32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಭೀಷ್ಮ ಏಕಾದಶೀ ಪ್ರಯುಕ್ತ ವಿಷ್ಣು ಸಹಸ್ರನಾಮ ಪಠಣ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಭೀಷ್ಮ ಏಕಾದಶಿಯ ಪ್ರಯುಕ್ತ ಜ.29 ರಂದು ವಿಷ್ಣುಸಹಸ್ರನಾಮ ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೇಯಸ್ ಪಾಳಂದೆ ಸಂಯೋಜಿಸಿದರು, ದ್ವಿತೀಯ ವರ್ಷದ ವಿಜ್ಞಾನ ಹಾಗೂ ಕಲಾ ವಿಭಾಗದ ಸಂಸ್ಕೃತ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ, ಸಮಚಿತ್ತರಾಗಿ ಮತ್ತು ಭಕ್ತಿಭಾವದಿಂದ ಭಾಗವಹಿಸಿದರು. ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀಧರ ಭಟ್ಟರು ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಭೀಷ್ಮ ಏಕಾದಶಿಯ ಮಹತ್ವದ ಕುರಿತು ಅರಿವು ಉಂಟಾಯಿತು. ವಿಷ್ಣುಸಹಸ್ರನಾಮ ಪಠಣದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಮಾನಸಿಕ ಸ್ಥೈರ್ಯದ ಹೆಚ್ಚಳದ ಜೊತೆಗೆ ಭಾಷೆಯ ಶುದ್ಧ ಉಚ್ಚಾರ ಹಾಗೂ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಗೌರವ ಹೆಚ್ಚುವಂತೆ ಮಾಡಿತು. ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗಿದ್ದು, ಸಂಸ್ಕೃತ ವಿಭಾಗದ ಧಾರ್ಮಿಕ–ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತೊಂದು ಅರ್ಥಪೂರ್ಣ ಆಯಾಮವನ್ನು ನೀಡಿದವು

Related posts

ಶ್ರೀ ಮಹಾಗಣಪತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸೌತಡ್ಕದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಓಡಿಲ್ನಾಳ ಶ್ರೀ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 3ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ, ಧಾರ್ಮಿಕ ಸಭೆ

Suddi Udaya

ಜಿಲ್ಲಾಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆ: ವೇಣೂರು ಸ. ಪ್ರೌಢ ಶಾಲಾ ವಿದ್ಯಾರ್ಥಿ ಅನ್ವಿತಾ ಎ ಪ್ರಥಮ ಸ್ಥಾನ

Suddi Udaya

ಕುಂಭಶ್ರೀ ಪಿಯು ಕಾಲೇಜಿನಲ್ಲಿ ಸಿಎ ಓರಿಯಂಟೇಶನ್ 2K25 ವಿಶೇಷ ಕಾರ್ಯಾಗಾರ

Suddi Udaya

ಸೀರೋ ಮಲಬಾರ್ ಧರ್ಮ ಸಭೆಯಲ್ಲಿ ವಿಭೂತಿ ಆಚರಣೆಯೊಂದಿಗೆ ವ್ರತಚಾರಣೆಯಕಾಲಕ್ಕೆ ಪ್ರವೇಶ

Suddi Udaya

ಎಕ್ಸಲೆಂಟ್ ಮೂಡುಬಿದಿರೆ: ಜೆಇಇ ಅಡ್ವಾನ್ಸ್ಡ್ ರಾಷ್ಟ್ರಮಟ್ಟದ ಸಾಧನೆ

Suddi Udaya
error: Content is protected !!