23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಂಪೋರಿಯಲ್ಲಿ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಳ್ತಂಗಡಿ ಸ್ಥಳೀಯ ಸಂಸ್ಥೆ

ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ದಕ್ಷಿಣ ಕನ್ನಡ ಇವರು ಆಯೋಜಿಸಿದ ಕಬ್ ಬುಲ್ ಬುಲ್, ಸ್ಕೌಟ್ ಗೈಡ್ , ರೋವರ್ ರೇಂಜರ್ಸ್ ಕ್ಯಾಂಪೋರಿ ಉತ್ಸವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಬ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್, ರೋವರ್ ರೇಂಜಸ್ ಭಾಗವಹಿಸಿ, ಸ್ಥಳೀಯ ಸಂಸ್ಥೆವಾರು ನಡೆಸಿದಂತಹ ಸ್ಪರ್ಧೆಗಳಲ್ಲಿ ಹಲವು ಪ್ರಶಸ್ತಿ ಗಳನ್ನು ಪಡೆದು ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡರು.

ಸ್ಥಳೀಯ ಸಂಸ್ಥೆಗೆ ನೀಡಿದ ಕೋಟಾದನ್ವಯ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಸ್ಕೌಟ್ ಗೈಡ್ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಸಾರಥ್ಯದಲ್ಲಿ, ಅಮಿತಾನಂದ ಹೆಗ್ಡೆ, ತ್ರಿಶಾಲ ರವರ ಮಾರ್ಗದರ್ಶನದಲ್ಲಿ ಸುಮಲತಾ, ಕಾದಂಬರಿ, ಅಮೃತ ವಿ ಶೆಟ್ಟಿ, ಪ್ರಮೀಳಾ ಎನ್, ಸೇವಂತಿ, ಸುವೀನಾ, ವಿನ್ಸೆಂಟ್ ಸಿಕ್ವೇರಾ, ಉಮಾ, ಪ್ರಸಾದ್, ಕೃಷ್ಣ ಕಿರಣ್, ಮಮತಾ, ಭವ್ಯ ಸ್ಕೌಟ್ ಗೈಡ್ ಶಿಕ್ಷಕ ಶಿಕ್ಷಕಿಯರು ಭಾಗವಹಿಸಿದ್ದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್‌ಸಿ ಶಾಲೆ ಉಜಿರೆ, ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಸರಕಾರಿ ಪ್ರೌಢಶಾಲೆ ಬಂಗಾಡಿ, ಸೈಂಟ್ ತೆರೇಸಾ ಬೆಳ್ತಂಗಡಿ, ಪದವಿಪೂರ್ವ ಕಾಲೇಜು ಮುಂಡಾಜೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಉಜಿರೆಯ ವಿದ್ಯಾರ್ಥಿಗಳು ಜಿಲ್ಲಾ ಕ್ಯಾಂಪೂರಿಯಲ್ಲಿ ಭಾಗವಹಿಸಿದ್ದರು.

Related posts

ಮುಂಡಾಜೆ: ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ

Suddi Udaya

ಲಾಯಿಲದಲ್ಲಿ ಕೃಷಿ/ತೋಟಗಾರಿಕೆ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ಸೆಂಟರ್ ಮಳಿಗೆ ಉದ್ಘಾಟನೆ

Suddi Udaya

ಕುವೆಟ್ಟು :ಶ್ರೀ ಗುರುನಾರಾಯಣ‌ ಸ್ವಾಮಿ ಸೇವಾ‌ ಸಂಘ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಕುವೆಟ್ಟು ಗ್ರಾಮ ಸಮಿತಿಯಿಂದ  ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ

Suddi Udaya

ರಾಜ್ಯಮಟ್ಟದ ಡಿಸ್ಕಸ್ ಥ್ರೋ: ಬಳಂಜದ ಸುಷ್ಮಾ ಬಿ ಪೂಜಾರಿ ಪ್ರಥಮ

Suddi Udaya

ಕೊಕ್ಕಡ, ಅರಸಿನಮಕ್ಕಿಯಲ್ಲಿ ಹರೀಶ್ ಪೂಂಜರ ಬಿರುಸಿನ ಪ್ರಚಾರ ಸಭೆ

Suddi Udaya

ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಲಸಿಕೆ

Suddi Udaya
error: Content is protected !!