32.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂವತ್ಸರಗಳ ಸಂಭ್ರಮಾಚರಣೆ:ನೂತನ ರಂಗ ಮಂದಿರ ಲೋಕಾರ್ಪಣೆ, ಸ್ವಾಗತ ದ್ವಾರ ಉದ್ಘಾಟನೆ, ಇಂಟರ್ ಲಾಕ್ ಅಳವಡಿಕೆ ಹಸ್ತಾಂತರ:ಸೇವೆ ಸಲ್ಲಿಸಿದ್ದ ಗುರುಗಳಿಗೆ ಗುರು ವಂದನೆ – ಆಕಷ೯ಕ ಮೆರವಣಿಗೆ

ನಡ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡ ಇದರ ಶತ ಸಂವತ್ಸರಗಳ ಸಂಭ್ರಮಾಚರಣೆ ಅಂಗವಾಗಿ ರಂಗ ಮಂದಿರ ಲೋಕಾರ್ಪಣೆ, ಸ್ವಾಗತ ದ್ವಾರ ಉದ್ಘಾಟನೆ, ಚಿಣ್ಣರ ಕಲರವ, ಹಳೇ ವಿದ್ಯಾರ್ಥಿಗಳ ಸಮಾಗಮ, ಇಂಟರ್ ಲಾಕ್ ಅಳವಡಿಕೆ ಹಸ್ತಾಂತರ ಕಾರ್ಯಕ್ರಮ ಜ.25 ರಂದು ವೈಭವ ಪೂರ್ಣವಾಗಿ ಜರುಗಿತು.

ರಂಗ ಮಂದಿರವನ್ನು ತುಳು ಕೂಟ ಬರೋಡ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಲೋಕಾರ್ಪಣೆ ಮಾಡಿದರು, ಸ್ವಾಗತ ದ್ವಾರದ ಉದ್ಘಾಟನೆಯನ್ನು ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಆರಿಗ ನೆರವೇರಿಸಿದರು. ಶತಮಾನೋತ್ಸವ ಸಭಾ ಕಾರ್ಯಕ್ರಮವನ್ನು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜಾ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಶಾಲಾ ಸಂಸ್ಥಾಪಕ ಮನೆತನದ ಧನಂಜಯ ಅಜ್ರಿ, ನಾವೂರು ಆರೋಗ್ಯ ಕ್ಲಿನಿಕ್ ನ ಡಾ. ಪ್ರದೀಪ್, ಜಮಾಲಾಬಾದ್ ಮಸೀದಿ ಧಮ೯ಗುರು ಮೌಲಾನಾ ಸೈಯದ್ ಹಕೀಲ್ ಶಾ, ಮಂಜೊಟ್ಟಿ ಚರ್ಚ್ ಧರ್ಮಗುರು ಫಾ|ಪಾವ್ಲ್ ಸೆಬಾಸ್ಟಿಯನ್ ಡಿ.ಸೋಜ, ಜಿ.ಪಂ. ಮಾಜಿ ಸದಸ್ಯ ರಾಜಶೇಖರ ಅಜ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಬೆಳ್ತಂಗಡಿ ವಕೀಲರ ಸಂಘ ಅಧ್ಯಕ್ಷ ಅಲೋಶಿಯಸ್ ಲೋಬೋ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯಶೋಧರ ಭಾಗವಹಿಸಿದ್ದರು.

ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಮುನಿರಾಜ ಅಜ್ರಿ, ಶಾಲಾ ಮುಖ್ಯೋಪಾಧ್ಯಾಯಿನಿ ಪುಷ್ಪಾ, ಕೋಶಾಧಿಕಾರಿ ಸಯ್ಯಾದ್ ಹಬೀಬ್ ಸಾಹೇಬ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರಣೇಂದ್ರ ಕುಮಾರ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜನಾರ್ದನ ನಾಯ್ಕ, ವಿದ್ಯಾರ್ಥಿ ನಾಯಕ ಚಿರಾಗ್ ಉಪಸ್ಥಿತರಿದ್ದರು.

ಬೆಳಿಗ್ಗೆ ಆಕಷ೯ಕ ಮೆರವಣಿಗೆಗೆ ಸುಯ೯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಎಸ್. ಚಾಲನೆ ನೀಡಿದರು. ಗುರುವಂದನೆ ಕಾರ್ಯಕ್ರಮದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಿಕ್ಷಕರನ್ನು ಗೌರವಿಸಲಾಯಿತು. 70 ವಷ೯ ಮೇಲ್ಪಟ್ಟ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಶ್ರದ್ಧಾ ಸ್ವಾಗತಿಸಿದರು. ಯತೀಶ್ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಕಿರಣ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Related posts

ಮಾದಕ ವ್ಯಸನದ ಬಗ್ಗೆ ಜನಜಾಗೃತಿ ಮೂಡಿಸುವ ಮಹತ್ವದ ಉದ್ದೇಶ- ಉಜಿರೆಯಲ್ಲಿ ಮೊದಲ ಬಾರಿಗೆಯಶಸ್ವಿಯಾಗಿ ನಡೆದ ರೈನಥಾನ್

Suddi Udaya

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಕಾರ್ಯ ನಿರ್ವಹಿಸಿರುವ ನಾಳದ ಶಿಲ್ಪಿ ಜಯಚಂದ್ರ ಆಚಾರ್ಯರವರಿಗೆ ಬೆಳ್ತಂಗಡಿ ಗುರು ಸೇವಾ ಪರಿಷತ್ ಘಟಕದಿಂದ ಗೌರವಾರ್ಪಣೆ

Suddi Udaya

ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಬ್ರಹ್ಮಕಲಶಾಭಿಷೇಕ – ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಲಾಯಿಲ:ಉಮ್ಮಣ್ಣ ಗೌಡ ನಿಧನ

Suddi Udaya

ಕರ್ನಾಟಕ ಮುಸ್ಲಿಮ್ ಜಮಾ ಅತ್ ನ (ಕೆ.ಎಂ.ಜೆ) ಗುರುವಾಯನಕೆರೆ ಸರ್ಕಲ್ ನ ವಾರ್ಷಿಕ ಮಹಾಸಭೆ

Suddi Udaya

ಬುರುಡೆ ಚಿನ್ನಯ್ಯನ ಎರಡನೇ ಪತ್ನಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರು

Suddi Udaya
error: Content is protected !!