September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ “ವಾಕ್-ಇನ್ ವಿದ್ವತ್” – ಎ ಸ್ಟೆಪ್ ಇಂಟು ಸಕ್ಸಸ್” ಕಾರ್ಯಕ್ರಮದ ಲೋಗೋ ಅನಾವರಣ

ಬೆಳ್ತಂಗಡಿ : ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ವೃತ್ತಿಪರ ಕೋರ್ಸ್ ಗಳ ಬಗೆಗೆ ತಜ್ಞ ಉಪನ್ಯಾಸಕರಿಂದ ಮಾಹಿತಿ ಹಾಗೂ ಉಚಿತ ಸಮಾಲೋಚನಾ ಶಿಬಿರವನ್ನು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜು ಪರಿಚಯಿಸುತ್ತಿದೆ. ಈ ನೆಲೆಯಲ್ಲಿ ಫೆ.8 ರಂದು ಸಂಜೆ 4 ಗಂಟೆಗೆ ಗಣ್ಯ ಅತಿಥಿಗಳಿಂದ ಅದ್ದೂರಿ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು, ಇದರ ಪೂರ್ವಭಾವಿಯಾಗಿ ಫೆ.3 ರಂದು ಕಾಲೇಜಿನ ಸಭಾಂಗಣದಲ್ಲಿ ಲೋಗೋ ಅನಾವರಣ ಕಾರ್ಯಕ್ರಮ ನೆರವೇರಿತು.

ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಲೋಗೋ ಅನಾವರಣಗೊಳಿಸಿ ಮಾತನಾಡಿ, ವಿದ್ವತ್ ಎಜುಕೇಶನ್ ಫೌಂಡೇಶನ್ “ವಾಕ್-ಇನ್ ವಿದ್ವತ್” – ಎ ಸ್ಟೆಪ್ ಇಂಟು ಸಕ್ಸಸ್” ಎಂಬ ಕಾರ್ಯಕ್ರಮವನ್ನು ಜಿಲ್ಲೆಯಲ್ಲೆ ಪ್ಪ್ರಥಮವಾಗಿ ಪರಿಚಯಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ವಿದ್ಯಮಾನದಲ್ಲಿ ಮಕ್ಕಳು ವೃತ್ತಿಪರ ಕ್ಷೇತ್ರದಲ್ಲಿ ಮುನ್ನಡೆಯಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶ ನಮ್ಮದಾಗಿದೆ. ಮಕ್ಕಳಿಗೆ ಆತ್ಮವಿಶ್ವಾಸ ತುಂಬಿ ಅವರ ಮುಂದಿರುವ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ವೃತ್ತಿಪರ ಆಪ್ತ ಸಮಾಲೋಚನೆ ಅತ್ಯವಶ್ಯವಾಗಿದೆ. ಈ ದೃಷ್ಟಿಕೋನದಡಿ ಸಂಸ್ಥೆಯು “Walk-in to Vidvath” – A step into success” ಎಂಬ ಧ್ಯೇಯ ವಾಖ್ಯದೊಂದಿಗೆ ಕಾರ್ಯಕ್ರಮವನ್ನು ಪರಿಚಯಿಸುತ್ತಿದ್ದೇವೆ. ಈ ಸೇವೆಯು ಫೆಬ್ರವರಿ 8 ರಿಂದ ನಿರಂತರವಾಗಿ ಲಭ್ಯವಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸೇವೆಯನ್ನು ಪಡೆದುಕೊಳ್ಳಬಹುದು. ಇದು ಸಂಪೂರ್ಣ ಉಚಿತವಾಗಿದ್ದು, ಪೋಷಕರು, ವಿದ್ಯಾರ್ಥಿಗಳು ಆಸಕ್ತರು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.


ಈ ವೇಳೆ ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಈ ಮಂಡಗಳಲೆ, ಆಡಳಿತಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಹರೀಶ್ ಕೆ.ಆರ್., ಪಿಆರ್ ಒ ಚೈತ್ರೇಶ್ ಸಿ ಮತ್ತು ಅಜಿತ್ ರೈ ಸಹಿತ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಉಪಸ್ಥಿತರಿದ್ದರು.

Related posts

ಎಕ್ಸೆಲ್ ಪ್ರೀಮಿಯೆರ್ ಲೀಗ್ ಸೀಸನ್-3: ಎಕ್ಸೆಲ್ ವಿದ್ಯಾಗಣಪತಿ ತಂಡ ಚಾಂಪಿಯನ್ಸ್

Suddi Udaya

ಉಜಿರೆ ಶ್ರೀ ಧ. ಮಂ. ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಕಾರ್ಯಾಗಾರದ ಸಮಾರೋಪ

Suddi Udaya

ಮುಂಡಾಜೆಯ ತಿರುವಿನ ಬಳಿ ಮೋರಿಗೆ ಜಾರಿದ ಕಾರು

Suddi Udaya

ಬಜಿರೆ: ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ-ಧಾರ್ಮಿಕ ಸಭೆ

Suddi Udaya

ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ

Suddi Udaya
error: Content is protected !!