September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕುಂಭಶ್ರೀ ಪಿಯು ಕಾಲೇಜಿನಿಂದ “ಆಸರೆ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ – 2026” ಯಶಸ್ವಿ ಆಯೋಜನೆ

ವೇಣೂರು: ಕುಂಭಶ್ರೀ ಪದವಿ ಪೂರ್ವ ಕಾಲೇಜು, ನಿಟ್ಟಡೆ ಇವರ ವತಿಯಿಂದ “ಆಸರೆ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ – 2026” ಕಾರ್ಯಕ್ರಮವನ್ನು ಫೆ.8 ರಂದು ಬೆಳಿಗ್ಗೆ, ಪ್ರಭೋದಿನಿ ವಿದ್ಯಾ ಕೇಂದ್ರ, ಕಳಸ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಸ ಪ್ರಭೋದಿನಿ ವಿದ್ಯಾ ಕೇಂದ್ರದ ಮುಖ್ಯಶಿಕ್ಷಕರು ಆನಂದ ಕೆ.ಸಿ. ವಹಿಸಿದ್ದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಲ್. ಭೋಜೇಗೌಡ ಆಗಮಿಸಿ ಕುಂಭಶ್ರೀ ಸಂಸ್ಥೆಯ ಶೈಕ್ಷಣಿಕ ಸೇವೆ, ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆಯು ನೀಡುತ್ತಿರುವ ಕೊಡುಗೆ ಹಾಗೂ “ಆಸರೆ” ವಿದ್ಯಾರ್ಥಿವೇತನ ಯೋಜನೆಯ ಮಹತ್ವವನ್ನು ವಿವರಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ದಿಕ್ಕು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಕಳಸ ಪ್ರಭೋದಿನಿ ವಿದ್ಯಾ ಕೇಂದ್ರ ಕಾರ್ಯದರ್ಶಿ ರಾಘವೇಂದ್ರ ಭಟ್ ಪಿ.ಡಿ., ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಸಂಚಾಲಕರು ಕುಂಭಶ್ರೀ ಸಂಸ್ಥೆ ವೇಣೂರು, ಬೀಡಾ ಪುಟ್ಟಣ್ಣ ಉದ್ಯಮಿ ಕಳಸ, ಕಳಸ ಕೆ.ಪಿ.ಎಸ್. ಗಣಿತ ಶಿಕ್ಷಕ ಶ್ರೀಂಗೇಶ್ವರ ಸಿ.ಎಸ್., ಕಳಸ ಸರ್ಕಾರಿ ಶಾಲೆ ಕನ್ನಡ ಶಿಕ್ಷಕಿ ರಶ್ಮಿ, ಹಾಗೂ ಕುಂಭಶ್ರೀ ಪಿಯು ಕಾಲೇಜು ಪಿಟಿಎ ಸದಸ್ಯ ಅರುಣ್ ಪೂಜಾರಿ ಉಪಸ್ಥಿತರಿದ್ದರು.

ಅಧ್ಯಕ್ಷೀಯ ಭಾಷಣದಲ್ಲಿ ಆನಂದ ಕೆ.ಸಿ. ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವವನ್ನು ವಿವರಿಸಿ, “ಆಸರೆ” ಪರೀಕ್ಷೆಯ ಮೂಲಕ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು. ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕುಂಭಶ್ರೀ ಸಂಸ್ಥೆ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಈ ಆಸರೆ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯಲ್ಲಿ ವಿವಿಧ ಶಾಲೆಗಳಿಂದ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು.
ಕಾರ್ಯಕ್ರಮದ ಜವಾಬ್ದಾರಿಯನ್ನು ಕುಂಭಶ್ರೀ ಪಿಯು ಕಾಲೇಜು ಶೈಕ್ಷಣಿಕ ಸಲಹೆಗಾರರು ಮನೋಜ್ ಎಸ್. ಸಮರ್ಥವಾಗಿ ನಿರ್ವಹಿಸಿದರು. ಕುಂಭಶ್ರೀ ಪಿಯು ಕಾಲೇಜು ಉಪನ್ಯಾಸಕ ಅಭಿಲಾಶ್ ಕಾಮತ್ ಸ್ವಾಗತಿಸಿ, ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಿಂಚನ ಮತ್ತು ಮಾನಸ ಕಾರ್ಯಕ್ರಮ ನಿರೂಪಿಸಿದರು.

Related posts

ಪುತ್ತೂರು ಅಧಿವಕ್ತಾ ಪರಿಷತ್, ದ.ಕ. ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಟೈಲರಿಂಗ್ ತರಬೇತಿ ಕಾರ್ಯಕ್ರಮ

Suddi Udaya

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಉರೂಸ್ ಕಾರ್ಯಕ್ರಮದ ಉದ್ಘಾಟನೆ

Suddi Udaya

ಕಳಿಯ ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿಗೆ ಕೃಷಿಕರಿಂದ ಬಂದ ದೂರು ಅರ್ಜಿ: ಪಂಚಾಯತ್ ನಿಂದ ಸ್ಥಳ ಪರಿಶೀಲಿಸಿ ಇತ್ಯರ್ಥ

Suddi Udaya

ಚಾರ್‌ಧಾಮ್‌ ಹಾಗೂ ಕೈಲಾಶ ಮಾನಸ ಸರೋವರ ಯಾತ್ರೆಯ ಅರ್ಜಿ ಸಲ್ಲಿಕೆ ಅವಧಿ ಜ. 31 ರ ತನಕ ವಿಸ್ತರಣೆ

Suddi Udaya

ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ದಿನಾಚರಣೆ

Suddi Udaya
error: Content is protected !!