ಮಡಂತ್ಯಾರು : ಗಾಂಧಿ ಗ್ರಾಮ ಹಾಗೂ ಅಮೃತ ಗ್ರಾಮ ಪಂಚಾಯತ್ ಪುರಸ್ಕೃತ ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ಅಮೃತ ಉದ್ಯಾನವನ, ಸಂಜೀವಿನಿ ಕಟ್ಟಡ, ಗ್ರಾಮ ಪಂಚಾಯತ್ ಕಲಿಕಾ ಕೇಂದ್ರ, ಬಸವನಗುಡಿ ಜಲ ಜೀವನ್ ಮಿಷನ್ ಕಾಮಗಾರಿ, ಕುಂಜತ್ತೋಡಿ ಶಾಲಾ ಶೌಚಾಲಯ, ಹಚ್ಚಬೆ, ಪದೆಂಜಿಲ, ಮಡಂತಡೆ ರಸ್ತೆ ಕಾಮಗಾರಿಗಳ ಲೋಕಾರ್ಪಣೆ ಹಾಗೂ
ಪ.ಜಾತಿ / ಪ.ಪಂಗಡ ಮತ್ತು ದಿವ್ಯಾಂಗಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣಾ ಸಮಾರಂಭವು ಜ.27ರಂದು ಮಡಂತ್ಯಾರು ಗ್ರಾಮ ಪಂಚಾಯತು ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ರೂಪ ಎ.ಎಸ್ ರವರು ತಿಳಿಸಿದ್ದಾರೆ.











