September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.29 (ಇಂದು): ಬದ್ಯಾರಿನಲ್ಲಿ “ಹಿಬರೋಡಿ ಯಕ್ಷೋತ್ಸವ”‌ -“ಸಹಸ್ರ ಕವಚ ಮೋಕ್ಷ” ಯಕ್ಷಗಾನ ಬಯಲಾಟ”

ಬದ್ಯಾರು:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಿಂದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮಹಾಗಣಪತಿ ದೇವರ ಸೇವಾರ್ಥ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಿರಂತರ ಸೇವಾ ಬಯಲಾಟ “ಸಹಸ್ರ ಕವಚ ಮೋಕ್ಷ” ತೆಂಕಕಾರಂದೂರಿನ ಬದ್ಯಾರಿನಲ್ಲಿರುವ ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ ಜ.29 ರಂದು ರಾತ್ರಿ ಗಂಟೆ 7ರಿಂದ ರಾತ್ರಿ 12ರ ತನಕ ಪ್ರದರ್ಶನಗೊಂಡು ಯಕ್ಷ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ ಎಂದು ಸೇವಾಕರ್ತರು, ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವಧ್ಯಕ್ಷ,ಯಕ್ಷಪ್ರೇಮಿ ದೇವದಾಸ್ ಶೆಟ್ಟಿ ಹಿಬರೋಡಿ ತಿಳಿಸಿರುತ್ತಾರೆ.

ಪ್ರತಿ ವರ್ಷ ನೂತನ ಪ್ರಸಂಗ:

ಇದೇ ಸ್ಥಳದಲ್ಲಿ 2004 ಮತ್ತು 2005ರಲ್ಲಿ ಕಟೀಲು ಮೇಳದ ಪ್ರಸಂಗಗಳನ್ನು ಪ್ರದರ್ಶಿಸುವುದರೊಂದಿಗೆ ಆರಂಭವಾದ ಕಲಾಪ್ರೇಮ ನಿರಂತರ ಬೆಳೆಯುತ್ತ ಬಂದಿದೆ. 2006ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಬಯಲಾಟದೊಂದಿಗೆ ಈ ಸೇವೆ ಮುಂದುವರೆದು ಪ್ರತಿ ವರ್ಷವೂ ಅದೇ ಮೇಳದ ನೂತನ ಪ್ರಸಂಗ ಪ್ರದರ್ಶನದ ಮೂಲಕ ಜನಮನ ರಂಜನೆಯನ್ನೂ ಮಾಡಿಕೊಂಡು ಬಂದಿದೆ. ಮಧ್ಯೆ ಒಂದು ವರ್ಷ ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಪ್ರತ್ಯೇಕ ಪ್ರದರ್ಶನಗಳೂ ಆಗಿವೆ.

ನಿರಂತರ 22ವರ್ಷಗಳಿಂದ ಸೇವೆ:

ಕಳೆದ 22 ವರ್ಷಗಳಿಂದ ನಿರಂತರ ಯಕ್ಷಗಾನ ಸೇವೆ ನಡಿತೀದೆ. ಸಾವಿರಾರು ಕಲಾಸಕ್ತರಿಗೆ ಕಲಾರಂಜನೆಯ ಜೊತೆಗೆ ಆತಿಥ್ಯ ಸತ್ಕಾರದ ಮೂಲಕವೂ ಸಂತೃಪ್ತಿಯನ್ನು ನೀಡುತ್ತಿರುವುದು ಇಲ್ಲಿರುವ ವೈಶಿಷ್ಟ್ಯ.

Related posts

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರ

Suddi Udaya

ಗುರಿಪಳ್ಳ ಬಿಜೆಪಿಯ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Suddi Udaya

ಓಡಿಲ್ನಾಳ: ಕೋರ್ಯಾರು ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ಮರ

Suddi Udaya

ಉಜಿರೆ: ಮಾಚಾರು ನಿವಾಸಿ ಕೃಷ್ಣ ಬೊಳ್ಮಿಣ್ಣಾಯ ನಿಧನ

Suddi Udaya

ಮುಂಬೈ ಭಜನಾ ಮಂಡಳಿಗಳ ಒಕ್ಕೂಟದ ಸಂಸ್ಥೆ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮಹಾರಾಷ್ಟ್ರ ಘಟಕ ದಿಂದ ಭಜಕ ವಿ ಹರೀಶ್ ನೆರಿಯ ರವರಿಗೆ ಗುರುವಂದನೆ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya
error: Content is protected !!