September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾಲಾಡಿ ನವುಂಡ ಪರಿಸರದಲ್ಲಿ ಎರಡು ಚಿರತೆಗಳು ಪತ್ತೆ: ನಾಯಿಯ ಮೇಲೆ ದಾಳಿ: ನಾಗರಿಕರಲ್ಲಿ ಸೃಷ್ಟಿಯಾದ ಆತಂಕ

ಮಡಂತ್ಯಾರು: ಇಲ್ಲಿಯ ಮಾಲಾಡಿ ಗ್ರಾಮದ ಅಂತರ, ನವುಂಡ ದೇವಸ್ಥಾನದ ಸಮೀಪ ಜ.20 ರಂದು ರಾತ್ರಿ ಎರಡು ಚಿರತೆಗಳು ರಸ್ತೆ ಬದಿ ಕಂಡುಬಂದಿದ್ದು, ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ್ದು, ನಾಗರಿಕರಲ್ಲಿ ಆತಂಕ ಎದುರಾಗಿದೆ.

ಸ್ಥಳೀಯರೋರ್ವರು ಬೈಕ್‌ನಲ್ಲಿ ರಾತ್ರಿ ಹೋಗುತ್ತಿರುವಾಗ ರಸ್ತೆ ಬದಿ ಎರಡು ಚಿರತೆಗಳು ಇರುವುದು ಕಂಡು ಬಂದಿದೆ. ದೊಡ್ಡ ಚಿರತೆ ಮತ್ತೊಂದು ಮರಿ ಚಿರತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿರತೆಗಳು ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ನಾಯಿ ರಸ್ತೆಯಲ್ಲೇ ಸತ್ತು ಬಿದ್ದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಇಲಾಖಾಧಿಕಾರಿಗಳು ರಾತ್ರಿಯೇ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದ್ದಾರೆ.

ಮಾಲಾಡಿ ಪರಿಸರದಲ್ಲಿ ಚಿರತೆ ಇರುವ ಸುದ್ದಿ ತಿಳಿದು ನಾಗರಕರಿಗೆ ಭಯ ಭೀತರಾಗಿದ್ದಾರೆ. ಮಾಲಾಡಿ ಗ್ರಾಮದ ನವುಂಡ, ಅಂತರ ಪರಿಸರದ ನಾಗರಿಕರು, ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳು ಜಾಗೃತಿ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Related posts

ರೂ.1.00 ಕೋಟಿ ವೆಚ್ಚದಲ್ಲಿ ಬಳಂಜ- ಸುದೆಗುಂಡಿ ಸಂಪರ್ಕ ರಸ್ತೆ ಕಾಂಕ್ರೀಟಿಕರಣ: ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ:ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಅಭಿನಂದಿಸಿದ ಗ್ರಾಮಸ್ಥರು

Suddi Udaya

ನಾವೂರು ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಭಗವದ್ಗೀತಾ ಸ್ಪರ್ಧೆ: ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿನಿ ಅದ್ವಿತಿ ರಾವ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಮಲವಂತಿಗೆ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಮಡಂತ್ಯಾರು ಹೈಸ್ಕೂಲ್ ರೀಯೂನಿಯನ್ ವತಿಯಿಂದ ಇತ್ತೀಚೆಗೆ ನಿಧನರಾದ ಡೇವಿಡ್ ಡಿಸೋಜಾರಿಗೆ ಶ್ರದ್ಧಾಂಜಲಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ‌ ಅಧ್ಯಕ್ಷ ರಂಜಿತ್ ಹೆಚ್.ಡಿ ಮತ್ತು ತಂಡದ ಪದಪ್ರದಾನ ಸಮಾರಂಭ

Suddi Udaya
error: Content is protected !!