September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮುಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ: ಶಾಲೆಗೆ ಕೊಡುಗೆ ನೀಡಿದ ದಾನಿಗಳಿಗೆ ಗೌರವಾರ್ಪಣೆ

ಮುಂಡೂರು: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಂಡೂರು ಅ.30ರಂದು ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆಯಾಗಿ ಎಲ್ಲಾ ಮಕ್ಕಳಿಗೂ ಒಂದು ಜೊತೆ ಸಮವಸ್ತ್ರವನ್ನು ಅಮೂಲ್ಯ ಜನಸೇವಾ ಪ್ರತಿಷ್ಠಾನ (ಕಕ್ಕುಡೆ ಮನೆ ಮುಂಡೂರು) ಬೆಂಗಳೂರು ಮತ್ತು ದಿವಂಗತ ಸುಮನಾಜಿ ಅವರ ಸ್ಮರಣಾರ್ಥ ಅಶೋಕ್ ಜೈನ ಮುಂಡೂರು ಮನೆ ಕುಟುಂಬದವರು ಕೊಡುಗೆಯಾಗಿ ಶಾಲೆಗೆ ಧ್ವನಿವರ್ಧಕ ಮತ್ತು ಕಪಾಟನ್ನು ನೀಡಿರುತ್ತಾರೆ.

ಈ ಎರಡು ಕುಟುಂಬಕ್ಕೂ ಶಾಲೆ ಪರವಾಗಿ ಪ್ರೀತಿಪೂರ್ವಕ ಗೌರವದ ವಂದನೆಗಳನ್ನು ಸಲ್ಲಿಸಲಾಯಿತು.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವಮೂಲ್ಯ ವಹಿಸಿದ್ದರು.

ಅತಿಥಿಗಳಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸವಿತಾ.ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಹಾಗೂ ಅಶೋಕ್ ಕುಮಾರ್ ಜೈನ್ ಕುಟುಂಬದವರು ಉಪಸ್ಥಿತರಿದ್ದರು.

ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶ್ ಕೆ ಬಿ ಸ್ವಾಗತಿಸಿ, ಕು. ವಿಶಾಲ ಧನ್ಯವಾದವಿತ್ತರು. ಶ್ರೀಮತಿ ಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಪೋಷಕರು ಹಾಗೂ ಊರಿನ ವಿದ್ಯಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

Related posts

ಗುಂಡೂರಿ ಸ.ಕಿ.ಪ್ರಾ ಶಾಲೆಯ ನೂತನ ಎಸ್‌ಡಿಎಂಸಿ ಸಮಿತಿ ರಚನೆ

Suddi Udaya

ಕಾರಿಂಜ ಶ್ರೀ ವನ ಶಾಸ್ತಾರ , ಶ್ರೀ ವೀರಭದ್ರ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಮಕ್ಕಳಿಂದ ನಿರಂತರ ಯಕ್ಷಗಾನ ಬಯಲಾಟ ಪ್ರದರ್ಶನ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಂಭ್ರಮ ಉದ್ಘಾಟನೆ

Suddi Udaya

ಧರ್ಮಸ್ಥಳ ಪ್ರಕರಣ‌ ಎಸ್.ಐ.ಟಿ ತನಿಖೆಗೆ ತಡೆ ಕೋರಿ ಹೈಕೋರ್ಟ್ ಗೆ ಮತ್ತೊಂದು ಅರ್ಜಿ, ಮನವಿ ತಿರಸ್ಕಾರ

Suddi Udaya
error: Content is protected !!