ಉಜಿರೆ ಕಾಲೇಜು ರೋಡ್ ಬಳಿಯ ಅಮೃತ್ ಸಿಲ್ಕ್ ಎದುರು ಎ. ಎಂ. ಟವರ್ ನಲ್ಲಿ ನೂತನ ಸಂಸ್ಥೆ ಬ್ಯೂಟಿ ಬ್ಲಂಡ್ ಸಲೂನ್ ಜ.24ರಂದು ಶುಭಾರಂಭಗೊಂಡಿದೆ.
ಸಂಸ್ಥೆಯನ್ನು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್‌ಕೃಷ್ಣ ಪಡ್ವೆಟ್ನಾಯ ರವರು ದೀಪ ಪ್ರಜ್ವಲನೆ ಗೊಳಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಜಿರೆ ಗ್ರಾ. ಪಂ. ಅಧ್ಯಕ್ಷೆ ಉಷಾಕಿರಣ್, ಗ್ರಾ. ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ, ಎ.ಎಂ. ಟವರ್ ಮಾಲಕರು ಮೊಹಮ್ಮದ್ ಕುಂಞ, ಕೆ.ಎನ್.ಎಸ್. ಟವರ್ ಮಾಲಕರು ಮೋಹನ್ ಶೆಟ್ಟಿಗಾರ್ ಉಪಸ್ಥಿತರಿದ್ದು ಶುಭಹಾರೈಸಿದರು.
ಬಂದಂತಹ ಅತಿಥಿ ಗಣ್ಯರನ್ನು ಶ್ರೀಮತಿ ಪವಿತ್ರ ಅರುಣ್‌ಕುಮಾರ್ ಸ್ವಾಗತಿಸಿ, ಸತ್ಕರಿಸಿದರು.











