32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ “ಅಕ್ಷಯ ಪಾಕಶಾಲೆ”- ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಳಂಜ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕಲೆ,ಕ್ರೀಡೆ,ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ನಡೆಯುವ ಶ್ರೀ ಗುರುಪೂಜೆ, ಸತ್ಯನಾರಾಯಣ ಪೂಜೆ,ಸರ್ವೇಶ್ವರಿ ದೇವಿಯ ಪೂಜೆ, “ಅಕ್ಷಯ” ಪಾಕಶಾಲಾ ಉದ್ಘಾಟನಾ ಸಮಾರಂಭವು ಫೆ 15 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ಎಕ್ಸೆಲ್ ಕ್ಯಾಂಪಸ್ ನಲ್ಲಿ ಜ 27 ರಂದು ಬಿಡುಗಡೆಗೊಳಿಸಿ ಶುಭ ಕೋರಿದರು.

ಸಂಘದ ಅಕ್ಷಯ ಪಾಕಶಾಲಾ ನಿರ್ಮಾಣದ ವಿಜ್ಞಾಪನಾ ಪತ್ರವನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ, ಬಳಂಜ ಸಂಘದ ಗೌರವ ಮಾರ್ಗದರ್ಶಕರಾದ ಕೆ. ವಸಂತ ಸಾಲಿಯಾನ್ ಬಿಡುಗಡೆಗೊಳಿಸಿ ಹಾರೈಸಿದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ಸ್ವಾಗತಿಸಿದರು. ಸಂಘದ ಗೌರವಾಧ್ಯಕ್ಷ ಹೆಚ್ ಧರ್ಣಪ್ಪ ಪೂಜಾರಿ, ಉಪಾಧ್ಯಕ್ಷ ಬಿ‌‌.ಕೃಷ್ಣಪ್ಪ ಪೂಜಾರಿ, ಪ್ರ ಕಾರ್ಯದರ್ಶಿ ರಂಜಿತ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್ ಎಸ್,ಜೊತೆ ಕಾರ್ಯದರ್ಶಿ ದಿನೇಶ್ ನಿಟ್ಟಡ್ಕ,ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಮನೋಹರ್ ಬಳಂಜ, ರತ್ನಾಕರ ಪೂಜಾರಿ ,ಸಂತೋಷ್ ಕುಮಾರ್ ಹಿಮರಡ್ಡ, ಪ್ರದೀಪ್ ಕಾಪಿನಡ್ಕ, ಯೋಗೀಶ್ ಪೂಜಾರಿ ಕೊಂಗುಳ, ಸಂತೋಷ್ ಕಡೆಂಗಾಲು, ಯತೀಶ್ ವೈ.ಎಲ್, ದಿನೇಶ್ ಪೂಜಾರಿ ಅಂತರ,ಜಗದೀಶ್ ಬಳ್ಳಿದಡ್ಡ,ವಿಜಯ ಪೂಜಾರಿ ಯೈಕುರಿ, ದೀಪಕ್ ಹೆಚ್.ಡಿ,ಪ್ರವೀಣ್ ಡಿ ಕೋಟ್ಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಕಾರ್ಯದರ್ಶಿ ಸತೀಶ್ ಕೋಟ್ಯಾನ್, ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತಿ ಸಂತೋಷ್, ಕಾರ್ಯದರ್ಶಿ ಸಂಧ್ಯಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.


ಬಳಂಜದ ಸಂಘಟನಾ ಶಕ್ತಿ ಮೆಚ್ಚುವಂತದ್ದು: ಸುಮಂತ್ ಕುಮಾರ್ ಜೈನ್
ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯು ಸಮಾಜಮುಖಿ ಚಿಂತನೆ, ಯೋಚನೆ,ಯೋಜನೆಯಿಂದ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತಿದೆ.ಸಂಘದ ಅಕ್ಷಯ ಪಾಕಶಾಲೆ ಮತ್ತು ಇಲ್ಲಿನ ಪ್ರತಿ ಪೂಜಾ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ.ಈ ಸಂಘವು ಶಿಕ್ಷಣಕ್ಕೆ ಮತ್ತು ಸಂಘಟನೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಬಳಂಜ ಸಂಘದಲ್ಲಿ ನಿರಂತರ ಕಾರ್ಯಚಟುವಟಿಕೆಗಳು: ಕೆ.ವಸಂತ ಸಾಲಿಯಾನ್
ಬಳಂಜ ಸಂಘವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕ್ರೀಡೆ, ಕಲೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಪ್ರತಿ ವರ್ಷ ಶ್ರೀ ಗುರುಪೂಜೆ, ಶ್ರೀ ಸತ್ಯನಾರಾಯಣ ಪೂಜೆ,ಸರ್ವೇಶ್ವರಿ ದೇವಿಯ ಪೂಜೆ, ಆಟಿಕೂಟ, ಭಜನೆ, ಶ್ರೀ ಶಾರದೋತ್ಸವ, ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ, ಗುರು ಜಯಂತಿ, ಕ್ರೀಡಾಕೂಟ, ಸಾಂತ್ವನ ನಿಧಿ ಹಸ್ತಾಂತರ, ಸಂಗೀತ ತರಗತಿ, ತರಭೇತಿ, ಶಿವಗಿರಿ ಪ್ರವಾಸ, ಶ್ರೀ ಬೊಳ್ಳಜ್ಜ ದೈವದ ಅಗೇಲು ಸೇವೆಯನ್ನು ಹಮ್ಮಿಕೊಂಡು ಬರುತ್ತಿದೆ.ಸಂಘದ ಅಕ್ಷಯ ಪಾಕಶಾಲೆ ಶಾಸಕ ಹರೀಶ್ ಪೂಂಜರವರ ಅನುದಾನ ಮತ್ತು ಊರವರ ಸಹಕಾರದಿಂದ ಫೆ.15ರಂದು ಉದ್ಘಾಟನೆಯಾಗಲಿದೆ.ಎಲ್ಲಾ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಹೇಳಿದರು.

Related posts

ಅಂತಾರಾಷ್ಟ್ರೀಯ ಸೀನಿಯರ್ ಛೇಂಬರ್‍ ನ ರಾಷ್ಟ್ರೀಯ ಸಹ ನಿರ್ದೇಶಕರಾಗಿ ಪ್ರಮೋದ್ ಆರ್ ನಾಯಕ್ ಆಯ್ಕೆ

Suddi Udaya

ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಂಸದ ಕ್ಯಾ| ಬ್ರಿಜೇಶ್ ಚೌಟ ಭೇಟಿ

Suddi Udaya

ಸರಕಾರಿ ಶಾಲೆಗಳನ್ನು ಮಾದರಿಯಾಗಿಸಲು ಬದುಕು ಕಟ್ಟೋಣ ಬನ್ನಿ ತಂಡ ಪಣ

Suddi Udaya

ಲಾಯಿಲದಲ್ಲಿ ಕೆಟ್ಟು ನಿಂತ ಕೆಎಸ್ ಆರ್ ಟಿ ಸಿ ಬಸ್ಸು: ಟ್ರಾಫಿಕ್ ಜಾಮ್

Suddi Udaya

ನಡ ಸರಕಾರಿ ಪ್ರೌಢಶಾಲೆಗೆ “ರಾಜ್ಯ ಮಟ್ಟದ ಹಸಿರು ನೈರ್ಮಲ್ಯ ಅಭ್ಯುದಯ ಉತ್ತಮ ಶಾಲಾ ಪ್ರಶಸ್ತಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಪೋಕ್ಸೋ ಕಾಯಿದೆಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!