September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕನ್ಯಾಡಿ ಶ್ರೀ ರಾಮ ಕ್ಷೇತ್ರದ ನೂತನ ಟ್ರಸ್ಟಿಯಾಗಿ ಬಿ ಪೀತಾಂಬರ ಹೆರಾಜೆ

ಧರ್ಮಸ್ಥಳ ಗ್ರಾಮದಲ್ಲಿರುವ ಶ್ರೀರಾಮ ಕ್ಷೇತ್ರವು ದಕ್ಷಿಣ ಭಾರತದ ಅಯೋಧ್ಯೆ ಎಂದೇ ಪ್ರಸಿದ್ಧವಾಗಿರುತ್ತದೆ. ಶ್ರೀ ಕ್ಷೇತ್ರದಲ್ಲಿರುವ ರಾಮಮಂದಿರವು ಮೂರು ಅಂತಸ್ತಿನಿಂದ ನಿರ್ಮಾಣಗೊಂಡಿದ್ದು ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಎರಡು ಶೈಲಿಗಳನ್ನು ಬಳಸಿ ನಿರ್ಮಾಣಗೊಂಡಿರುತ್ತದೆ.

ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಒಟ್ಟು ಎಂಟು ಸ್ಥಳಗಳಲ್ಲಿ ಶಾಖಾ ಮಠಗಳನ್ನು ಹೊಂದಿರುವ ಶ್ರೀ ಕ್ಷೇತ್ರದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಶ್ರೀ ಕ್ಷೇತ್ರದ ಟ್ರಸ್ಟಿಯನ್ನಾಗಿ ಬೆಳ್ತಂಗಡಿಯ ನಿವಾಸಿ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ, ಧಾರ್ಮಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸೇವೆಗೈಯ್ಯುತ್ತಿರುವ ಬಿ ಪೀತಾಂಬರ ಹೇರಾಜೆ ಯವರನ್ನು ನೇಮಕಗೊಳಿಸಿರುತ್ತಾರೆ.

ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠ ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷರಾಗಿ, ಶ್ರೀ ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷರಾಗಿ, ಶ್ರೀ ಎಸ್ ಡಿ ಎಂ ಕಾಲೇಜು ಉಜಿರೆ ಇದರ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಪ್ರತಿಷ್ಠಿತ ಬಿಲ್ಲವ ಮನೆತನದ ಮುಗ್ಗಗುತ್ತಿನ ಆಡಳಿತ ಮೊಕ್ತೇಸರನಾಗಿ, ಸೇವೆಗೆಯುತ್ತಿದ್ದಾರೆ.

Related posts

ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ

Suddi Udaya

ಕಳಿಯ: ಗೋವಿಂದೂರು ಶಾಲಾ ಬಳಿಯ ಗುಡ್ಡಕ್ಕೆ ಬೆಂಕಿ

Suddi Udaya

ಅನುಗ್ರಹ ಆಂ.ಮಾ. ಶಾಲೆಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಪೋಸ್ಟ್ ಹಾಕಿದ ಪ್ರಕರಣ; ಯುವತಿಗೆ ಜಾಮೀನು ಮಂಜೂರು

Suddi Udaya

ಮರೋಡಿ ಪಲಾರಗೋಳಿ ಆದಿಶಕ್ತಿ ಸೇವಾ ಸಮಿತಿಯಿಂದ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya
error: Content is protected !!