September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಾಮಂಜೂರಿನಲ್ಲಿ ವಿಜಯ ಕ್ರೆಡಿಟ್ ಕೋ ಆಪರೇಟಿವ್‌ ಸೊಸೈಟಿಯ 21ನೇ ಶಾಖೆ ಉದ್ಘಾಟನೆ

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 21ನೇ ಹವಾನಿಯಂತ್ರಿತ ಶಾಖೆ ವಾಮಂಜೂರು ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಮೊದಲನೇ ಮಹಡಿಯಲ್ಲಿ ಫೆ.5 ರಂದು ಉದ್ಘಾಟನೆಗೊಂಡಿತು.

ವಾಮಂಜೂರು ಚರ್ಚ್ ನ ಧರ್ಮಗುರು ವಂಣ ಜೇಮ್ಸ್ ಡಿ’ಸೋಜಾ ಉದ್ಘಾಟನೆ ನೆರವೇರಿಸಿ ಮಾತನಾಡಿ, ವಾಮಂಜೂರು ಪ್ರದೇಶದಲ್ಲಿ ಈ ಸೊಸೈಟಿ ತನ್ನ ಶಾಖೆ ಆರಂಭಿಸಿ ಜನ ಸೇವೆಗೆ ಮುಂದಾಗಿದ್ದು ಇಲ್ಲಿನ ಜನರಿಗೆ ಅತ್ಯುತ್ತಮ ಸೇವೆ ಲಭಿಸಲಿ. ದೇವರ ಆಶೀರ್ವಾದ ನಿರಂತರ ಇರಲಿ ಎಂದು ಹಾರೈಸಿದರು.

ಸೊಸೈಟಿಯ ಅಧ್ಯಕ್ಷ ಅಜಿತ್ ಜಿ. ಶೆಟ್ಟಿ ಕೊರ್ಯಾರು ಮಾತನಾಡಿ, 2005ರಲ್ಲಿ ಎಸ್. ಜಯರಾಮ ಶೆಟ್ಟಿ ಅವರು ಆರಂಭಿಸಿದ ಸಂಸ್ಥೆ 21ನೇ ಶಾಖೆ ತೆರೆಯುವ ಹಂತಕ್ಕೆ ತಲುಪಿದೆ. ಪ್ರಸ್ತುತ 345 ಕೋ. ರೂ. ದುಡಿಯುವ ಬಂಡವಾಳ, 580 ಕೋ. ರೂ. ವಹಿವಾಟು, 310 ಕೋ. ರೂ. ಠೇವಣಿ ಹೊಂದಿದ್ದು, 270 ಕೋ. ರೂ. ಸಾಲ ನೀಡಲಾಗಿದೆ. 35,500ಕ್ಕೂ ಮಿಕ್ಕಿ ಸದಸ್ಯರನ್ನು ಸೊಸೈಟಿ ಒಳಗೊಂಡಿದೆ. ಕಳೆದ 18 ವರ್ಷಗಳಲ್ಲಿ ಸೊಸೈಟಿ ಎ ಗ್ರೇಡ್ ಕಾಯ್ದುಕೊಂಡಿದೆ ಎಂದರು.

ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಶೆಡ್ಡೆ ಮಾತನಾಡಿ, ಈ ಸಂಸ್ಥೆ ಬೆಳೆದು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವಂತಾಗಲಿ ಎಂದರು.

ಮಾಜಿ ಕಾರ್ಪೊರೇಟರ್‌ಹೇಮಲತಾ ರಘು ಸಾಲ್ಯಾನ್ , ಗಣ್ಯರಾದ ಮಂಜುನಾಥ ಭಂಡಾರಿ, ಎಸ್. ಶಿವರಾಮ ಮಲ್ಲಿ ದಿನೇಶ್ ಜೆ. ಕರ್ಕೇರ ಸಾನ ಮನೆ, ಮೊಹಮ್ಮದ್ ಇಸ್ಮಾಯಿಲ್, ಜಗದೀಶ ಶೇಣವ, ಸೊಸೈಟಿಯ ಉಪಾಧ್ಯಕ್ಷ ಜಯಂತ ಶೆಟ್ಟಿ ಕೆ., ನಿರ್ದೇಶಕರಾದ ಸೀತಾರಾಮ ಶೆಟ್ಟಿ ಬಿ., ಬಾಲಕೃಷ್ಣ ಪೂಂಜ ಎಚ್. ಪುಷ್ಪರಾಜ್ ಶೆಟ್ಟಿ ರಘುರಾಮ ಶೆಟ್ಟಿ ಎ., ಕೃಷ್ಣ ರೈ ಟಿ., ಎಂ. ಜಯರಾಮ ಭಂಡಾರಿ ಧರ್ಮಸ್ಥಳ, ಪುರಂದರ ಶೆಟ್ಟಿ ಪಾಡ್ಯಾರು, ಮಂಜುನಾಥ ರೈ, ರಾಜು ಶೆಟ್ಟಿ ಬೆಂಗತ್ಯಾರು, ಜಯರಾಮ ಶೆಟ್ಟಿ ಮುಂಡಾಡಿಗುತ್ತು, ರಾಜೇಶ್ ಶೆಟ್ಟಿ ‘ನವಶಕ್ತಿ’, ಪ್ರಕಾಶ್ , ಶೆಟ್ಟಿ ನೊಚ್ಚ ಸಾರಿಕ ಶೆಟ್ಟಿ ವಿಜಯ ಬಿ. ಶೆಟ್ಟಿ ಪ್ರಾದೇಶಿಕ ವ್ಯವಸ್ಥಾಪಕರಾದ ಸಂತೋಷ್ ಕುಮಾರ್, ಅಜಿತ್ ಕುಮಾರ್, ಶಾಖಾ ಪ್ರಬಂಧಕ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ವಂದಿಸಿದರು.

ಗ್ರಾಹಕರಿಗೆ ವಿಶೇಷ ಕೊಡುಗೆಗಳು

ಸೊಸೈಟಿಯಲ್ಲಿ ನಿರಖು ಠೇವಣಿ (ಎಫ್.ಡಿ.)ಗಳಿಗೆ 9.50 ಶೇ. ಬಡ್ಡಿ ದರವಿದೆ. ವಿಜಯ ಸಮೃದ್ಧಿ ಠೇವಣಿಗೆ ಶೇ. 9.25 ಬಡ್ಡಿದರವಿದ್ದು, 7 ವರ್ಷ 7 ತಿಂಗಳಲ್ಲಿ ಠೇವಣಿ ದ್ವಿಗುಣಗೊಳ್ಳಲಿದೆ. ಆವರ್ತಕ ಠೇವಣಿಗಳ ಮೇಲೆ ಶೇ. 8ರಿಂದ 9ರ ವರೆಗೆ ಆಕರ್ಷಕ ಬಡ್ಡಿದರಗಳು ಲಭ್ಯವಿದೆ. ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಚಿನ್ನಾಭರಣ ಈಡಿನ ಸಾಲ, ಆಭರಣ, ವಾಹನ, ಅಡಮಾನ, ವೈಯುಕ್ತಿಕ ಸಾಲಗಳು ಲಭ್ಯವಿದೆ.

Related posts

ಮೇ 28: ಮಿತ್ತಬಾಗಿಲು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲಾಮಯ ಧ್ವಜಸ್ತಂಭ

Suddi Udaya

ಉಜಿರೆ: ಬೆನಕ ಹೆಲ್ತ್ ಸೆಂಟರ್ ನಲ್ಲಿ ದಾದಿಯರ ದಿನಾಚರಣೆ

Suddi Udaya

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ಬೆಳ್ತಂಗಡಿ ಸೇವಾ ಸಾಧನ ವತಿಯಿಂದ ಮಾದಕ ವಸ್ತು ಜಾಗೃತಿ ಹಾಗೂ ಡ್ರ್ಯಾಗನ್ ಫ್ರೂಟ್ಸ್ ವಿತರಣೆ

Suddi Udaya

ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಒಮ್ನಿ ಕಾರಿಗೆ ಲಾರಿ ಡಿಕ್ಕಿ : ಸ್ಥಳದಲ್ಲೇ ನಾಲ್ಕು ಮಂದಿ ಸಾವು

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ವೃತ್ತಿಯೊಂದಿಗಿನ ಜೀವನದ ಸುಮತೋಲನ” ಕಾರ್ಯಾಗಾರ

Suddi Udaya

ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿ ವತಿಯಿಂದ ವಾರ್ಷಿಕ ಮಹಾಸಭೆ; ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ , ಸನ್ಮಾನ, ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ವಿವಿಧ ಸಾಧಕರಿಗೆ ಸನ್ಮಾನ

Suddi Udaya
error: Content is protected !!