
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ವತಿಯಿಂದ ತನು ಸ್ಪಂದಿಸದವರ ಮನಸ್ ಸ್ಪಂದಿಸುವ ಕಾರ್ಯಕ್ರಮ ತುಡಿತ ಭಾಗ-4 ಇದಕ್ಕೆ ಇಂದು ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಇದೇ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಬೆಂಗಳೂರಿನ ಐಬಿಎಂನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ದರ್ಶನ್ ಆಗಮಿಸಿದ್ದರು. ಇವರು ತುಡಿತಕ್ಕೆ ಸಂಬಂಧಿಸಿದ ಕಿಟ್ ಅನ್ನು ಮುಖ್ಯೋಪಾಧ್ಯಾಯಿನಿಯವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿಧ್ಯಾರ್ಥಿಗಳಿಗೆ ಸಮಾಜ ಸೇವೆಗೆ ಇದು ಒಂದು ಉತ್ತಮ. ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯನ್ನೂ ಮಾಡಲು ಅನುವು ಮಾಡಿಕೊಟ್ಟಾಗ ಸಮಾಜ ಮುಖಿ ಕೆಲಸಗಳು ಆಗಿ ಸಮಾಜದ ಅಭಿವೃದ್ಧಿ ಆಗುತ್ತದೆ.ಇಂದಿನ ಯುವಜನರು ಇಂತಹ ಸಮಾಜ ಸೇವೆ ಮಾಡಲು ಮುಂದಾಗ ಬೇಕು.ಎಂಬಿತ್ಯಾದಿ ವಿಚಾರಗಳನ್ನು ತಿಳಿಯಪಡಿಸಿದರು.
ಈ ಸಂದರ್ಭದಲ್ಲಿ ತನು ಸ್ಪಂದಿಸದವರ ಮನಸ್ ಸ್ಪಂದಿಸುವ ಹಾಸಿಗೆ ಬಿಟ್ಟು ಮೇಲೆ ಏಳಲೂ ಆಗದಂತಹ 11 ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಹಣ್ಣು ಹಂಪಲು ಹಾಗೂ ಅವರಿಗೆ ಅವಶ್ಯಕತೆ ಇರುವ ಸಣ್ಣ ಪುಟ್ಟ ಕೈಲಾದ ಸಹಾಯವನ್ನು ಮಾಡಿ ಅವರಿಗೆ ಹಾಡು ಹರಟೆ ನೃತ್ಯಗಳಿಂದ ರಂಜಿಸಿ ಅವರಲ್ಲಿ ಜೀವನ ಚೈತನ್ಯ ತುಂಬಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ.ವಿ ಇವರ ಅತ್ಯಂತ ಮುತುವರ್ಜಿಯಿಂದ ಆರಂಭಗೊಂಡ ಈ ವಿಶೇಷ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಪಾಲ್ಗೊಂಡರು.











