September 6, 2026
ಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್ ಕಾರ್ಯಕ್ರಮ

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಶ್ರವಣ ಮೌಲ್ಯಮಾಪನ ಮತ್ತು ಶ್ರವಣ ಸಾಧನ ಪ್ರೋಗ್ರಾಮಿಂಗ್ ಕಾರ್ಯಕ್ರಮವನ್ನು
ನಡೆಸಲಾಯಿತು.

ಕಾರ್ಯಕ್ರಮವನ್ನು ಶ್ರವಣಶಾಸ್ತ್ರಜ್ಞ ಮತ್ತು ಐಡಿಯಲ್ ಸ್ಪೀಚ್ ಮತ್ತು ಹಿಯರಿಂಗ್ ಸೊಲ್ಯೂಷನ್ಸ್ ನ ಸಂಸ್ಥಾಪಕ ರಿತೇಶ್ ಗೋನ್ಸಾಲ್ವಿಸ್ ನಡೆಸಿಕೊಟ್ಟರು. ಶ್ರವಣ ದೋಷವುಳ್ಳ ಮಕ್ಕಳ ಶ್ರವಣ ಸಾಮರ್ಥ್ಯವನ್ನು ಗುರುತಿಸುವುದು ಮತ್ತು ಅಗತ್ಯವಾದ ಶ್ರವಣ ಸಾಧನ ಪ್ರೋಗ್ರಾಮಿಂಗ್ ಹಾಗೂ ಫಿಟ್ಟಿಂಗ್ ಗಳನ್ನು ಒದಗಿಸುವುದು ಹಾಗೂ ಶ್ರವಣದೋಷವಿರುವ ಮಕ್ಕಳನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ಹಸ್ತಕ್ಷೇಪದ ಮೂಲಕ ಮಕ್ಕಳ ಸಮಸ್ಯೆಯನ್ನು ಬಗೆಹರಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಕಾರ್ಯಕ್ರಮದಲ್ಲಿ ಒಟ್ಟು 05 ಮಕ್ಕಳಿಗೆ ಶ್ರವಣ ಮೌಲ್ಯಮಾಪನವನ್ನು ನಡೆಸಿ, ಶ್ರವಣ ದೋಷವಿರುವ 03 ವಿಶೇಷ ಚೇತನ ಮಕ್ಕಳಿಗೆ ದಾನಿಯೊಬ್ಬರಿಂದ ನೀಡಲ್ಪಟ್ಟ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು.
ಶಾಲಾ ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್ ಥೆರಪಿಸ್ಟ್ ರಕ್ಷಾ ಅರುಣ್ ಪೂಜಾರಿ ಹಾಗೂ ಎಮ್.ವಿ.ಶೆಟ್ಟಿ ಕಾಲೇಜು ಮಂಗಳೂರು ಇಲ್ಲಿನ ಮೂವರು ಇಂಟರ್ನ್ಸ್ಗಳಾದ ಕಾವೇರಿ ಮತ್ತು ಶಿರ್ಲಿ ಉಪಸ್ಥಿತರಿದ್ದರು.

Related posts

ಅ.3 -13: ಉಪ್ಪಿನಂಗಡಿ ಸವಿ ಫೂಟ್ ವೆರ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

Suddi Udaya

ಕಣಿಯೂರು ನಲ್ಲಿ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಅಂಚೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Suddi Udaya

ಚಿನ್ನಯ್ಯನಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಸಿ.ಎಂ ಮತ್ತು ಡಿಜಿಪಿಗೆ ಮನವಿ ನೀಡಿದ ಜಯಂತ್ ಟಿ

Suddi Udaya

ಉಜಿರೆ: ಸುಶೀಲಾ ಬಾಯಿ ಮರಾಠೆ ಸಂಸ್ಮರಣೆ: ಕವಿಗೋಷ್ಠಿ ಕಾರ್ಯಕ್ರಮ

Suddi Udaya

ಮಾಲಾಡಿ: ಕಾರು ಮತ್ತು ಬೈಕ್ ನಡುವೆ ಅಪಘಾತ : ಬೈಕ್ ಸವಾರನಿಗೆ ಗಾಯ

Suddi Udaya
error: Content is protected !!