37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂಗಾಡಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ತ್ರಿಶಲ ಜೈನ್ ಅವರಿಗೆ ಭಾರತ್ ಸ್ಕೌಟ್ ಗೈಡ್ ಎ.ಎಲ್.ಟಿ ಅರ್ಹತೆ

ಬೆಳ್ತಂಗಡಿ: ಸ. ಉ. ಪ್ರಾ. ಶಾಲೆ ಬಂಗಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿಯಾದ ತ್ರಿಶಲ ಜೈನ್ ರವರು ಭಾರತ್‌ ಸ್ಕೌಟ್ & ಗೈಡ್ ಇದರ ಗೈಡ್ ಕ್ಯಾಪ್ಟನ್ ರಾಗಿ ಸೇವೆ ಸಲ್ಲಿಸುತ್ತಿದ್ದು, ಇವರು ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ 65ನೇ ಸಹಾಯಕ ಲೀಡರ್ (ALT) ತರಬೇತಿದಾರರ ತರಬೇತಿಯಲ್ಲಿ ಭಾಗವಹಿಸಿ 2025-26 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪೋರಿಯಲ್ಲಿ ಇವರಿಗೆ ALT ಪದವಿಯ ಪ್ರಮಾಣ ಪತ್ರ ಹಾಗೂ ಪ್ಯಾಚ್ಮೆಂಟ್ ನೀಡಿ ಗೌರವಿಸಲಾಗಿದೆ.

ಇವರು ಸುಮಾರು 25 ವರ್ಷಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಂಸ್ಥೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ಜ. 30 ರಿಂದ ಫೆ 1 ವರೆಗೆ ಒರಿಸ್ಸಾದ ಭುವನೇಶ್ವರದಲ್ಲಿ ನಡೆಯುವ ರಾಜ್ಯಮಟ್ಟದ LT/ALT ತರಬೇತಿದಾರರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಇವರು ಭಾರತ್ ಸ್ಕೌಟ್ಸ್& ಗೈಡ್ಸ್ ನ ತರಬೇತಿಯಾದ ಬೇಸಿಕ್ 2001ರಲ್ಲಿ ಪಿಲಿಕುಳ ಮಂಗಳೂರು, ಎಡ್ವಾನ್ಸ್ 2005 ರಲ್ಲಿ ಸಿ.ಎಸ್.ಐ ಬಾಲಿಕಾಶ್ರಮ ಮುಲ್ಕಿ, ಹೆಚ್ ಡಬ್ಲ್ಯು ಬಿ 2005ರಲ್ಲಿ ಕೊಂಡಜ್ಜಿ ದಾವಣಗೆರೆ, ಪ್ರಿ ಎ.ಎಲ್.ಟಿ 2018 ರಲ್ಲಿ ದೊಡ್ಡಬಳ್ಳಾಪುರ, 2025ರಲ್ಲಿ ALT ರಾಷ್ಟ್ರೀಯ ತರಬೇತಿ ಕೇಂದ್ರ ಪಚಿಮರಿ ಮಧ್ಯಪ್ರದೇಶದಲ್ಲಿ ಪಡೆದುಕೊಂಡಿರುತ್ತಾರೆ.
ಇವರ ಪತಿ ಜಯರಾಜ್ ಜೈನ್ ಅವರು ಸ.ಉ.ಹಿ.ಪ್ರಾ. ಶಾಲೆ ಓಡಿಲ್ನಾಳದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ತಾ. ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related posts

ಮೊಗ್ರು : ಅಲೆಕ್ಕಿ ಶ್ರೀರಾಮ ಶಿಶುಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ರೋಟರಿ ಕ್ಲಬ್ ವತಿಯಿಂದ ಅಮೂಲ್ ಸಾವಯುವ ಗೊಬ್ಬರದ ಪ್ರಾತ್ಯಕ್ಷಿಕೆ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: 13ನೇ ವರ್ಷದ ಪಾದಯಾತ್ರೆಗೆ ಚಾಲನೆ: ಬೃಹತ್ ಸಂಖ್ಯೆಯಲ್ಲಿ ಭಕ್ತರು ಭಾಗಿ : ಭಜನಾ ತಂಡಗಳಿಂದ ವಿಶೇಷ ಕುಣಿತ ಭಜನೆ

Suddi Udaya

ಎಕ್ಸೆಲ್ ಶೈಕ್ಷಣಿಕ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭೆಗಳಿಗೆ ಬೆಳಕು ನೀಡುವ ವಿದ್ಯಾರ್ಥಿವೇತನ ವಿತರಣೆ

Suddi Udaya

ಶಿರ್ಲಾಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಹಾಗೂ ಜಂಟಿ ಸಂಘಟನೆ ವತಿಯಿಂದ ಆಟಿದ ಅಟೀಲ್ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಕರಾಟೆ ಸ್ಪರ್ಧೆ: ಬೆಳಾಲು ಶ್ರೀ ಧ.ಮಂ.ಅ.ಪ್ರೌ. ಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!