September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ “ವನ್ ಮಿನಿಟ್ ಉಮಾ”ರಿಂದ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಧಾರಿ ಖ್ಯಾತ ಬ್ಯೂಟೀಶಿಯನ್ ಶ್ರೀಮತಿ ಉಮಾ ಜಯಕುಮಾರ್ (ವನ್ ಮಿನಿಟ್ ಉಮಾ) ಇವರಿಂದ ಒಂದು ದಿನದ ವಿಶೇಷ ಬ್ಯೂಟೀಶಿಯನ್ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಎನ್. ಜರ್ನಾದನ್ ಉದ್ಘಾಟಿಸಿ, ಕೌಶಲ್ಯಾಧಾರಿತ ತರಬೇತಿಗಳು ಸ್ವ ಉದ್ಯೋಗಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಶ್ರೀಮತಿ ಉಮಾ ಜಯಕುಮಾರ್ ಅವರು ಬ್ಯೂಟೀಶಿಯನ್ ವೃತ್ತಿಯಲ್ಲಿ ತಾಂತ್ರಿಕ ನೈಪುಣ್ಯ, ಸಮಯ ನಿರ್ವಹಣೆ ಹಾಗೂ ಗ್ರಾಹಕ ತೃಪ್ತಿಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ವಹಿಸಿ ಮಾತನಾಡಿ, ಗ್ರಾಮೀಣ ಯುವಜನತೆಗೆ ಕೌಶಲ್ಯ ತರಬೇತಿ ನೀಡುವಲ್ಲಿ ರುಡ್ ಸೆಟ್ ಸಂಸ್ಥೆಯ ಪಾತ್ರವನ್ನು ವಿವರಿಸಿದರು.


ವೇದಿಕೆಯಲ್ಲಿ ಅತಿಥಿ ಉಪನ್ಯಾಸಕಿಯಾದ ಮಾಧವಿ ರೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಯ ಕೇಂದ್ರ ಕಚೇರಿಯ ಹಿರಿಯ ಉಪನ್ಯಾಸಕಿ ಅನಸೂಯಾ, ಉಪನ್ಯಾಸಕರಾದ ಲೋಹಿತ್ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ರುಡ್ ಸೆಟ್ ಸಂಸ್ಥೆಯ ಬ್ಯೂಟೀಶಿಯನ್ ತರಬೇತಿ ಪಡೆದ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಪ್ರಾರ್ಥನೆಯನ್ನು ಶ್ರೀಮತಿ ಸೀತಾ ಹೆಗಡೆ ಹಾಗೂ ಶ್ರೀಮತಿ ಲಕ್ಷ್ಮಿ ಸಲ್ಲಿಸಿದರು. ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮದ ನಿರೂಪಿಸಿದರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದವಿತ್ತರು.

Related posts

ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಜೆಪಿ ಆಡಳಿತ: ಶಾಸಕ ಹರೀಶ್ ಪೂಂಜ ಸಂತಸ

Suddi Udaya

ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಎಕ್ಸೆಲ್ ಉದ್ಯೋಗಿಗಳಿಂದ ಅಭಿನಂದನಾ ಸಮಾರಂಭ

Suddi Udaya

ಮೂರನೇ ದಿನದ ಕಾರ್ಯಾಚರಣೆಗೆ ಎಸ್.ಐ.ಟಿ ಅಧಿಕಾರಿಗಳ ಜೊತೆ ನೇತ್ರಾವತಿಗೆ ಬಂದ ದೂರುದಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಬ್ಬರು ನಿವೃತ್ತ ಡಿಜಿಪಿಗಳ ಭೇಟಿ

Suddi Udaya

ಬಂಗಾಡಿ ಸ. ಉ. ಪ್ರಾ. ಶಾಲೆಯಲ್ಲಿ ಕಾರ್ಗಿಲ್ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊಪ್ಪರಿಗೆ ತುಂಬಿಸುವ ಕಾರ್ಯಕ್ರಮ

Suddi Udaya
error: Content is protected !!