37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ: ಸಿಸಿ ಕ್ಯಾಮರದಲ್ಲಿ ದೃಶ್ಯ ಸೆರೆ

ಬೆಳ್ತಂಗಡಿ : ಕಾಡಿನಿಂದ ನಾಡಿಗೆ ಬಂದು ನಡ ಪರಿಸರದ ಸಾರ್ವಜನಿಕರಿಗೆ ಭಯ ಪಡಿಸುತ್ತಿದ್ದ ಚಿರತೆಯನ್ನು ಬೆಳ್ತಂಗಡಿ ಅರಣ್ಯ ಇಲಾಖೆ ಬೋನಿಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕನ್ಯಾಡಿ -1 ಗ್ರಾಮದಲ್ಲಿ ಹಲವು ದಿನಗಳಿಂದ ಸಾರ್ವಜನಿಕರಿಗೆ ಭೀತಿ ಹುಟ್ಟಿಸುತ್ತಿದ್ದ ಚಿರತೆಗಳಲ್ಲಿ ಒಂದು ಚಿರತೆಯನ್ನು ಜ.26 ರಂದು ಬೆಳಗ್ಗಿನ ಜಾವ 1:20 ರ ಸುಮಾರಿಗೆ ಬೋನು ಇಟ್ಟು ಸೆರೆ ಹಿಡಿಯುವಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಕನ್ಯಾಡಿಯ ಮಂಜಪ್ಪ ನಾಯ್ಕ ಎಂಬವರಿಗೆ ಜ.16 ರಂದು ಬೆಳಗ್ಗೆ ಚಿರತೆ ದಾಳಿ ಮಾಡಿ ಕಾಲಿಗೆ ಗಾಯಗೊಳಿಸಿತ್ತು. ಬಳಿಕ ಚಿರತೆ ಬೇಟೆಗಾಗಿ ಅರಣ್ಯ ಇಲಾಖೆ ಬೇರೆ ಬೇರೆ ಸಾರ್ವಜನಿಕರ ಮನವಿಯ ಮೇರೆಗೆ ಇಡಲಾಗಿತ್ತು. ಜ‌.25 ರಂದು ಕನ್ಯಾಡಿಯ ಮಂಜಪ್ಪ ನಾಯ್ಕ ಎಂಬವರ ಮನೆಯ ಪಕ್ಕದಲ್ಲಿ ಬೋನು ಇಟ್ಟು ಅದರೊಳಗೆ ಕೋಳಿಯನ್ನು ಕಟ್ಟಿ ಹಾಕಲಾಗಿತ್ತು. ಈ ಚಿರತೆ ಬೋನಿನ ಒಳಗಡೆ ಹೋಗಿ ವಾಪಸ್ ತಿರುಗುವ ವೇಳೆ ಲಾಕ್ ಅಗಿದೆ. ಚಿರತೆ ಬೋನಿನ ಒಳಗಡೆ ಕೋಳಿಯನ್ನು ಹಿಡಿಯಲು ಹೋಗಿ ಸಿಕ್ಕಿಬಿದ್ದು ಹೊರ ಬರಲು ಒದ್ದಾಡುವ ದೃಶ್ಯ ಅರಣ್ಯ ಇಲಾಖೆ ಇಟ್ಟ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.

ಬೋನಿಗೆ ಬಿದ್ದ ಚಿರತೆಯನ್ನು ಬೆಳ್ತಂಗಡಿ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದ ತಂಡದ ಸಿಬ್ಬಂದಿ ಸುರಕ್ಷಿತವಾಗಿ ಯಾವುದೇ ತೊಂದರೆಯಾಗದಂತೆ ಕಾಡಿಗೆ ತೆಗೆದುಕೊಂಡು ಹೋಗಿ ಬಿಡಲಾಗುತ್ತದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ‌.

Related posts

ರೆಖ್ಯ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು: 6 ಮಂದಿಗೆ ಗಂಭೀರ ಗಾಯ

Suddi Udaya

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಲಾಯಿಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಸಾವು

Suddi Udaya

ಪಡಂಗಡಿ : ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ: ಕನ್ಯಾಡಿಯ ಕೆ.ವಿ ಸ್ಟೋರ್ಸ್ ನಲ್ಲಿ ಸಿಹಿ ವಿತರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

Suddi Udaya
error: Content is protected !!