ ಪಡಂಗಡಿ ಪ್ರೀಮಿಯರ್ ಲೀಗ್ ಆಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಜ 31, ಫೆ 1 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಶಾಸಕ ಹರೀಶ್ ಪೂಂಜರವರು ಬಿಡುಗಡೆಗೊಳಿಸಿ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಕ್ರಿಕೆಟ್ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜರವರು ರ್‍ಯಾಶ್ ತಂಡದಲ್ಲಿ ಮೈದಾನಕ್ಕಿಳಿದು ಕ್ರಿಕೆಟ್ ಆಡಲಿದ್ದಾರೆ. ಈಗಾಗಲೇ ತಂಡದ ಆಟಗಾರರಿಗೆ ಶಾಸಕರು ಜೊತೆಯಾಗಿ ಕ್ರಿಕೆಟ್ ಆಡುತ್ತಿರುವುದು ಖುಷಿ ನೀಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಕ್ರಿಕೆಟ್ ಪಂದ್ಯಾವಳಿಯು ಎರಡು ದಿನಗಳ ಕಾಲ ನಡೆಯಲಿದ್ದು ವಿಶೇಷವಾಗಿ ಪಡಂಗಡಿಯ 40ವರ್ಷ ಮೇಲ್ಪಟ್ಟ ಮಾಜಿ ಆಟಗಾರರಿಗೂ ಲೆಜೆಂಡ್ಸ್ ಟ್ರೋಫಿ ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸಂತೋಷ್ ಕುಮಾರ್ ಜೈ‌ನ್ ಪಡಂಗಡಿ, ವಿತೇಶ್ ಕುಮಾರ್ ಜೈನ್, ಆಸಿದ್, ಸುಕೇಶ್ ಪೂಜಾರಿ, ಅಶ್ವಿತ್ ಮೂಲ್ಯ, ಪ್ರಶಾಂತ್ ಮೂಲ್ಯ, ಉಮೇಶ್ ಪೂಜಾರಿ, ಆಸೀಫ್ ಮೊದಲಾದವರು ಉಪಸ್ಥಿತರಿದ್ದರು.

Related posts

ಅ.28 : ಈ ವರ್ಷದ ಕೊನೆಯ ‘ಚಂದ್ರಗ್ರಹಣ’ : 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ

Suddi Udaya

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರರ 2ನೇ ವರ್ಷದ ಪುಣ್ಯಸ್ಮರಣೆ ;ಶ್ರೀ ಗುರುದೇವ ಸಹಕಾರಿ ಸಂಘ ಮತ್ತು ಶ್ರೀ ಗು.ನಾ.ಸ್ವಾ.ಸೇ ಸಂಘದಿಂದ ಸಿಯೋನ್ ಆಶ್ರಮದಲ್ಲಿ ಆಚರಣೆವಸಂತ ಬಂಗೇರರು ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು: ಭಗೀರಥ ಜಿ

Suddi Udaya

ನಾವೂರು: ನಮನ ಟ್ರೇಡರ್‍ಸ್ ಶುಭಾರಂಭ

Suddi Udaya

ಅ.12: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಆಚರಣೆಯ ಪ್ರಯಕ್ತ ಗ್ರಾಹಕರ ಸಮಾವೇಶ ಮತ್ತು ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯ ಬಾಲಕ ಬಾಲಕಿಯರ ನೂತನ ಶೌಚಾಲಯದ ಹಸ್ತಾಂತರ

Suddi Udaya

ಉಜಿರೆ ಶ್ರೀ ವನದುರ್ಗಾ ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ದುರ್ಗಾಪೂಜೆ, ಆಶ್ಲೇಷ ಬಲಿ, ರಂಗಪೂಜೆ

Suddi Udaya
error: Content is protected !!