28.1 C
ಪುತ್ತೂರು, ಬೆಳ್ತಂಗಡಿ
September 10, 2026
ಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಲೈಫ್‌ಸ್ಟೈಲ್‌ವರದಿಸರ್ಕಾರಿ ಇಲಾಖಾ ಸುದ್ದಿ

ಕೇಂದ್ರ ಬಜೆಟ್ 2026-2027:ಜಾಗತಿಕ ಸವಾಲಿನ ನಡುವೆಯೂ ಜನರ ಆಶೋತ್ತರ ಪ್ರತಿಬಿಂಬಿತವಾದ ಬಜೆಟ್: ಹರೀಶ್ ಪೂಂಜ

ಬೆಳ್ತಂಗಡಿ: ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಹಾಗೂ ಅಮೇರಿಕಾದ ತೆರಿಗೆ ಬೆದರಿಕೆಯ ಸವಾಲಿನ ನಡುವೆ ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ 2026-2027ನೇ ಕೇಂದ್ರ ಮುಂಗಡ ಪತ್ರ ಆರ್ಥಿಕ ಸ್ಥಿರತೆಯೊಂದಿಗೆ ಬೆಳವಣಿಗೆಯ ಮುನ್ಸೂಚನೆ ನೀಡಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಬಯೋಫಾರ್ಮ್ ಮೂಲಕ ಆರೋಗ್ಯ ಕ್ಷೇತ್ರಕ್ಕೆ 10 ಸಾವಿರ ಕೋಟಿ ಮೀಸಲು ದೇಶದ ಸ್ವಾಸ್ಥ್ಯ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಲಿದ್ದು ಖಾದಿ ಹಾಗೂ ಕೈ ಮಗ್ಗಕ್ಕೆ ಪ್ರೋತ್ಸಾಹ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಿಗೆ ಸಾಲದ ಗ್ಯಾರಂಟಿಯೊಂದಿಗೆ ಉತ್ತೇಜನ ರಫ್ತುವಿಗೆ ಪೂರಕವಾಗಿ ಜಲಮಾರ್ಗ ನಿರ್ಮಾಣದ ಯೋಜನೆ ಎಐ ತಂತ್ರಜ್ಞಾನ (ಕೃತಕ ಬುದ್ಧಿವಂತಿಕೆ) ಅಭಿವೃದ್ಧಿಗೆ ಒತ್ತು ದೇಶದ ಕೈಗಾರಿಕಾ ಉದ್ಯೋಗ ಕ್ಷೇತ್ರದಲ್ಲಿ ಬೆಳವಣಿಗೆಯಾಗಲಿದೆ. ಬಂಡವಾಳ ವೆಚ್ಚಕ್ಕೆ ಹೆಚ್ಚು ಅನುದಾನ ಮೀಸಲಿರಿಸಿದ್ದು ಮೂಲಭೂತ ಸೌಕರ್ಯಕ್ಕೆ ಭಾರೀ ಆದ್ಯತೆ ನೀಡಿದಂತಾಗಿದೆ. ಮಹಿಳೆಯರಿಗೆ ಉದ್ಯಮಕ್ಕೆ ಪ್ರೋತ್ಸಾಹಿಸುವ ಲಕ್ ಪಥಿ ದೀದಿ ಯೋಜನೆ ಜನರ ಆಶೋತ್ತರಕ್ಕೆ ಪ್ರತಿಬಿಂಬಿತವಾದ ಬಜೆಟ್ ಆಗಿದೆ.

ವಿಕಸಿತ ಭಾರತದ ಬುನಾದಿಯ ಮೇಲೆ ಮಂಡಿಸಲ್ಪಟ್ಟ ಮುಂಗಡ ಪತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗಿ ಪ್ರಾಯೋಜಕತ್ವದ ಮೆಡಿಕಲ್ ಹಬ್ ಸ್ಥಾಪನೆ ಮಾರಣಾಂತಿಕ ಕಾಯಿಲೆಗಳ ಔಷಧಿಗಳ ತೆರಿಗೆ ಕಡಿತ ಖಂಡಿತವಾಗಿಯೂ ಶ್ರೀ ಸಾಮಾನ್ಯನಿಗೆ ಪ್ರಯೋಜನಕಾರಿಯಾಗಲಿದೆ. ವಿಶೇಷವಾಗಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬೆಂಗಳೂರು-ಚೆನ್ನೈ, ಬೆಂಗಳೂರು- ಹೈದರಾಬಾದ್ ಹೈಸ್ಪೀಡ್ ರೈಲು ಘೋಷಣೆ ಕರ್ನಾಟಕ ಕರಾವಳಿಯಲ್ಲಿ ಟ್ರಕ್ಕಿಂಗ್ ಮಾರ್ಗ ಅಭಿವೃದ್ಧಿ ಯೋಜನೆ ಘೋಷಣೆ ಸ್ಥಳೀಯ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಲಿದ್ದು ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ನೀಡಿದ ಮುಂಗಡ ಪತ್ರಕ್ಕೆ ಪ್ರದಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ರವರಿಗೆ ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ಅಭಿನಂದಿಸಿದ್ದಾರೆ.

Related posts

ಜನರ ಸುರಕ್ಷಿತ ದೃಷ್ಟಿಯಿಂದ ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇನ್ನುಳಿದ ರಸ್ತೆ ಡಾಮರೀಕರಣಕ್ಕೆ ನಮ್ಮ ಪ್ರಯತ್ನ ನಿರಂತರ :ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿಕೆ

Suddi Udaya

ಭಾರತೀಯ ಜನತಾ ಪಾಟಿ೯ದ.ಕ. ಹಾಗೂ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕುಮಾರಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ – ಬೆಳ್ತಂಗಡಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಆರಂಭ

Suddi Udaya

ಉಡುಪಿಯಲ್ಲಿ ಲಕ್ಷಕಂಠ ಗೀತಾ ಭಜನೋತ್ಸವಕ್ಕೆ ಬೆಳ್ತಂಗಡಿ ತಾಲ್ಲೂಕಿನ ಭಜನಾಪಟುಗಳು

Suddi Udaya

ಕುತ್ಲೂರು ಪುನರ್ವಸತಿ ಹೊಂದಿರುವ ಕುಟುಂಬದ ಸದಸ್ಯೆಯರಿಗೆ ಮಲ್ಲಿಗೆಯ ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ “ಸೌಭಾಗ್ಯ” ಲೋಕಾರ್ಪಣೆ

Suddi Udaya

ಜಯನಗರ-ಗುರಿಪಳ್ಳದಲ್ಲಿ ರಕ್ತದಾನ ಶಿಬಿರ: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಿ : ಡಾ| ಗೋಪಾಲ ಕೃಷ್ಣ ಕೆ.

Suddi Udaya
error: Content is protected !!