32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ಧರ್ಮಸ್ಥಳ ಗ್ರಾಮದಲ್ಲಿ ನಡೆದ 74 ಅಸಹಜ ಸಾವಿನ ಪ್ರಕರಣ: ವರದಿ ನೀಡಲು ಹೈಕೋರ್ಟ್ ಆದೇಶ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ ಈಗಿನ ವಸ್ತುಸ್ಥಿತಿ, ಈವರೆಗೆ ತೆಗೆದುಕೊಂಡಿರುವ ಕ್ರಮಗಳು ಹಾಗೂ ಮುಂದೆ ಕೈಗೊಳ್ಳಬೇಕೆಂದಿರುವ ಕ್ರಮಗಳ ಕುರಿತು 2 ವಾರಗಳಲ್ಲಿ ವಿವರಣೆ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಜತೆಗೆ ರಾಜ್ಯ ಸರಕಾರಕ್ಕೆ ನೋಟಿಸ್ ಸಹ ಜಾರಿಗೊಳಿಸಿದೆ.

ಈ ವಿಚಾರವಾಗಿ ವಿದ್ಯಾರ್ಥಿನಿ ಸೌಜನ್ಯಾ ತಾಯಿ ಕುಸುಮಾವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾ| ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಫೆ.3ರಂದು ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಇದು 74 ಪ್ರಕರಣಗಳ ವಿಚಾರವಾಗಿದೆ. ಯಾವ ಪ್ರಕರಣ ಯಾವ ಹಂತದಲ್ಲಿದೆ, ಈವರೆಗೆ ಏನಾಗಿದೆ ಎಂಬ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಸಂಪೂರ್ಣ ವಿವರಗಳನ್ನು ನೀಡಲಾಗುವುದು ಎಂದು ಹೇಳಿದರು.

ಅರ್ಜಿದಾರರ ಪರ ಹಿರಿಯ ವಕೀಲ ಎಸ್. ಬಾಲನ್, ಎಲ್ಲ 74 ಪ್ರಕರಣಗಳೂ ತನಿಖೆ ಮತ್ತು ವಿಚಾರಣೆಗೊಳಪಡಿಸಬೇಕಾದ ಪ್ರಕರಣಗಳಾಗಿವೆ ಎಂದರು. ಅದಕ್ಕೆ ಆಗಲಿ ಮೊದಲು ಸರಕಾರದಿಂದ ಮಾಹಿತಿ ಬರಲಿ ಎಂದು ಹೇಳಿ ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು.

ಈ ಮಧ್ಯೆ, ಅರ್ಜಿಯಲ್ಲಿ ರಾಜ್ಯ ಸರಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ ಎಂಬ ವಿಚಾರವನ್ನು ಸರಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ರಾಜ್ಯಸರಕಾರವನ್ನು ಪ್ರತಿವಾದಿಯನ್ನಾಗಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದ ನ್ಯಾಯಪೀಠ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿಗೊಳಿಸಿತು.

Related posts

ಕಡಮಗುಂಡಿ, ಬೊಳ್ಳೆ ಜಲಪಾತ, ಗಡಾಯಿಕಲ್ಲು ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧ ನಾಳೆಯಿಂದ (ಜ.9) ತೆರೆ

Suddi Udaya

ಶಾಸಕರ ಬಂಧನಕ್ಕೆ ಹೋದ ಪೊಲೀಸರು- ಸಂಜೆಯವರೆಗೆ ಬಿಗ್ ಹೈಡ್ರಾಮ;: ಶಾಸಕ ಹರೀಶ್ ಪೂಂಜರ ಬಂಧನ ಕೈ ಬಿಟ್ಟು ಹಿಂದಿರುಗಿದ ಪೊಲೀಸರು

Suddi Udaya

ಗುರುವಾಯನಕೆರೆ: ಸ್ಕೂಟಿ- ಬೈಕ್ ಮುಖಾಮುಖಿ ಡಿಕ್ಕಿ,ಸವಾರರಿಬ್ಬರಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

Suddi Udaya

ಮೇಲಂತಬೆಟ್ಟು ತ್ರಿವೇಣಿ ಸಂಜೀವಿನಿ ಮಹಿಳಾ ಗ್ರಾ.ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಶಾಸಕ ಹರೀಶ್ ಪೂಂಜರನ್ನು ಬಂಧಿಸದಂತೆ ಹಾಗೂ ನೋಟಿಸ್ ನೀಡದಂತೆ ಸರ್ಕಾರಕ್ಕೆ ತಾಕೀತು ಮಾಡಿದ ಕರ್ನಾಟಕ ಹೈಕೋರ್ಟ್

Suddi Udaya

ಉಜಿರೆ : ಸಿದ್ಧವನ ಗುರುಕುಲದಲ್ಲಿ “ಸುಧನ್ವ ಮೋಕ್ಷ” ಯಕ್ಷಗಾನ ಪ್ರದರ್ಶನ

Suddi Udaya
error: Content is protected !!