September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಫೆ.8-12: ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

ಕೊಯ್ಯೂರು: ಶ್ರೀ ವನದುರ್ಗಾ ದೇವಾಲಯ ಬದಿನಡೆ ಮಲೆಬೆಟ್ಟು ಇದರ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಫೆ.8ರಿಂದ ಮೊದಲ್ಗೊಂಡು ಫೆ.12 ರವರೆಗೆ ಜರುಗಲಿದೆ ಎಂದು ಆಡಳಿತ ಮೊಕ್ತೇಸರ ಗಣೇಶ್ ಕಾಂತಾಜೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಫೆ.8 ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪ್ರಸನ್ನಪೂಜೆ ಸಂಜೆ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರಿಂದ ಲಂಕಾದಹನ ಯಕ್ಷಗಾನ, ರಾತ್ರಿ ಶ್ರೀ ರಂಗಪೂಜೆ, ಶ್ರೀದೇವಿ ಉತ್ಸವ, ನಿತ್ಯ ಬಲಿ ಜರುಗಲಿದೆ. ಫೆ.10ರಂದು ಬೆಳಿಗ್ಗೆ ಕವಾಟ ಉದ್ಘಾಟನಾ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ಕಳೆಂಜ ಮೂಲಸ್ಥಾನದಿಂದ ಭಂಡಾರದ ಆಗಮನ, ರಾತ್ರಿ ಸ.ಉ.ಹಿ.ಪ್ರಾ.ಶಾಲೆ ಕೊಯ್ಯೂರು ಇಲ್ಲಿಯ ವಿದ್ಯಾರ್ಥಿಗಳಿಂದ ‘ನೃತ್ಯ ವೈವಿಧ್ಯ’, ಶ್ರೀ ದೇವಿಯ ಉತ್ಸವ, ಕೆರೆಕಟ್ಟೆ ಪೂಜೆ, ಅವಭೃತ, ಧ್ವಜಾವರೋಹಣ, ಪ್ರಸನ್ನ ಪೂಜೆ, ಶ್ರೀ ಧರ್ಮದೈವಗಳ ನೇಮೋತ್ಸವ ಶ್ರೀ ಧರ್ಮದೈವ ವಾರಾಹಿ, ಶ್ರೀ ಧೂಮಾವತಿ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ಸಹಿತ ಧರ್ಮದೈವಗಳ ನೇಮೋತ್ಸವ ಜರುಗುವುದು.

ಫೆ.9ರಂದು ಬೆಳಿಗ್ಗೆ ಶ್ರೀದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ರಾಮ ಭಜನಾ ಮಂಡಳಿ ಮಲೆಬೆಟ್ಟು-ಇವರ ನೇತೃತ್ವದಲ್ಲಿ ಆಹ್ವಾನಿತ ಭಜನಾ ಮಂಡಳಿಗಳಿಂದ ‘ಕಮ್ಮಟ ಭಜನೋತ್ಸವ’, ರಾತ್ರಿ ಶ್ರೀ ರಂಗಪೂಜೆ, ಶ್ರೀದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಲಿದೆ.

ಫೆ.11ರಂದು ಬೆಳಿಗ್ಗೆ ಶ್ರೀ ಭಂಡಾರದ ನಿರ್ಗಮನ, ಸಂಪ್ರೋಕ್ಷಣೆ, ಪ್ರಸನ್ನ ಪೂಜೆ, ರಾತ್ರಿ ಮೂಲಸ್ಥಾನ ಕಳೆಂಜ ಗುತ್ತು ದೈವಸ್ಥಾನದಲ್ಲಿ ಧರ್ಮದೈವ ವಾರಾಹಿ ನೇಮೋತ್ಸವ, ಕಲ್ಕುಡ, ಕಲ್ಲುರ್ಟಿ, ಗುಳಿಗೆ ನೇಮೋತ್ಸವ ಜರುಗುವುದು. ಫೆ.೧೨ರಂದು ಬೆಳಿಗ್ಗೆ ಶ್ರೀ ಕಲಶಾಭಿಷೇಕ – ಕಳೆಂಜದಲ್ಲಿ, ಪ್ರಸನ್ನಪೂಜೆ ಮಧ್ಯಾಹ್ನ ಸಂಕ್ರಮಣ ಪೂಜೆ, ಅನ್ನಸಂತರ್ಪಣೆ ಜರುಗಲಿರುವುದು.

Related posts

ಲಾಯಿಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ಹದಗೆಟ್ಟಿರುವ ಸುಲ್ಕೇರಿಯ ದೇರಂಡೋಡಿ ಮತ್ತು ದೇವರಗುಡ್ಡೆ ರಸ್ತೆ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ “ಯಕ್ಷಗಾನದಲ್ಲಿ ಮಹಿಳೆಯರ ಸಮಾನತೆ” ಉಪನ್ಯಾಸ ಕಾರ್ಯಕ್ರಮ

Suddi Udaya

ಶ್ರೀ ಗುರುದೇವ ಕಾಲೇಜಿನಲ್ಲಿ ಪದ್ಮನಾಭ ಮಾಣಿಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Suddi Udaya

ಜಾಗತಿಕ ಹಾದಿಯಲ್ಲಿ ಅಗ್ರಿಲೀಫ್‌ಗೆ ಭಾರೀ ಬಲ: ರೂ.10 ಕೋಟಿ ನಿಧಿ ಸಂಗ್ರಹ — ಭಾರತ ಮತ್ತು ಯುರೋಪ್–ಯುಕೆ ವಿಸ್ತರಣೆಗೆ ವೇಗ

Suddi Udaya

ಬೆಳ್ತಂಗಡಿ: ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ತಂಬಾಕು ರಹಿತ ದಿನ

Suddi Udaya
error: Content is protected !!