22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ರಾಜ್ಯ ಮಟ್ಟದ ಓಟ ಸ್ಪರ್ಧೆ: ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಉಜಿರೆ: ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ 33ನೇ ವರ್ಷದ ಹೊನಲು ಬೆಳಕಿನ ಕೋಟಿ–ಚೆನ್ನಯ್ಯ ಜೋಡುಕರೆ ಕಂಬಳದ ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಕೆಸರು ಓಟ ಸ್ಪರ್ಧೆಯಲ್ಲಿ ಎಸ್.ಡಿ.ಎಂ ಕಾಲೇಜಿನ ಕ್ರೀಡಾ ಸಂಘದ 10 ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

100 ಮೀಟರ್ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಜು ಕಂಚಿನ ಪದಕದೊಂದಿಗೆ 5 ಸಾವಿರ ನಗದು ಬಹುಮಾನವನ್ನು ಪಡೆದಿರುತ್ತಾರೆ. 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಜು ಸೇರಿದಂತೆ ಕಿಶನ್, ಯಶ್ವಂತ್ ಮತ್ತು ವರುಣ್ ತೃತೀಯ ಸ್ಥಾನ ಪಡೆದು ಕಂಚಿನ ಪದಕದೊಂದಿಗೆ ರೂ.10 ಸಾವಿರ ನಗದು ಬಹುಮಾನವನ್ನು ಪಡೆದುಕೊಂಡಿದ್ದಾರೆ. ಪ್ರಶಸ್ತಿ ವಿಜೇತ ಕ್ರೀಡಾ ಸಂಘದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜ ಬಿ ತರಬೇತಿ ನಿಡಿರುತ್ತಾರೆ.

Related posts

ಮುಂಡೂರು ಶ್ರೀ ನಾಗಂಬಿಕಾ ದೇವಸ್ಥಾನದಲ್ಲಿ ಸಂಭ್ರಮದ ನವರಾತ್ರಿ ಪೂಜಾ ಮಹೋತ್ಸವ

Suddi Udaya

ಬೆಳ್ತಂಗಡಿ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ದಿನಾಚರಣೆ

Suddi Udaya

ಗುರುವಾಯನಕೆರೆ: ಉಚಿತ ನೇತ್ರಾ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮ: ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ ವಕೀಲರ ಸಂಘ, ಯುವ ವಕೀಲರ ವೇದಿಕೆಯ ವತಿಯಿಂದ ಕ್ರಿಸ್ ಮಸ್ ಆಚರಣೆ

Suddi Udaya

ಗರ್ಡಾಡಿ: ಜೀಪು ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರನಿಗೆ ಗಂಭೀರ ಗಾಯ

Suddi Udaya
error: Content is protected !!