25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ವತಿಯಿಂದ ದಿ| ಶಿವಾನಂದ ಬಳ್ಳಾಲ್‌ಬಾಗ್ ರವರಿಗೆ ನುಡಿನಮನ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಇದರ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸದಾ ತನ್ನ ಸಮುದಾಯವನ್ನು ಸಂಘಟನೆಯ ಮೂಲಕ ಒಗ್ಗೂಡಿಸಲು ಮತ್ತು ಕುಲದೈವಗಳ ಮೂಲ ಕ್ಷೇತ್ರದ ಜೀರ್ಣೋದ್ದಾರಕ್ಕೆ ಹಾಗೂ ಸಮುದಾಯದ ಏಳಿಗೆಗೆ ಅವಿರತ ಶ್ರಮಿಸಿದ ಶಿವಾನಂದ ಬಳ್ಳಾಲ್‌ಬಾಗ್ ಜ. 9 ರಂದು ನಿಧನರಾಗಿದ್ದು, ತಾಲೂಕು ಘಟಕದ ವತಿಯಿಂದ ನುಡಿನಮನ ಕಾರ್ಯಕ್ರಮವು ಬೆಳ್ತಂಗಡಿಯ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜ.25 ರಂದು ನಡೆಸಲಾಯಿತು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಹಿರಿಯರು ಮತ್ತು ಮಾರ್ಗದರ್ಶಕರಾದ ರಘು ಧರ್ಮಸೇನಾ ಇವರು ದಿ| ಶಿವಾನಂದ ಬಳ್ಳಾಲ್‌ಬಾಗ್ ಇವರ ಬಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ, ಸಂಘಟನೆಗೆ ಮತ್ತು ಸಮುದಾಯಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಅವರ ತತ್ವಾದರ್ಶಗಳನ್ನು ಪ್ರಸ್ತುತ ನಾವು ಅಳವಡಿಸಿಕೊಂಡು ಸಮುದಾಯ ಮತ್ತು ಸಂಘಟನೆಯನ್ನು ಯಾವ ರೀತಿ ಬಲಪಡಿಸಬೇಕು ಎಂದು ವಿವರಿಸುವುದರ ಮೂಲಕ ನುಡಿನಮನ ಸಲ್ಲಿಸಿದರು.

ತಾಲೂಕು ಘಟಕದ ಗೌರವ ಸಲಹೆಗಾರರಾದ ಗೋಪಾಲಕೃಷ್ಣ ಕುಕ್ಕಳ, ಅಧ್ಯಕ್ಷ ದಿನೇಶ್ ಕೆ, ಕೊಕ್ಕಡ, ಪ್ರಧಾನ ಕಾರ್ಯದರ್ಶಿಯಾದ ಶೇಖರ್ ವಿ. ಧರ್ಮಸ್ಥಳ, ಹಾಗೂ ಸಂಘಟನೆಯ ಪ್ರಮುಖರಾದ ಬಾಬು ಬೆಳಾಲು, ಶ್ರೀನಿವಾಸ್ ಪಿ.ಎಸ್. ಇವರುಗಳು ದಿ| ಶಿವಾನಂದ ಬಳ್ಳಾಲ್‌ಬಾಗ್ ರವರು ಸಾಮಾಜಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಮುದಾಯಕ್ಕೆ ಓರ್ವ ವ್ಯಕಿಯಾಗಿ ಮತ್ತು ಶಕ್ತಿಯಾಗಿ ನೀಡಿದ ಕೊಡುಗೆಗಳನ್ನು ಮನನ ಮಾಡಿಕೊಳ್ಳುವುದರ ಮೂಲಕ ಅವರಿಗೆ ನುಡಿನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು, ಆದಿದ್ರಾವಿಡ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶೇಖರ್ ವಿ. ಧರ್ಮಸ್ಥಳ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ವತಿಯಿಂದ ಕೊಕ್ಕಡ ಗ್ರಾಮದ ಬೂತ್ ಪ್ರಗತಿ ಸಭೆ

Suddi Udaya

ಗುರುವಾಯನಕೆರೆ: ನಿವೃತ್ತ ಕೆ.ಎಸ್.ಆರ್.ಟಿ.ಸಿ ಟ್ರಾಫಿಕ್ ಕಂಟ್ರೋಲರ್ ಕೃಷ್ಣ ಕಾಮತ್ ನಿಧನ

Suddi Udaya

ಹೊಸಪಟ್ಣ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ರವರಿಗೆ ಸನ್ಮಾನ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya

ಮಾತೃಶ್ರೀಡಾ. ಹೇಮಾವತಿ ಬಿ ಹೆಗ್ಗಡೆಯವರಿಗೆ ಸಾಧನಾ ರಾಜ್ಯಪ್ರಶಸ್ತಿ ಪ್ರದಾನ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ವಿವೇಕಾನಂದ ಜಯಂತಿ

Suddi Udaya
error: Content is protected !!