25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಉಜಿರೆ: ರುಡ್ ಸೆಟ್‌ನಲ್ಲಿ ವಿದ್ಯುತ್ ಉಪಕರಣ ಹಾಗೂ ದ್ವಿಚಕ್ರ ವಾಹನ ರಿಪೇರಿ ತರಬೇತಿ ಸಮಾರೋಪ

ಉಜಿರೆ: ರುಡ್ ಸೆಟ್ ಸಂಸ್ಥೆ, ಉಜಿರೆ ಇವರ ಆಶ್ರಯದಲ್ಲಿ ನಡೆದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ ಹಾಗೂ ದ್ವಿಚಕ್ರ ವಾಹನಗಳ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರರಾದ ಲಕ್ಷ್ಮೀ ನಾರಾಯಣ ರಾವ್ ಅವರು ಮಾತನಾಡಿ, ವೃತ್ತಿಯಲ್ಲಿ ಶಿಸ್ತು, ಸೇವಾಭಾವ ಹಾಗೂ ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಅನುಭವ ಗಳಿಸಬೇಕು ಎಂದು ಸಲಹೆ ನೀಡಿದರು. ಹೆಗ್ಗಡೆಯವರ ಪರಿಕಲ್ಪನೆಯ ರುಡ್ ಸೆಟ್ ಸಂಸ್ಥೆ ಕೇವಲ ತಾಂತ್ರಿಕ ತರಬೇತಿಗೆ ಸೀಮಿತವಾಗದೇ, ಜೀವನ ಕೌಶಲ್ಯಗಳನ್ನು ಕಲಿಸುವ ಅತ್ಯಂತ ಮಹತ್ವದ ಸಂಸ್ಥೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ವಹಿಸಿ ಮಾತನಾಡಿ, ತರಬೇತಿ ಪಡೆದವರು ಬ್ಯಾಂಕ್ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವ ಉದ್ಯೋಗ ಆರಂಭಿಸುವಂತೆ ಕರೆ ನೀಡಿದರು.

ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತ ಭಾಷಣ ಮಾಡಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಣೆ ನಡೆಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು.

ಸೀತಾ ಹೆಗಡೆ ಹಾಗೂ ರಶ್ಮಿ ಪ್ರಾರ್ಥನೆ ನೆರವೇರಿಸಿದರು. ತರಬೇತಿರ್ಥಿಗಳಾದ ಗಿರೀಶ್, ಪುರಂದರ ರೈ, ಜೋಸೆಫ್ ಪಿಂಟೋ ಹಾಗೂ ಸುರೇಶ್ ಅವರುಗಳು ತಮ್ಮ ತರಬೇತಿ ಅನುಭವಗಳನ್ನು ಹಂಚಿಕೊಂಡರು.

Related posts

ಸೆ.15: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘ ಅರಸಿನಮಕ್ಕಿ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಉಜಿರೆಯ ಮುಹಮ್ಮದ್ ನಿಶ್ವಾನ್ ರವರಿಗೆ ಎನ್ ಎಸ್ ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿ ಪ್ರದಾನ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೇಬಿಸ್ ರೋಗದ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಗುರುವಾಯನಕೆರೆ ಹುತಾತ್ಮ ಯೋಧ ಏಕನಾಥ್ ಶೆಟ್ಟಿ ರವರ ಪ್ರತಿಮೆಗೆ ಮಾಲಾರ್ಪಣೆ, ನುಡಿನಮನ

Suddi Udaya

ಬೆಳ್ತಂಗಡಿ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತ‌ರ್ ಕಾಲೇಜು ಮಟ್ಟದ ಖೋ-ಖೋ ಪಂದ್ಯಾಟ

Suddi Udaya

ಮುಂಡಾಜೆ ವಲಯದ ಚಾರ್ಮಾಡಿ-ಬಿ ಕಾರ್ಯಕ್ಷೇತ್ರದಲ್ಲಿ ನೂತನ ಸರಸ್ವತಿ ಸ್ವಸಹಾಯ ಸಂಘ ಉದ್ಘಾಟನೆ

Suddi Udaya
error: Content is protected !!