ಬೆಳ್ತಂಗಡಿ : ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಪ್ರಕರಣ ಸಂಬಂಧ ಧರ್ಮಸ್ಥಳ ಕ್ಷೇತ್ರದ ಪರ ಖ್ಯಾತ ವಕೀಲರಾದ ಸಿ.ವಿ.ನಾಗೇಶ್ ಫೆ.5 ರಂದು ವಾದ ಮಾಡಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಧರ್ಮಸ್ಥಳದ ವಿರುದ್ಧ ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಎಸ್.ಐ.ಟಿ ಅಧಿಕಾರಿಗಳು ಸುಳ್ಳು ಸಾಕ್ಷ 215 ರ ಅಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್.ಟಿ, ಚಿನ್ನಯ್ಯ, ಸೌಜನ್ಯ ಮಾವ ವಿಠಲ್ ಗೌಡ, ಗಿರೀಶ್ ಮಟ್ಟಣ್ಣವರ್,ಸುಜಾತ ಭಟ್ ವಿರುದ್ಧ ವರದಿಯನ್ನು ಸಲ್ಲಿಸಿದ ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ -ಪ್ರತಿವಾದ ನಡೆಯುತ್ತಿದ್ದು. ಈ ಪ್ರಕರಣ ಸಂಬಂಧ ಫೆ.5 ರಂದು (ಇಂದು) ಕೂಡ ವಾದ ನಡೆಯಲಿದೆ.
ಬೆಳ್ತಂಗಡಿ ನ್ಯಾಯಾಲಯಕ್ಕೆ ಖ್ಯಾತ ವಕೀಲರಾದ ಸಿ.ವಿ. ನಾಗೇಶ್ ಜೊತೆಯಲ್ಲಿ ವಕೀಲರುಗಳಾದ ರಾಜಶೇಖರ್ ಹಿಲ್ಯಾರ್, ಮಹೇಶ್ ಕಜೆ, ಸುನಿಲ್, ಪ್ರದೀಪ್ ಸೇರಿದಂತೆ 10 ಮಂದಿ ಭಾಗಿಯಾಗಿದ್ದಾರೆ.











