27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ ಬಾಲಕನ ಅಸಹಜ ಸಾವು: ವಿ.ಹಿಂ.ಪ ದಿಂದ ನಾಳ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಬೆಳ್ತಂಗಡಿ: ವಿಶ್ವ ಹಿಂದೂ ಪರಿಷದ್, ಬಜರಂಗದಳ‌ ಬೆಳ್ತಂಗಡಿ ಪ್ರಖಂಡದ ವತಿಯಿಂದ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ, ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಅವರ ಅಸಹಜ ಸಾವು ಕುರಿತು ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕುವಂತೆ ಜ.20ರಂದು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದೇವಸ್ಥಾನದ ಪ್ರದಾನ ಅರ್ಚಕ ವೇ.ಮೂ.‌ರಾಘವೇಂದ್ರ ಅಸ್ರಣ್ಣ ಅವರ ಉಪಸ್ಥಿತಿಯಲ್ಲಿ 108 ಬಾರಿ ಶ್ರೀ ದುರ್ಗಾದೇವಿ ನಾಮ ಜಪ ಮಾಡಿ, ಅಪರಾಧಿಗಳು ಬೇಗ ಪತ್ತೆಯಾಗುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ , ವಿಹಿಪಂ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಮಾತನಾಡಿ, ಜ. 14ರ ಮಕರ ಸಂಕ್ರಾತಿಯ ದಿನ ಬೆಳಗ್ಗೆ ಧನು ಪೂಜೆಗೆಂದು ಹೊರಟಿದ್ದ ಸಂದರ್ಭದಲ್ಲಿ ಮನೆಯಿಂದ ಕೂಗಳತೆಯ ದೂರದ ಕೆರೆಯಲ್ಲಿ ಅನುಮಾನಸ್ಪದವಾಗಿ ಶವ ಸಿಕ್ಕಿರುತ್ತದೆ.

ಈಗಾಗಲೇ ದ.ಕ. ಜಿಲ್ಲೆ ವರಿಷ್ಠಾಧಿಕಾರಿ ದಕ್ಷ ಅಧಿಕಾರಿ ಅರುಣ್ ಅವರ ಮಾರ್ಗದರ್ಶನದಲ್ಲಿ ಜಿಲ್ಲೆ ಹಾಗೂ ತಾಲೂಕಿನ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಅಮಾಯಕ ಬಾಲಕನ ಅಸಹಜ ಸಾವಿನಿಂದ ಮನೆಯವರು ಹಾಗೂ ಊರವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಅಂತ್ಯ ಹಾಡಿ ಮನೆಯವರಿಗೆ ನ್ಯಾಯ ಸಿಗುವಂತೆ ಆಗ್ರಹಿಸಿದರು.

ವಿಹಿಂಪ ಜಿಲ್ಲಾ ಸಹಸಂಯೋಜಕ ದಿನೇಶ್ ಚಾರ್ಮಾಡಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಗಣೇಶ್ ಕಳೆಂಜ, ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಸಹ ಕಾರ್ಯದರ್ಶಿ ಸತೀಶ್ ಮರಕಡ, ಬಜರಂಗದಳ ಸಂಯೋಜಕ
ಪ್ರಭಾಕರ ಮುದಲಡ್ಕ, ಸಹ ಸಂಯೋಜಕ ಮೋಹನ್ ಕಂಚೇಲು ನಡ, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಚಂದ್ರಕಾಂತ್ ನಿಡ್ಡಾಜೆ, ರಾಜೇಶ್ ಪೆಂರ್ಬುಡ, ದಯರಾಜ್ ಹೀರ್ಯ, ಕರುಣಾಕರ ಕೊರಂಜ, ಸದಾನಂದ ಶೆಟ್ಟಿ, ಗಣೇಶ್ ನಾಳ, ರಂಜನ್ ಮುದ್ದುಂಜ, ಗಣೇಶ್ ರಾವ್ ಗೇರುಕಟ್ಟೆ, ಪುರಂದರ ಗೇರುಕಟ್ಟೆ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಮನೀಶ್ ಮಚ್ಚಿನ, ಸುಕೇಶ್, ದಾಮೋದರ್, ಗಿರೀಶ್ ಗೇರುಕಟ್ಟೆ, ಭುವನೇಶ್ ಗೇರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Related posts

ಅಗ್ನಿವೀರ್‌ ತರಬೇತಿ ಪೂರೈಸಿ ಇಂದು ಊರಿಗೆ ಆಗಮಿಸಲಿರುವ ರೆಖ್ಯದ ರಂಜಿತ್

Suddi Udaya

ಪೆರೋಡಿತ್ತಾಯಕಟ್ಟೆ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ ರಚನೆ

Suddi Udaya

ನಾವರ ದೇವಸ್ಥಾನದ ಬಳಿ ರಬ್ಬರ್ ತೋಟಕ್ಕೆ ಬೆಂಕಿ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ಸಮಿತಿ ವಿನೂತನ ಮಾದರಿಯಲ್ಲಿ ತನ್ನ ತಾಲೂಕು ಅಧಿವೇಶನದ ಆಹ್ವಾನ ಪತ್ರಿಕೆ ಅನಾವರಣ

Suddi Udaya

ಉಚಿತ ಬಿದಿರು ಸಸಿಗಳ ವಿತರಣೆ; ಅರ್ಜಿ ಆಹ್ವಾನ

Suddi Udaya

ನ.14: ಮಡಂತ್ಯಾರು ಸಹಕಾರಿ ಸಂಘದ ನೇತೃತ್ವದಲ್ಲಿ 72ನೇ ಸಹಕಾರಿ ಸಪ್ತಾಹ, ಪೂರ್ವಭಾವಿ ಸಭೆ

Suddi Udaya
error: Content is protected !!