22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ಬಗ್ಗೆ ತರಬೇತಿ

ಉಜಿರೆ : ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ತರಬೇತಿ ಬಗ್ಗೆ ಉಜಿರೆ ಗ್ರಾಮದ ಕಿರಿಯಾಡಿ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.

ಉದ್ಘಾಟನೆಯನ್ನು ದೇವಸ್ಥಾನದ ಅರ್ಚಕರಾದ ಕೃಷ್ಣ ಹೊಳ್ಳ ನೆರವೇರಿಸಿ ಮಾತನಾಡಿ ರೈತ ತರಬೇತಿ ಒಂದು ಬಹಳ ಉತ್ತಮವಾದ ಯೋಜನೆ ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಕೃಷಿ ಸಖಿ ಭಾಗೀರಥಿ ರೈತ ತರಬೇತಿಯ ಉದ್ದೇಶಗಳು ಇಲಾಖೆಯ ವತಿಯಿಂದ ನಡೆಯುವ ವಿವಿಧ ತರಬೇತಿಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ರೈತರಿಗೆ ಮಾಹಿತಿ ನೀಡಿದರು. ಪಶುಸಖಿ ಏಕಲತಾ ಪಶು ಇಲಾಖೆಯ ಮಾಹಿತಿಯನ್ನು ನೀಡಿದರು. ಮುಂದೆ ಸಂಪನ್ಮೂಲ ವ್ಯಕ್ತಿಗಳಾದ ಸುಲೇಮಾನ್ ಅಣಬೆ ಕೃಷಿ ಮಾಡುವ ವಿಧಾನಗಳು ಅದರ ಉದ್ದೇಶ ಅದರಿಂದ ನಮಗಾಗುವ ಲಾಭಗಳು ಪ್ರಾತ್ಯಕ್ಷಿಕೆಯ ಮೂಲಕ ಬಂದ ಎಲ್ಲಾ ರೈತರಿಗೆ ಸವಿವರವಾಗಿ ತಿಳಿಸಿದರು.

ಶಿಕ್ಷಕಿ ಸೇವಂತಿ ನಿರಂಜನ್ ಸ್ವಾಗತಿಸಿದರು. , ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ್ ಧನ್ಯವಾದವಿತ್ತರು.

Related posts

ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ಗಾರ್ಡನ್ ಮಂಜೊಟ್ಟಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ನಾವೂರು: ಯುವಕ ನೇಣುಬಿಗಿದು‌ ಆತ್ಮಹತ್ಯೆ

Suddi Udaya

ಕಾಡಾನೆ ದಾಳಿ, ಕೃಷಿಕರ ಭಾವನೆಗಳಿಗೆ ಸ್ಪಂದಿಸದ ಕಾಂಗ್ರೆಸ್ ಸರಕಾರ : ಹರೀಶ್ ಪೂಂಜ ಆಕ್ರೋಶ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್‌ ಸಲೂನ್‌ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಕಕ್ಯಪದವು ನಡುಕೇರ್ಯ ತರವಾಡು ಮನೆಯಲ್ಲಿ ನಾಗತಂಬಿಲ ದೈವಗಳಿಗೆ ಪರ್ವ ಸೇವೆ, ಅಗೇಲು ಸೇವೆ , ಸನ್ಮಾನ ಕಾರ್ಯಕ್ರಮ

Suddi Udaya
error: Content is protected !!