23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಯಕ್ಷಭಾರತಿಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ”

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಜಿರೆಯ ಶಾರದಾ ಮಂಟಪದಲ್ಲಿ ಯಕ್ಷಭಾರತಿ ಕನ್ಯಾಡಿ ಬೆಳ್ತಂಗಡಿ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ” ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ, ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ವಾಸುದೇವ ಆಚಾರ್ಯ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಪಾತ್ರವರ್ಗದಲ್ಲಿ ರಾಮನಾಗಿ ಪ್ರಶಾಂತ ಮುಂಡ್ಕೂರು, ಲಕ್ಷ್ಮಣನಾಗಿ ಆದರ್ಶ ಮೂಡಬಿದರೆ, ವಿಭೀಷಣನಾಗಿ ಪ್ರಶಾಂತ್ ಆಚಾರ್ಯ ಪುತ್ತೂರು, ಹನುಮಂತನಾಗಿ ಈಶ್ವರಪ್ರಸಾದ ನಿಡ್ಲೆ, ರಾವಣನಾಗಿ ಶೀಶ ಮಣಿಲ, ರಾವಣ ದೂತ, ಜಾಂಬವಂತ ಮತ್ತು ಶುಕ್ರಾಚಾರ್ಯನಾಗಿ ಪೆರ್ವೋಡಿ ಅಶೋಕ ಸುಬ್ರಹ್ಮಣ್ಯ ಭಟ್,ಇಂದ್ರಜಿತುವಾಗಿ ಗಣೇಶ ಶೆಟ್ಟಿ ಸಾಣೂರು, ಮಾಯಾ ಸೀತೆಯಾಗಿ ಸುಹಾನ್ ಜೆಪ್ಪಿನಮೊಗರು ಪಾತ್ರ ನಿರ್ವಹಿಸಿದರು. ದೇವಸ್ಥಾನದ ವತಿಯಿಂದ ಭರತ್ ಕುಮಾರ್ ಉಜಿರೆ ಯಕ್ಷಭಾರತಿ ಸಂಸ್ಥೆಯ ಸಂಚಾಲಕ ಮಹೇಶ ಕನ್ಯಾಡಿಯವರನ್ನು ಗೌರವಿಸಿದರು. ರವೀಂದ್ರ ಶೆಟ್ಟಿ ಬಳೆಂಜ ಉಪಸ್ಥಿತರಿದ್ದರು.

Related posts

ವಾಣಿ ಶಿಕ್ಷಣ ಸಂಸ್ಥೆಗಳ ಬಸ್ ಚಾಲಕ ಶಶಿಧರ ಗೌಡ ಪಣಿಕ್ಕಲ್ ಹೃದಯಾಘಾತದಿಂದ ನಿಧನ

Suddi Udaya

ನೆರಿಯ : ಬೆಂಕಿ ತಗುಲಿ ಹಾನಿಯಾದ ಮನೆಗೆ ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘ ಹಾಗೂ ವಾಣಿ ಶಿಕ್ಷಣ ಸಂಸ್ಥೆಯಿಂದ ಭೇಟಿ

Suddi Udaya

ಕಳಿಯ ಗ್ರಾಮದ ಕೊಜಪ್ಪಾಡಿ ಮನೆಯ ಯಜ್ಞೇಶ್ ಪೂಜಾರಿಯವರ ಕಾಲಿನ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya

ಫೆ.8-12: ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಮಾಲಾಡಿ: ಪುರಿಯ-ಕುರಿಯೋಡಿರಸ್ತೆ ಕಾಮಗಾರಿ ಸ್ಥಳಾಂತರಕ್ಕೆ ವಿರೋಧ: ಶೀಘ್ರ ಕಾಮಗಾರಿಗೆ ನಾಗರಿಕರ ಒತ್ತಾಯ

Suddi Udaya

ಗುಂಡೇರಿ ಲಯನ್ಸ್ ಬಸ್ ತಂಗುದಾನದಲ್ಲಿದ್ದ ಶ್ರೀ ಕೃಷ್ಣನ ಮೂರ್ತಿ ತೆರವು,: ಲಯನ್ಸ್ ಕ್ಲಬ್ ಅದ್ಯಕ್ಷ ದೇವದಾಸ್ ಶೆಟ್ಟಿ ನೇತೃತ್ವದಲ್ಲಿ ಪವಿತ್ರ ಪಲ್ಗುಣಿ ನದಿಯಲ್ಲಿ ಮೂರ್ತಿ ವಿಸರ್ಜನೆ

Suddi Udaya
error: Content is protected !!