27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮೃತ ಬಾಲಕ ಸುಮಂತ್ ಮನೆಗೆ ವಿಹಿಂಪ ಪ್ರಮುಖರ ಭೇಟಿ

ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ, ಗೇರುಕಟ್ಟೆ ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ ಅವರ ಮನೆಗೆ ಜ.20ರಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆ ಹಾಗೂ ಬೆಳ್ತಂಗಡಿ ಪ್ರಖಂಡದ ಪ್ರಮುಖರು ನಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್ ಮತ್ತು ಮನೆಯವರಿಗೆ ಸಾಂತ್ವನ ಹೇಳಿ, ಯಾವುದೇ ಸಮಯದಲ್ಲೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಅಲ್ಲದೆ ವಿಶ್ವ ಹಿಂದೂ ಪರಿಷದ್, ಬಜರಂಗದಳ‌ ಬೆಳ್ತಂಗಡಿ ಪ್ರಖಂಡದ ವತಿಯಿಂದ ಸುಮಂತ್ ನ ಅಸಹಜ ಸಾವು ಕುರಿತು ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕುವಂತೆ ಒತ್ತಾಯಿಸಿದ್ದೇವೆ ಎಂದು ಭೇಟಿ ನೀಡಿದ ಸಂದರ್ಭ ಪ್ರಮುಖರು ತಿಳಿಸಿದರು.

ಈ ಸಂದರ್ಭದಲ್ಲಿ ವಿಹಿಪಂ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಹಿಂಪ ಜಿಲ್ಲಾ ಸಹಸಂಯೋಜಕ್
ದಿನೇಶ್ ಚಾರ್ಮಾಡಿ, ಜಿಲ್ಲಾ ಗೋ ರಕ್ಷಾ ಪ್ರಮುಖ್ ಗಣೇಶ್ ಕಳೆಂಜ, ಬೆಳ್ತಂಗಡಿ ಪ್ರಖಂಡ ಕಾರ್ಯದರ್ಶಿ ರಮೇಶ್ ಧರ್ಮಸ್ಥಳ, ಸಹ ಕಾರ್ಯದರ್ಶಿ ಸತೀಶ್ ಮರಕಡ, ಬಜರಂಗದಳ ಸಂಯೋಜಕ ಪ್ರಭಾಕರ ಮುದಲಡ್ಕ, ಸಹ ಸಂಯೋಜಕ
ಮೋಹನ್ ಕಂಚೇಲು ನಡ, ಪ್ರಮುಖರಾದ ಗಣೇಶ್ ರಾವ್ ಗೇರುಕಟ್ಟೆ, ಪುರಂದರ ಗೇರುಕಟ್ಟೆ, ಯೋಗೀಶ್ ಅಡ್ಡಕೊಡಂಗೆ, ಭುವನೇಶ್ ಗೇರುಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Related posts

ಮಾಟ, ಮಂತ್ರ ನಿವಾರಣೆ ಚಿಕಿತ್ಸಾ ನೆಪದಲ್ಲಿ ಮಹಿಳೆಗೆ ವಂಚನೆ ಆರೋಪ: ಗುರುವಾಯನಕೆರೆ ನಿವಾಸಿ ಕೂಳೂರಿನ ಉಸ್ತಾದ್ ಅಬ್ದುಲ್ ಕರೀಮ್ ಬಂಧನ

Suddi Udaya

ವೇಣೂರು ಸ. ಪ.ಪೂ. ಕಾಲೇಜಿಗೆ ಹಳೆವಿದ್ಯಾರ್ಥಿಗಳಿಂದ ಹೊಸ ಪ್ರೊಜೆಕ್ಟರ್ ಕೊಡುಗೆ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಫೆ.7 : ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ

Suddi Udaya

ಕೊಕ್ಕಡ: ಸ್ವಚ್ಛತೆಯೇ ಸೇವೆ, ಶ್ರಮದಾನ, ಸಾಧಕರಿಗೆ ಸನ್ಮಾನ

Suddi Udaya

ಕನ್ಯಾಡಿಯಲ್ಲಿ ಜನಾರ್ದನ ರೆಸಿಡೆನ್ಸಿ ಉದ್ಘಾಟನೆ

Suddi Udaya
error: Content is protected !!