September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಾಧಕರು

ಫೆ.1: ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡರಿಗೆ ಹುಟ್ಟೂರಿನಲ್ಲಿ ಸ್ವಾಗತ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ರಾಷ್ಟ್ರಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ವತಿಯಿಂದ ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ಬರೆಮೇಲು ಇವರಿಗೆ ವೈಭವಪೂರ್ಣ ಮೆರವಣಿಗೆಯೊಂದಿಗೆ ಸ್ವಾಗತ ಅಭಿನಂದನಾ ಕಾರ್ಯಕ್ರಮವು ಫೆ.1ರಂದು ನಡೆಯಲಿದೆ.

ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ- ಬರೆಮೇಲು ಬಾಬು ಗೌಡ ಮತ್ತು ಮೋನಕ್ಕ ದಂಪತಿ ಪುತ್ರ ದೇವಪ್ರಸಾದ್ ಗೌಡ ರವರು ಪ್ರಾಥಮಿಕ ಶಿಕ್ಷಣವನ್ನು ಮುಗೇರಡ್ಕ ಮತ್ತು ಬಂದಾರು, ಶಾಲೆ, ಪ್ರೌಢ ಶಿಕ್ಷಣವನ್ನು ಪದ್ಮುಂಜ ಮತ್ತು ಬುಳೇರಿಮೊಗ್ರು ಶಾಲೆ, ಪಿಯುಸಿ ವ್ಯಾಸಂಗವನ್ನು ಪದ್ಮುಂಜದಲ್ಲಿ ಉನ್ನತ ಅಂಕದೊಂದಿಗೆ ತೇರ್ಗಡೆ ಹೊಂದಿದ್ದು, ಶಾಲಾ ಜೀವನದಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಓಟಗಾರನಾಗಿ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದರು .
ಇವರು 2003 ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಭಾರತ ದೇಶದ ರಕ್ಷಣಾ ವಿಭಾಗದ ಭೂ ಸೇನಾ ವಿಭಾಗದಲ್ಲಿ ಆಯ್ಕೆಯಾಗಿ.
2004 ಜನವರಿಯಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ (CORE&E.M.E) ಎಲೆಕ್ಟ್ರಾನಿಕ್ ಮೆಕಾನಿಕಲ್ ಇಂಜಿನಿಯರಿಂಗ್ ಟ್ರೈನಿಂಗ್ ಸೆಂಟರ್ ನಲ್ಲಿ ಸುಮಾರು 1ವರ್ಷ 5 ತಿಂಗಳುಗಳ ಕಾಲ ತರಬೇತಿ ಪಡೆದು ದೇಶದ ವಿವಿಧ ರಾಜ್ಯಗಳಾದ ಪಂಜಾಬ್, ಜಮ್ಮು ಕಾಶ್ಮೀರದ ಲಡಾಕ್, ಉತ್ತರಪ್ರದೇಶ, ಜಮ್ಮು ಕಾಶ್ಮೀರ, ಭೂಪಾಲ್, ಅಸ್ಸಾಂ, ಅರುಣಾಚಲಪ್ರದೇಶ, ಉತ್ತರಖಾoಡ್ ನ I.M.A ಡೆಹ್ರಾಡೊನ್, ಪಠಾಣ್ಕೋಟ್ (ಪಂಜಾಬ್) ಹೀಗೆ ಹಲವಾರು ದೇಶದ ಭಯಾನಕ ಗಡಿ ಪ್ರದೇಶದಲ್ಲಿ ಮೈ ಕೊರೆಯುವ -25 ಡಿಗ್ರಿ ಚಳಿಯಲ್ಲೂ 22 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ 31-01-2026 ರಂದು ಸೇವೆಯಿಂದ ನಿವೃತ್ತಿಗೊಂಡು ಫೆ.1ರಂದು ಹುಟ್ಟೂರಿಗೆ ಆಗಮಿಸುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡ ರವರಿಗೆ ರಾಷ್ಟ್ರ ಭಕ್ತರ ವೇದಿಕೆ ಬಂದಾರು, ಮೊಗ್ರು ಗ್ರಾಮದ ವತಿಯಿಂದ ಗೌರವಪೂರ್ವಕ ಅಭಿವಂದನೆ ಕಾರ್ಯಕ್ರಮ ನಡೆಯಲಿದೆ.

ನಾಳೆ ಸಂಜೆ 5.30 ಕ್ಕೆ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿವಿಧ ಗಣ್ಯರು, ನಿವೃತ್ತ ಸೇನಾನಿಗಳು ಸಂಘದ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತರಿರುವರು.

Related posts

ಅಯೋಧ್ಯೆ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಪಾರೆಂಕಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ವಿಶೇಷ ಪೂಜೆ

Suddi Udaya

ಕಳಿಯ ಪ್ರಾ.ಕೃ.ಪ.ಸ. ಸಂಘದ ಹಿರಿಯ ಮಾಜಿ ನಿರ್ದೇಶಕರಿಗೆ ಸನ್ಮಾನ

Suddi Udaya

ಉಜಿರೆ: ಮಲೆಬೆಟ್ಟುನಲ್ಲಿ ರೈತರಿಗೆ ಹೊರ ಆವರಣ ಕೃಷಿ ತರಬೇತಿ

Suddi Udaya

ಬೆಳ್ತಂಗಡಿ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಸಂಭ್ರಮದ ಬಕ್ರೀದ್

Suddi Udaya

ಜ.5: ನಾರಾವಿ ಶ್ರೀ ಮಹಮ್ಮಾಯಿ ದೇವಿಯ ಪುನಃ ಪ್ರತಿಷ್ಠಾ -ಸಾನಿಧ್ಯ ಕಲಶಾಭಿಷೇಕ ಮತ್ತು ಶ್ರೀ ಮಹಮ್ಮಾಯಿ ದೇವಿಯ ಗೊಂದೋಳು ಸೇವೆ ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವ

Suddi Udaya

ಧರ್ಮಸ್ಥಳದಿಂದ ಬಳಂಜ ಶಾಲಾ ಕ್ರೀಡಾಂಗಣ ಅಭಿವೃದ್ದಿಗೆ ನೆರವು, ಮಂಜೂರಾತಿ ಪತ್ರ ಹಸ್ತಾಂತರ

Suddi Udaya
error: Content is protected !!