32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಾರೆಂಕಿ ಶ್ರೀ ಕ್ಷೇತ್ರ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯನಮಸ್ಕಾರ ಕಾರ್ಯಕ್ರಮ

ಮಚ್ಚಿನ: ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ವಿ.ಶ್ರೀಧರ್ ಭಟ್, ಪ್ರಶಾಂತ್ ಆಚಾರ್ಯ, ಸಮಿತಿಯ ಜಿಲ್ಲಾ ಚಿಂತನಾಕೂಟ ಪ್ರಮುಖರಾದ ಹರೀಶ್ ಅಂಚನ್, ಶಿಕ್ಷಕರಾದ ಸುಕೇಶ್ ಹಾಗೂ ಸುಧಾಕರ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂಜಾನೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 9 ಬಾರಿ 108 ಸೂರ್ಯ ನಮಸ್ಕಾರ ಸಮಾಪನಗೊಂಡಿತು.
ರಥಸಪ್ತಮಿಯಂದು ಸೂರ್ಯನಮಸ್ಕಾರ ಮಾಡುವ ಮಹತ್ವವನ್ನು ಯೋಗಪಟು ರೂಪಾ ನವೀನ್ ತಿಳಿಸಿದರು. ಸೂರ್ಯನಮಸ್ಕಾರವನ್ನು 3 ಹಂತಗಳಲ್ಲಿ ಕ್ರಮವಾಗಿ ಯೋಗಪಟುಗಳಾದ ಸಿ.ಹೆಚ್. ಶಿವಶಂಕರ ಛತ್ರ,ಕುಮಾರಿ ಕೀರ್ತಿ, ನವೀನ್ ಕುಮಾರ್ ನಡೆಸಿಕೊಟ್ಟರು.

ಆರಂಭಿಕ ಸಿದ್ದತೆಯನ್ನು ಭಾರತಿ ಸುರೇಶ್ ನೆರವೇರಿಸಿದರು. ಪ್ರಾತ್ಯಕ್ಷಿತೆಯಲ್ಲಿ ಯೋಗ ಪಟುಗಳಾದ ಸರಿತಾ, ಭವಾನಿ, ಕೇಶವ, ದೀಕ್ಷಿತ್, ವಿದ್ಯಾ, ವಿಜಯ, ರಮ್ಯಾ, ದಿವಾಕರ, ಆಶಾ, ರಾಘವೇಂದ್ರ ಬಾಳಿಗ, ಉಮಾ ಸಹಕರಿಸಿದರು. ಅಮಿತಾ ಅಶೋಕ್ ನಿರೂಪಣೆ ಮಾಡಿದರು. ಸವಿತಾ ಸ್ವಾಗತಿಸಿ ಜಿ.ಬಾಲಕೃಷ್ಣ ವಂದಿಸಿದರು. ಮಡಂತ್ಯಾರು, ಪುಂಜಾಲಕಟ್ಟೆ ಪರಿಸರದ ಯೋಗಪಟುಗಳು ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.

Related posts

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ

Suddi Udaya

ಮಾ.1: ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಪಿಂಕ್ ಮ್ಯಾರಥಾನ್ “ನಾರಿ ಇನ್ ಪಿಂಕ್ ಸಾರಿ”ಕ್ಯಾನ್ಸರ್ ಜಾಗೃತಿ ಜಾಥಾ ಕಾರ್ಯಕ್ರಮ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕೊಕ್ಕಡದ ಅಂಗಡಿಯಿಂದ ರೂ.2 ಲಕ್ಷ ಹಣ ಕಳ್ಳತನ ಪ್ರಕರಣ: ಆರೋಪಿಗಳಿಬ್ಬರ ಬಂಧನ

Suddi Udaya

ಬೆಂಗಳೂರಿನ ಪ್ರಸಿದ್ದ ಕೈಗಾರಿಕೋದ್ಯಮಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕ ದೇವೇಂದ್ರ ಹೆಗ್ಡೆ ಕೊಕ್ರಾಡಿಯವರು ಅಂತರರಾಷ್ಟ್ರೀಯ ಆರ್ಯಭಟ- 2024 ಪ್ರಶಸ್ತಿಗೆ ಆಯ್ಕೆ

Suddi Udaya

ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

Suddi Udaya
error: Content is protected !!