ಗುಂಡೂರಿ: ಗುಂಡೂರಿ ಗ್ರಾಮದ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿ ವಿವೇಕಾನಂದ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಕೀರ್ತಿ ಶೇಷ ಯಂ. ವಿಜಯರಾಜ ಅಧಿಕಾರಿಯವರ ಹುಟ್ಟುಹಬ್ಬ ಹಾಗೂ ಪುಣ್ಯ ಸ್ಮರಣೆ ಕಾರ್ಯಕ್ರಮ ಫೆ.5ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ. ಧರಣೇಂದ್ರ ಜೈನ್ ಮಾತನಾಡಿ, ವಿವೇಕಾನಂದ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷರಾಗಿದ್ದ ಮಾರಗುತ್ತು ವಿಜಯರಾಜ ಅಧಿಕಾರಿಯವರ ಸದಾ ಸವಿನೆನಪು ಉಳಿಯುವಂತೆ ಟ್ರಸ್ಟ್ ಅಡಿಯಲ್ಲಿ ನಿರಂತರ ಸಮಾಜ ಸೇವೆ ಗೈಯಲಾಗುವುದು ಎಂದು ತಿಳಿಸಿದರು. ಶ್ರೀಮತಿ ರಾಜೇಶ್ವರಿ ವಿಜಯರಾಜ ಅಧಿಕಾರಿಯವರು ಪುಣ್ಯ ನಮನ ಸಲ್ಲಿಸಿ ಪುಷ್ಪಾಂಜಲಿ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ. ಸಂದ್ಯಾ ಧರಣೇಂದ್ರ ಜೈನ್, ಕೋಶಾಧಿಕಾರಿ ಕೃಷ್ಣಾನಂದ ಭಟ್, ಸದಸ್ಯರಾದ ಭಾಸ್ಕರ ಪೈ, ಭರತ್ ರಾಜ ಮುದ್ಯ, ಪಶುವೈದ್ಯ ಸುಕೀರ್ತ್ ಜೈನ್, ಸಂಜೀವ ಪೂಜಾರಿ ಮೂಡ್ಲ, ರಾಜೇಂದ್ರ, ಜಿನೇಶ್ ಜೈನ್ ಮತ್ತಿತ್ತರು ಉಪಸ್ಥಿತರಿದ್ದರು. ಟ್ರಸ್ಟ್ ನ ಕಾರ್ಯದರ್ಶಿ ಎಚ್. ಜಗದೀಶ್ ಕಾರ್ಯಕ್ರಮ ನಿರೂಪಿಸಿ, ಹೊನ್ನಯ್ಯ ಕಾಟಿಪಳ್ಳ ವಂದಿಸಿದರು.











