September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಕಿನ್ಯಮ್ಮ ಸಭಾಭವನದ ಉದ್ದಿಮೆ ಪರವಾನಿಗೆ ರದ್ದುಗೊಳಿಸಿದ ಆದೇಶ ಹಿಂಪಡೆದ ಪಟ್ಟಣ ಪಂಚಾಯತ್

ಬೆಳ್ತಂಗಡಿ: ಸರಕಾರದ ಜಾಮೀನಿನಲ್ಲಿ ಸಭಾಭವನ ನಿರ್ಮಾಣ ಮಾಡಿರುವ ಕಾರಣದಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು ಬೆಳ್ತಂಗಡಿ ಕೆಲ್ಲಗುತ್ತು ಕಿನ್ಯಮ್ಮ ಸಭಾಭವನದ ಉದ್ದಿಮೆಪರವಾನಿಗೆಯನ್ನು ರದ್ದು ಮಾಡಿದ ಆದೇಶವನ್ನು ಹಿಂಪಡೆದಿರುವುದಾಗಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜ್ ರಸ್ತೆಯ, ಜೈನ್ ಪೇಟೆಯಲ್ಲಿರುವ ಸ.ನಂ 64/14 ರಲ್ಲಿ 4.31 ಎಕ್ರೆ ಸರಕಾರಿ ಜಾಮೀನಿನಲ್ಲಿ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನ ನಿರ್ಮಾಣ ಮಾಡಿರುವ ಬಗ್ಗೆ ಹರಿಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸೂಕ್ತ ದಾಖಲೆಗಳ ಬಗ್ಗೆ ಕೆ.ಜಯವರ್ಮ ರಾಜ ಬಲ್ಲಾಳ್ ಎಂಬವರಿಗೆ ನೋಟಿಸ್ ಜಾರಿ ಮಾಡಿದ್ದರು.‌

ಈ ಬಗ್ಗೆ ಸಭಾಭವನದ ಪಹಣಿ ಪತ್ರವನ್ನು ಪಟ್ಟಣ ಪಂಚಾಯತ್ ಗೆ ನೀಡಿದಾಗ ಅದರಲ್ಲಿ ಸಭಾಭವನ ಸರಕಾರ ಎಂದು ನಮೂದು ಮಾಡಿರುವುದು ಕಂಡು ಬಂದಿದೆ ಎಂದು ಸಭಾಭವನಕ್ಕೆ ನೀಡಿದ ಉದ್ದಿಮೆ ಪರವಾನಿಗೆಯನ್ನು ಪಟ್ಟಣ ಪಂಚಾಯತ್ ರದ್ದುಪಡಿಸಿದೆ ಎಂದು ಮುಖ್ಯಾಧಿಕಾರಿ ಜ.29 ರಂದುಬೆಳಿಗ್ಗೆ ಆದೇಶ ಹೊರಡಿಸಿದ್ದರು. ಆದೇಶ ಹಿಂಪಡೆದ ಪಟ್ಟಣ ಪಂಚಾಯತ್: ಅದೇ ದಿನ ಜಯವರ್ಮ ರಾಜ ಬಲ್ಲಾಳ್ ಪರ ಬೆಳ್ತಂಗಡಿ ಪಟ್ಟಣ ಪಂಚಾಯತ್ ಗೆ ದಾಖಲೆ ನೀಡಲಾಗಿದೆ. ಇದನ್ನು ಪರೀಶೀಲನೆ ಮಾಡಿದ ಮುಖ್ಯಾಧಿಕಾರಿಯವರು ಈ ಹಿಂದೆ ನೀಡಿದ್ದ ಆದೇಶವನ್ನು ಹಿಂಪಡೆದಿರುವುದಾಗಿ ತಿಳಿಸಿ ಮತ್ತೊಂದು ಆದೇಶ ಹೊರಡಿಸಿದ್ದಾರೆ.

ಆದೇಶದಲ್ಲಿ ಏನಿದೆ:ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ.ನಂ. 68/14ರಲ್ಲಿ 4.31 ಎಕ್ರೆ ಜಾಗವನ್ನು “ಬಸದಿ ಪರಂಬೋಕು” ಎಂಬುದಾಗಿ ಮೀಸಲಿರಿಸಿದ ಬಗ್ಗೆ ಕಂದಾಯ ಇಲಾಖೆಯ ಸರ್ವ ಮತ್ತು ಸೆಟ್ಗಮಂಟ್ ರಿಜಿಸ್ತಿಯಲ್ಲಿ ಪಟ್ಟಾದಾರನ ನಂಬ ಮತ್ತು ಹೆಸರಿನ ಕಾಲಂನಲ್ಲಿ “ಶಾಂತೇಶ್ವರ ದೇವಸ್ಥಾನದ ಪ್ರಕೃತ ಆಡಳೆದಾರರು” ಎಂದು ದಾಖಲಾಗಿದ್ದು, ಪಹಣಿಯ ಕಾಲಂ ನಂಬ್ರ 11 ರಲ್ಲಿ ನಮೂದಾಗಿರುವ ಬಗ್ಗೆ ಕಂದಾಯ ಇಲಾಖೆಯ ಸರ್ವೆ ಮತ್ತು ಸೆಟ್ಟೆಮಂಟ್ ರಿಜಿಸ್ಟ್ರಿಯ ನಕಲು ಪ್ರತಿಯನ್ನು ಒದಗಿಸಿರುತ್ತೀರಿ.ಆದುದರಿಂದ ತಮಗೆ ಈ ಕಛೇರಿಯ ದಿನಾಂಕ ಜ.29ರ ನೋಟೀಸು ಸಂಖ್ಯೆ: ಪ.ಪಂ.ಬೆ.1ಸಿ.ಆರ್/ನೋಟೀಸು/2025-26ರ ನೋಟೀಸನ್ನು ಹಿಂಪಡೆಯಲಾಗಿದೆಎಂದು ಪಟ್ಟಣ ಪಂಚಾಯತು,ಮುಖ್ಯಾಧಿಕಾರಿ ನೋಟಿಸಿನಲ್ಲಿ ತಿಳಿಸಿದ್ದಾರೆ.

Related posts

ಬೆಳಾಲು: ವಿದ್ಯುತ್ ಕಂಬಕ್ಕೆ ಇನೋವಾ ಡಿಕ್ಕಿ

Suddi Udaya

ಕಲ್ಲಾಜೆ ಸ.ಹಿ.ಪ್ರಾ. ಶಾಲೆಯಲ್ಲಿ ಒಕ್ಕೂಟದ ವತಿಯಿಂದ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ

Suddi Udaya

ಪ.ಜಾತಿ ಮತ್ತು ಪ.ಪಂಗಡದ ವಿದ್ಯಾರ್ಥಿಗಳಿಂದ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಲು ಅರ್ಜಿ ಆಹ್ವಾನ

Suddi Udaya

ಕಾಯರ್ತಡ್ಕ ಪ್ರೌಢ ಶಾಲೆಯಲ್ಲಿ “ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಗಾರ

Suddi Udaya

ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ನಯನಾಡು ಸರಕಾರಿ ಪ್ರೌಢಶಾಲೆಗೆ ಸತತ 6ನೇ ಬಾರಿಗೆ ಶೇ.100 ಫಲಿತಾಂಶ

Suddi Udaya
error: Content is protected !!