30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವಕೀಲರ ಸಂಘದಿಂದ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಹೈಕೋರ್ಟ್ ನ್ಯಾಯಾಧೀಶರಾದ ನರೇಂದ್ರ ಪ್ರಸಾದ್ ರನ್ನು ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘ ಮತ್ತು ಬೆಳ್ತಂಗಡಿ ವಕೀಲರ ಸಂಘ, ಮಂಗಳೂರು ವಕೀಲರ ಸಂಘ, ಬಂಟ್ವಾಳ ವಕೀಲರ ಸಂಘ ಮತ್ತು ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷರು / ಪದಾಧಿಕಾರಿಗಳು ಹೈಕೋರ್ಟ್ ನ್ಯಾಯವಾದಿ ಪಿ ಪಿ ಹೆಗ್ಡೆ ಯವರ ಜೊತೆ ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ವಕೀಲರ, ವಕೀಲರ ಭವನ ಮತ್ತು ನ್ಯಾಯಾಲಯಗಳ ಕುಂದುಕೊರತೆಗಳ ಬಗ್ಗೆ ಮಾತುಕತೆ ನಡೆಸಲಾಯಿತು.

ಈ ಬಗ್ಗೆ ಆಡಳಿತಾತ್ಮಕ ನ್ಯಾಯಾಧೀಶರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸಂಘಟಿತವಾಗಿ ಚರ್ಚಿಸಿದ ಬಗ್ಗೆ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬೆಲ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೋ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತ, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಹರೀಶ್ ಹಾಗೂ ಎಲ್ಲಾ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು ಉಪಸ್ಥಿತರಿದ್ದರು.

Related posts

ಪ್ರವೀಣ್ ಮದ್ದಡ್ಕ ಫೇಸ್‌ಬುಕ್ ಖಾತೆಯಿಂದ ದಲಿತ ಜನಾಂಗವನ್ನು ಅವಮಾನಿಸಿ ಜಾತಿ ನಿಂದನೆ : ಕೊಕ್ಕಡ ಶಾಖೆಯ ಸಂಚಾಲಕರಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಮೂಡಿಗೆರೆ ತಾಲೂಕಿಗೆ ಎಳನೀರಿನ ಅಧಿತಿ ಪಿ ಜೈನ್ ಪ್ರಥಮ

Suddi Udaya

ಬಿಎಂಎಸ್ ರಿಕ್ಷಾ ಚಾಲಕರ ಸಂಘ ಕ್ಷೇಮ ನಿಧಿ ಯೋಜನೆಯ 31ನೇ ಸಹಾಯಧನ ಹಸ್ತಾಂತರ

Suddi Udaya

ವಾಣಿ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಸಮಾವೇಶ

Suddi Udaya

ಮುಳಿಯ ಜ್ಯುವೆಲ್ಸ್ ನಿಂದ ನೀಟ್ ಸಾಧಕ ಎಕ್ಸೆಲ್ ವಿದ್ಯಾರ್ಥಿ ಪ್ರಜ್ವಲ್ ಹೆಚ್.ಎಂ ರಿಗೆ ಗೌರವಾರ್ಪಣೆ

Suddi Udaya

ಬಂದಾರು: ಉಜ್ವಲ್ ಗ್ಯಾಸ್ ವಿತರಣೆ ಹಾಗೂ ಕೆವೈಸಿ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಕಾರ್ಯಕ್ರಮ

Suddi Udaya
error: Content is protected !!