ಬೆಳ್ತಂಗಡಿ: ಆರೋಗ್ಯಯುತ ಸಮಾಜಕ್ಕಾಗಿ ಜನಜಾಗೃತಿ ಹಾಗೂ ಸಂಭ್ರಮಾಚರಣೆಯ ಭಾರತೀಯ ವೈದ್ಯ ಪದ್ಧತಿಗಳ ಮಹಾ ಸಂಭ್ರಮ ಆಯುಷ್ ಹಬ್ಬ ಜ. 31 ಹಾಗೂ ಫೆ.1 ರಂದು ಮಂಗಳೂರಿನ ಡಾ. ಟಿ ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ನನ್ ಸೆಂಟರ್ ನಲ್ಲಿ ನಡೆಯಲಿದೆ.
ಫೆಬ್ರವರಿ.1 ರಂದು ಬೆಳಗ್ಗೆ 10:30 ಕ್ಕೆ ಆಯುಷ್ ವೈದ್ಯ ಪದ್ಧತಿಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದ್ದು ಈ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಆಯುಷ್ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ..











