25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೋಡುಸ್ಥಾನ ರಸ್ತೆಗೆ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆ ರಸ್ತೆ ಎಂದು ನಾಮಕರಣ

ಧರ್ಮಸ್ಥಳ :- ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಜೋಡುಸ್ಥಾನ ರಸ್ತೆಯನ್ನು ಸಾರ್ವಜನಿಕರ ಬೇಡಿಕೆಯಂತೆ ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ರಸ್ತೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಡಿ ಹರ್ಷೇಂದ್ರ ಕುಮಾರ್ ರವರು ನಾಮಫಲಕವನ್ನು ಅನಾವರಣ ಮಾಡಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಪರಮೇಶ್ವರ್, ಉಪಾಧ್ಯಕ್ಷರಾದ ಪಿ ಶ್ರೀನಿವಾಸ್ ರಾವ್, ಸದಸ್ಯರಾದ ಮುರಳಿಧರ ದಾಸ್, ದಿನೇಶ್ ರಾವ್, ರಾಮಚಂದ್ರರಾವ್, ರವಿಕುಮಾರ್, ಶ್ರೀಮತಿ ಸುನಿತಾ ಶ್ರೀಧರ್, ಶ್ರೀಮತಿ ಸುನಿತಾ ಡಿಕೆ, ಸುಧಾಕರ, ಮಾಜಿ ಪಂಚಾಯತ್ ಸದಸ್ಯರಾದ ಲಕ್ಷ್ಮಿ ನಾರಾಯಣ್ ರಾವ್, ಶ್ರೀ ಭುಜಬಲಿ, ಅರುಣ್ ಕುಮಾರ್, ಊರಿನ ಪ್ರಮುಖರಾದ ಸುಬ್ರಮಣ್ಯ ಪ್ರಸಾದ್, ಶ್ರೀ ಜಗದೀಶ್ ಜೈನ್, ಶ್ರೀ ಅಭಿಷೇಕ್ ಸಾರ್ವಜನಿಕರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಶ್ರೀಮತಿ ವಂದನ ಪ್ರಶಾಂತ್ ಬಲ್ಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಪರಿವಾರ ದೈವಗಳಿಗೆ ಸಂಕ್ರಮಣ ಪೂಜೆ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ಮುಂಬಯಿಯಲ್ಲಿ ಟೀಮ್ ಯುವ ಬ್ರಿಗೇಡ್ ನಿಂದ ಶಾಸಕ‌ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ನಾರಾವಿ ವಲಯದ ದೇಜಮ್ಮರಿಗೆ ವೀಲ್ ಚೇರ್ ವಿತರಣೆ

Suddi Udaya

ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿಜೈನ್ ರಿಗೆ ಸನ್ಮಾನ

Suddi Udaya

ಸೌಜನ್ಯ ಹೋರಾಟದ ನೆಪದಲ್ಲಿ ತೇಜೋವಧೆ ಸರಿಯಲ್ಲ : ಭಾಸ್ಕರ್ ಧರ್ಮಸ್ಥಳ

Suddi Udaya
error: Content is protected !!