32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಅಳದಂಗಡಿ ಶಾಖೆಯ 3ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

ಅಳದಂಗಡಿ : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಳದಂಗಡಿ ಶಾಖೆಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಅಳದಂಗಡಿ ಶಾಖೆಯಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರುಗಳಾದ ತುಳುಪುಲೆ, ರಾಜು ಪೂಜಾರಿ , ವಿಶ್ವನಾಥ್ ಬಂಗೇರ, ವಿಶ್ವನಾಥ್ ಕುದ್ಯಾಡಿ, ಪೂರ್ನೇಶ್, ರತ್ನಾಕರ ಕೋಟ್ಯಾನ್, ಅಜುರುದ್ದೀನ್, ದಯಾಕರ ರೈ, ಮನೋಹರ ಶೆಟ್ಟಿ, ಸದಾನಂದ ಆಚಾರ್ಯಾ, ಜಲಜ ವಿ ಸಾಲ್ಯಾನ್, ಶೋಭ, ಸುರೇಖ, ನೀಲಯ್ಯ ಗೌಡ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, ಗ್ರಾಹಕರ ಪ್ರೋತ್ಸಾಹದಿಂದ ಸಂಘವು ಇಂದಿಗೆ 33 ಶಾಖೆಯನ್ನು ಹೊಂದಲು ಕಾರಣೀಭೂತವಾಗಿದೆ ಹಾಗೂ ಸಂಘದ ಪಾಲು ಬಂಡವಾಳವು 22.5 ಲಕ್ಷದಿಂದ ಪ್ರಾರಂಭವಾಗಿ ಇಂದು 300 ಕೋಟಿ ಠೇವಣಿಯಾಗಲು ಗ್ರಾಹಕರೇ ಕಾರಣ ಎಂದು ಪ್ರಶಂಸಿದರು. ಸಂಸ್ಥೆಯು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನು ಹೊಂದಿರುತ್ತದೆ. ಆರೋಗ್ಯ ಶಿಬಿರವನ್ನು ಸಹ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಅಳದಂಗಡಿ ಶಾಖೆಯಲ್ಲೂ ಆರೋಗ್ಯ ಶಿಬಿರವನ್ನು ನಡೆಸಲ್ಲಿದ್ದೇವೆ ಎಂದು ತಿಳಿಸಿದರು.

ಸಂಘದ ಸದಸ್ಯ ಮನೋಹರ ಶೆಟ್ಟಿ ಮಾತನಾಡಿ ಸಿಬ್ಬಂದಿಗಳು ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಜವಾಬ್ದಾರಿಯಿಂದ ಕಾರ್ಯ ನಿಭಾಯಿಸುತ್ತಾರೆ ಎಂದು ಶ್ಲಾಘಿಸಿದರು. ಸದಸ್ಯ ನೀಲಯ್ಯ ಗೌಡ ಮಾತನಾಡಿ ಶಾಖೆ ಆರಂಭದಿಂದಲೂ ಉತ್ತಮ ವ್ಯವಹಾರ ನಡೆಸುತ್ತಿದ್ದು ಸಂಘದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಸದಸ್ಯೆ ಸುರೇಖ ಮಾತನಾಡಿ ಆವರ್ತನ ಖಾತೆಯಿಂದ ಸಣ್ಣ ಮಟ್ಟದ ಉಳಿತಾಯ ಮಾಡಲು ಬಹಳ ಸಹಾಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಗೋಪಾಲ್ ಎಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು.
ಸಂಘದ ಅಳದಂಗಡಿ ಶಾಖೆಯ ಶಾಖಾಧಿಕಾರಿ ಕಾವ್ಯಶ್ರೀ ಎಸ್ ಸ್ವಾಗತಿಸಿ, ಶಾಖೆಯ ಸಿಬ್ಬಂದಿ ಲೋಶಿತ ವಂದಿಸಿದರು. ಶಾಖೆಯ ಸಿಬ್ಬಂದಿ ಸ್ವಾತಿ ಎಸ್ ಕಾರ್ಯಕ್ರಮ ನಿರೂಪಿಸಿದರು.

Related posts

ವೇಣೂರು ಪದ್ಮಾಂಬ ಎಲೆಕ್ಟ್ರಿಕಲ್ಸ್ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ

Suddi Udaya

ಪಡ್ಡಂದಡ್ಕ ನೂರುಲ್ ಹುಧಾ ಮಸೀದಿಯಲ್ಲಿ ಸೈನಿಕರಿಗಾಗಿ ವಿಶೇಷ ದುವಾ ಪ್ರಾರ್ಥನೆ

Suddi Udaya

ಇಂದಬೆಟ್ಟು: ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಬಂಗಾಡಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರ

Suddi Udaya

ಜ.5: ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ವತಿಯಿಂದ 14ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ

Suddi Udaya

ಉಜಿರೆ: ರಮ್ಯಾ 1 ಗ್ರಾಮ್ ಗೋಲ್ಡ್ ಫ್ಯಾನ್ಸಿ& ಪೂಟ್ ವೇರ್ ನೂತನ ಶೋರೂಮ್ ಉದ್ಘಾಟನೆಗೆ ಆಗಮಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಕೂಕ್ರಬೆಟ್ಟು ಸರ್ಕಾರಿ ಶಾಲೆಗೆ ರೂ.1.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಫೆ.17: ಕಟ್ಟಡ ಲೋಕಾರ್ಪಣಾ ಸಮಾರಂಭ

Suddi Udaya
error: Content is protected !!