September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಪಾಂಗಳದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

ಧರ್ಮಸ್ಥಳ: ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳ್ಳತನ ಮಾಡಿಕೊಂಡ ಹೋದ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಳದ ಲಕ್ಷ್ಮೀ ನಿವಾಸದ ಬಾಲಕೃಷ್ಣ ಗೌಡರ ಮನೆಗೆ ಜ.29 ರಂದು ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆ ಒಳಗಡೆ ಮನೆಯಲ್ಲಿ ಯಾರು ಇಲ್ಲದ ವೇಳೆಗೆ ಕಳ್ಳತನ ನಡೆದಿದೆ.ಸಂಜೆ ವೇಳೆಗೆ ಕೆಲಸದಿಂದ ಮನೆಗೆ ಬಂದಾಗ ಕಳ್ಳತನ ಬೆಳಕಿಗೆ ಬಂದಿದ್ದು‌, ಮನೆಯೊಳಗಿದ್ದ 40 ಸಾವಿರ ಮೌಲ್ಯದ 4 ಗ್ರಾಂ ಕಿವಿಓಲೆ,2 ಸಾವಿರ ಮೌಲ್ಯದ 2 ಜೊತೆ ಬೆಳ್ಳಿಯ ಕಾಲುಗೆಜ್ಜೆ,5,500 ರೂಪಾಯಿ ನಗದು ಸೇರಿ ಒಟ್ಟು 47,500 ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಬಗ್ಗೆ ಮನೆ ಮಾಲೀಕ ಬಾಲಕೃಷ್ಣ ಗೌಡ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ.ಬಿಎಸ್ , ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ಮತ್ತು ತಂಡ, ಮಂಗಳೂರು ಬೆರಳಚ್ಚು ತಜ್ಞರು, ಪುತ್ತೂರು ಸೊಕೋ ತಂಡ, ಮಂಗಳೂರು ಶ್ವಾನ ದಳ ಬಂದು ಪರಿಶೀಲನೆ ನಡೆಸಿದ್ದಾರೆ.

Related posts

ಸಹಕಾರ ಸಪ್ತಾಹ ಕಾರ್ಯಕ್ರಮ: ಆರಂಬೋಡಿಯ ಪ್ರತಾಪ್ ಶೆಟ್ಟಿಯವರಿಗೆ ಹೈನುಗಾರಿಕೆ ಕ್ಷೇತ್ರದಲ್ಲಿ “ಕ್ಷೀರಾರತ್ನ” ಪ್ರಶಸ್ತಿ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾನ್ಸೂನ್ ಡೇ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ಎಸ್.ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ವಿಠಲ ಕೊಕ್ಕಡ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಉದ್ಘಾಟನೆ

Suddi Udaya

ಇಳಂತಿಲ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆ

Suddi Udaya

ಜ.27-28: ಹಳೇಪೇಟೆ ಮದರಸ: ಬೃಹತ್ ವಾರ್ಷಿಕ ದ್ಸಿಕ್ರ್ ಹಲ್ಕಾ ಮಜ್ಲಿಸ್ ಬುರ್ದಾ ಮಜ್ಲಿಸ್ ಹಾಗೂ ಧಾರ್ಮಿಕ ಪ್ರವಚನ

Suddi Udaya
error: Content is protected !!