ಬೆಳ್ತಂಗಡಿ : ಲಾಯಿಲ – ಧರ್ಮಸ್ಥಳ ದಾರಿ ಮಧ್ಯೆ ಮಹಿಳೆಯೊಬ್ಬರು 9 ಗ್ರಾಂ ಚಿನ್ನದ ಕರಿಮಣಿ ಸರ ಕಳೆದು ಹೋಗಿರುವುದಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಳಿಸಿದ್ದಾರೆ.
ಲಾಯಿಲ ಸೈಂಟ್ ಮೇರಿಸ್ ಶಾಲಾ ಬಸ್ ನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ ಧರ್ಮಸ್ಥಳ ಭಾನು ಎಂಬುವರು ಫೆ.4 ರಂದು ಲಾಯಿಲದಿಂದ ಧರ್ಮಸ್ಥಳ ದಾರಿ ಮಧ್ಯೆ ಬಿದ್ದು ಹೋಗಿದ್ದು ಸಿಕ್ಕವರು ಬೆಳ್ತಂಗಡಿ ಠಾಣೆಗೆ ತಂದು ಒಪ್ಪಿಸಿದ್ದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು ಎಂದಿದ್ದಾರೆ.











