32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

46 ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳ ನೇಮಕ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳ ಅಧಿಕಾರ ಅವಧಿ ಫೆ.15 ರಂದು ಮುಕ್ತಾಯಗೊಳ್ಳಲಿದೆ. ಆದ್ದರಿಂದ ಆಡಳಿತಾಧಿಕಾರಿಗಳನ್ನು ಆಯಾ ಆಯಾ ಗ್ರಾಮ ಪಂಚಾಯತ್‌ಗಳಿಗೆ ನೇಮಿಸಲಾಗಿದೆ. ಅವಧಿ ಮುಗಿದ ಗ್ರಾಮ ಪಂಚಾಯತ್‌ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ.

ಕಾಶಿಪಟ್ಣ, ಮರೋಡಿ ಹಾಗೂ ನಾರಾವಿಗೆ ಎಪಿಎಂಸಿ ಕಾರ್ಯದರ್ಶಿ ನವೀನ್ ಕುಮಾರ್, ಹೊಸಂಗಡಿ ಹಾಗೂ ಕುಕ್ಕೇಡಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಕ್ಕಪ್ಪ ಹೆಚ್, ತೆಕ್ಕಾರು ಹಾಗೂ ಬಾರ್ಯಗೆ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಕೆ.ಎಸ್.ಚಂದ್ರಶೇಖರ್, ತಣ್ಣೀರುಪಂತ ಮತ್ತು ಇಳಂತಿಲಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ್ ಕುಮಾರ್, ಕಳಿಯ ಹಾಗೂ ಮಾಲಾಡಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಎನ್., ಪಡಂಗಡಿ ಹಾಗೂ ಬಳಂಜಗೆ ಬೆಳ್ತಂಗಡಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್, ನೆರಿಯ ಹಾಗೂ ಚಾರ್ಮಾಡಿಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೋಸೆಫ್ ಪಿಎಸ್, ಪುದುವೆಟ್ಟು-ಕಳಂಜಗೆ ಕಳಂಜೊಟ್ಟು ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿ ಡಾ.ಯತೀಶ್, ಶಿಶಿಲ, ಶಿಬಾಜೆ ಹಾಗೂ ಅರಸಿನಮಕ್ಕಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ ಆಗ್ನೇಸ್, ನಾವೂರು ಮತ್ತು ಇಂದಬೆಟ್ಟುವಿಗೆ ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಜನಾರ್ಧನ್,

ಮೇಲತಂಬೆಟ್ಟು-ಲಾಯಿಲಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರಕೃಷ್ಣ, ಧರ್ಮಸ್ಥಳ ಮತ್ತು ಉಜಿರೆಗೆ ತೋಟಗಾರಿಕಾ ಇಲಾಖೆಯ ಸಹಾಯಕ ತೋಟಗಾರಿಕಾ ಅಧಿಕಾರಿ ಮಹಾವೀರ ಜೈನ್, ಸುಲ್ಕೇರಿ ಮತ್ತು ಅಳದಂಗಡಿಗೆ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಮೋಹನ್ ಕುಮಾರ್, ಮುಂಡಾಜೆ ಹಾಗೂ ಕಲ್ಮಂಜಕ್ಕೆ ಬೆಳ್ತಂಗಡಿ ಪಶುಸಂಗೋಪನಾ ವೈದ್ಯಾಧಿಕಾರಿ(ಆಡಳಿತ) ಡಾ.ರವಿಕುಮಾರ್, ಮಚ್ಚಿನ-ಮಡಂತ್ಯಾರಿಗೆ ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಲೋಕೇಶ್, ಕೊಯ್ಯೂರು ಮತ್ತು ಕುವೆಟ್ಟುವಿಗೆ ಬೆಳ್ತಂಗಡಿ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಮಲವಂತಿಗೆ ಮತ್ತು ಕಡಿರುದ್ಯಾವರಕ್ಕೆ ಬೆಳ್ತಂಗಡಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಶರ್ಮಿಷ್ಠ, ಅಂಡಿAಜೆ ಮತ್ತು ಶಿರ್ಲಾಲುವಿಗೆ ಮದ್ದಡ್ಕ ಸಹಾಯಕ ತೋಟಗಾರಿಕಾ ನಿರ್ದೇಶಕ ಮಂಜುನಾಥ, ಕಣಿಯೂರು ಹಾಗೂ ಬಂದಾರಿಗೆ ಕಣಿಯೂರು ಸರ್ಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಹನಾ ರೈ, ಬೆಳಾಲು ಮತ್ತು ನಿಡ್ಲೆಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎ.ಡಿ.ವೀರಭದ್ರಪ್ಪ, ಪಟ್ರಮೆ-ಕೊಕ್ಕಡಗೆ ತಣ್ಣೀರುಪಂತ ಸರ್ಕಾರಿ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೃಷ್ಣಪ್ರಸಾದ್ ಹಾಗೂ ಕೊನೆಯದಾಗಿ ನಡ ಮತ್ತು ಮಿತ್ತಬಾಗಿಲಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಮೇಶ್ ಸಿ.ಕೆ ಅವರನ್ನು ಆಡಳಿತಾಧಿಕಾರಿಗಳಾಗಿ ಆಯಾ ಆಯಾ ಗ್ರಾಮ ಪಂಚಾಯತ್‌ಗಳಿಗೆ ನೇಮಿಸಲಾಗಿದೆ.

Related posts

ಮನ್ ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗೆ ನೂತನ ಪ್ರಾಂಶುಪಾಲರಾಗಿ ಝೀನತ್ ಬಾನು ಅಧಿಕಾರ ಸ್ವೀಕಾರ

Suddi Udaya

ಉಜಿರೆಯಲ್ಲಿ ಸಂಕಷ್ಟಿ ಪ್ರಯುಕ್ತ ತಾಳಮದ್ದಳೆ

Suddi Udaya

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕ್ಕಾಗಿ ಮದ್ಯ ಮಾರಾಟದ ಹಾದಿ ಹಿಡಿದಿರುವುದು ಅತ್ಯಂತ ವಿಷಾಧನೀಯ: ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ ಶಾಸಕ ಹರೀಶ್ ಪೂಂಜ

Suddi Udaya

ಅಸೋಸಿಯೇಷನ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರಿಂಗ್ ಬೆಳ್ತಂಗಡಿ- ಪುತ್ತೂರು ಸೆಂಟರ್ ವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ,ಸಾಧಕರಿಗೆ ಸನ್ಮಾನ, ವಾಹನ ಜಾಥ, ಸಂಭ್ರಮ-2024

Suddi Udaya

ಬ್ರಹ್ಮವಾರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ವಿಚಾರಣೆಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರು

Suddi Udaya
error: Content is protected !!