37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ತಾಲೂಕಿನ 5 ಕಡೆಗಳಲ್ಲಿ ಆಕಸ್ಮಿಕ ಬೆಂಕಿ ಅವಘಡ

ಬೆಳ್ತಂಗಡಿ: ತಾಲೂಕಿನ ಅಲ್ಲಲ್ಲಿ ರಸ್ತೆ ಬದಿ, ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಘಟನೆ ಫೆ.6 ರಂದು ನಡೆದಿದೆ. ಮುಂಡಾಜೆ ಗ್ರಾಮದ ಪರಮಕ್ಕು ಎಂಬಲ್ಲಿ ಜಾನ್ ಎಂಬುವವರ ತೆಂಗಿನ ತೋಟಕ್ಕೆ ಹಾಗೂ ಮುಂಡಾಜೆ-ದಿಡುಪೆ ರಸ್ತೆಯ ಮುಂಡಾಜೆ ಮಸೀದಿ ಬಳಿಯ ರಸ್ತೆ ಬದಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಉಜಿರೆ ಪ್ರಮುಖ ರಸ್ತೆ ಬದಿಯ ಶಾಟ್ ಸರ್ಕ್ಯೂಟ್‌ನಿಂದ ಲಾರಿಯೊಂದಕ್ಕೆ ಬೆಂಕಿ ಹತ್ತಿಕೊಂಡು ಬಗ್ಗೆ ವರದಿಯಾಗಿದೆ. ಅಗ್ನಿಶಾಮಕ ದಳವರು ಹಾಗೂ ಸಾರ್ವಜನಿಕರು ಒಗ್ಗೂಡಿ ಬೆಂಕಿ ನಂದಿಸಿದ್ದಾರೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆಸ್ಕಾಂ ರಸ್ತೆಯ ಭಗೀರಥಿ ಕಂಪೌಂಡ್ ಬಳಿ ಹೈಟೆನ್ಶನ್ ಜಂಪರ್ ತುಂಡಾಗಿ ಬಿದ್ದು ಬೆಂಕಿ ಅವಘಡ ಸಂಭವಿಸಿತ್ತು. ಅಲ್ಲಿಯೇ ಸಮೀಪದಲ್ಲಿದ್ದ ರಸ್ತೆ ಕಾಮಗಾರಿಯ ಗುತ್ತಿಗೆ ಕಂಪನಿಯ ನೀರಿನ ಟ್ಯಾಂಕರ್ ಮೂಲಕ ಬೆಂಕಿ ನಂದಿಸಲು ಕಾರ್ಯ ನಡೆಯಿತು. ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಗೌಡ, ಮೆಸ್ಕಾಂ ಅಧಿಕಾರಿ ಬೆಂಜಮಿನ್ ಬ್ರಾಕ್ಸ್, ಅರಣ್ಯಾಧಿಕಾರಿಗಳು ಹಾಗೂ ಸಾರ್ವಜನಿಕರು ಬೆಂಕಿ ನಂದಿಸಲು ಕೈ ಜೋಡಿಸಿದರು. ನಡ ಗ್ರಾಮದ ಮಂಚಕಲ್ಲು ಎಂಬಲ್ಲಿ ರಸ್ತೆ ಬದಿ ಆಕಸ್ಮಿಕವಾಗಿ ಬೆಂಕಿ ಬಿದ್ದಿದನ್ನು ಅಗ್ನಿಶಾಮಕ ದಳ ಹಾಗೂ ಅರಣ್ಯಾಧಿಕಾರಿಗಳು, ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ.

ನೆರವಾಗುತ್ತಿದೆ ಅಗ್ನಿಶಾಮಕ ವಾಹನ:
ಕಳೆದ ವರ್ಷ ತಾಲೂಕಿನಲ್ಲಿ ಬೆಂಕಿ ಪ್ರಕರಣ ನಡೆದ ವೇಳೆ ಅಗ್ನಿಶಾಮಕ ವಾಹನ ಇಲ್ಲದ ಕಾರಣ ಬಂಟ್ವಾಳ, ಪುತ್ತೂರಿನಿಂದ ವಾಹನ ಬರುವ ಸ್ಥಿತಿ ಇತ್ತು. ಅಲ್ಲದೇ ಇದರಿಂದ ಅನೇಕ ರೀತಿಯಲ್ಲಿ ವ್ಯಾಪಕವಾಗಿ ಸಮಸ್ಯೆ ಉಂಟಾಗುತ್ತಿತ್ತು. ಆದರೆ ಈ ಸಾಲ ಬೆಳ್ತಂಗಡಿ ಅಗ್ನಿಶಾಮಕ ಠಾಣೆಗೆ ನೂತನ ವಾಹನ ಬಂದಿರುವುದರಿಂದ ಬೆಂಕಿ ನಂದಿಸಲು ಸಹಕಾರವಾಗುತ್ತಿದೆ. ಆದರೂ ಒಂದೇ ದಿನದಲ್ಲಿ 5 ಕಡೆಗಳಲ್ಲಿ ಬೆಂಕಿ ಪ್ರಕರಣ ಸಂಭವಿಸಿದ್ದು ಮಗದೊಂದು ವಾಹನದ ಅಗತ್ಯತೆ ಕಾಡುತ್ತಿದೆ.

ಹೆಚ್ಚಿದ ಬಿಸಿಲಿನ ಝಳ:
ಒಂದೇಡೆ ಬೆಳಗ್ಗೆ ಚಳಿ, ಸುಡು ಸುಡು ಬಿಸಿಲು, ಕಾದು ಕಬ್ಬಿಣದಂತಾದ ರಸ್ತೆಗಳು, ಮನೆಯಿಂದ ಹೊರಗಡೆ ಬರೋಕೆ ಹಿಂದೇಟು ಹಾಕುವ ಜನ ನಗರದಲ್ಲಿ ಫೆ. ಮೊದಲ ವಾರದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದೆ. ಇವತ್ತು ಫೆ.೬ರಂದು ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಟಿದೆ. ಬಿಸಿಲಿನ ಝಳ ಹೆಚ್ಚಾಗಿದ್ದು ಜನತೆ ಬಸವಳಿದಿದ್ದಾರೆ. ಜನರು ಇನ್ಮುಂದೆ ಬಿಸಿಲಿನ ಹೊಡೆತವನ್ನು ತಪ್ಪಿಸಿಕೊಳ್ಳಲು ಮುಂದಾಗಬೇಕಿದೆ. ರಾಜ್ಯದಲ್ಲಿ ಈ ಬಾರಿ ತೀವ್ರ ಬೇಸಿಗೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಬ್ರವರಿ 15 ರಿಂದ ತಾಪಮಾನವು ಹೆಚ್ಚಾಗುವ ನಿರೀಕ್ಷೆಯಿದೆ. ಇನ್ನು ಮಾರ್ಚ್ ಮತ್ತು ಮೇ ನಡುವೆ ಬೇಸಿಗೆಯ ತಾಪ ಹೆಚ್ಚಾಗಲಿದ್ದು, ತಾಪಮಾನವು ೨೮ ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಆದ್ರತೆ ಇರಲಿದೆ ಎಂದು ತಿಳಿಸಿದೆ.

Related posts

ಚುನಾವಣಾ ನೀತಿ ಸಂಹಿತೆ ಹಿನ್ನೆಲೆ: ಚಾರ್ಮಾಡಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ- ಜಿಲ್ಲಾಧ್ಯಕ್ಷರ ಕಾರು ತಪಾಸಣೆ ನಡೆಸಿದ ಅಧಿಕಾರಿಗಳು

Suddi Udaya

ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗದೆ ತೊಂದರೆ : ಹರೀಶ್ ಸಾಲಿಯಾನ್ ಮೋರ್ತಾಜೆ

Suddi Udaya

ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

Suddi Udaya

“ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಉತ್ಸವ – ಸಂಭ್ರಮ: ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ: ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಗಡಿಪಾರು ನೋಟೀಸ್

Suddi Udaya
error: Content is protected !!