37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸoಪನ್ನ

ಕುವೆಟ್ಟು: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ 3 ರಿಂದ 7 ರ ವರೇಗೆ ವಾರ್ಷಿಕ ಜಾತ್ರಾ ಮಹೋತ್ಸವ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ ರಘುರಾಮ್ ಭಟ್ ಮಠ ಉಪಸ್ಥಿತಿಯಲ್ಲಿ ತoತ್ರಿಗಳಾದ ಶ್ರೀ ಪಾದ ಪಾoಗಣ್ಣಾಯರ ನೇತೃತ್ವದಲ್ಲಿ ಪ್ರಾರoಭಗೊoಡು ದೇವತಾ ಪ್ರಾರ್ಥನೆ ಹಸಿರು ಹೊರೆಕಾಣಿಕೆ, ತೋರಣ ಮುಹೂರ್ತ, ದೇವರೀಗೆ ಪoಚಾಮ್ರತ ಅಭಿಷೇಕ, ಗಣಹೋಮ, ನವ ಕಲಶಾಭಿಷೇಕ , ಅಲoಕಾರ ಪೂಜೆ, ಧ್ವಜಾರೋಹಣ, ಮಹಾ ಪೂಜೆ , ನಿತ್ಯ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ದೈವ ದೇವರ ಬೇಟಿ, ಅವಭ್ರತ ಸ್ನಾನ ಉತ್ಸವದೊಂದಿಗೆ ಫೆ. 7 ರಂದು ದ್ವಜಾವರೋಹಣಗೊoಡು ಸoಪನ್ನಗೊoಡಿತು.

ಪ್ರತಿ ದಿನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಜಾತ್ರಾ ಮಹೋತ್ಸವಕ್ಕೆ ವಿಶೇಷ ಅತಿಥಿಯಾಗಿ ಶಂಕರ ಕೋಟ್ಯಾನ್ ರತನ್ ಕುಮಾರ್ ಬಾಲೋಳಿ ಬೀಡು, ಶ್ರೀಧಾಮ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಅಧ್ಯಕ್ಷ ರಕ್ಷಿತ್ ಶಿವರಾಂ, ಉದ್ಭವ ರೌದ್ರನಾಥೇಶ್ವರ ದೇವಸ್ಥಾನ ನಡುಬೆಟ್ಟು ಧರ್ಮದರ್ಶಿಗಳಾದ ರವಿ ಎನ್., ಎಕ್ಸೆಲ್ ಸಮೂಹ ಸಂಸ್ಥೆ ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅರಿಕೋಡಿ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ, ಮತ್ತಿತರರು ಆಗಮಿಸಿದ್ದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊoಡೆಮಾರು, ಸದಸ್ಯರಾದ ಗೋಪಿನಾಥ್ ನಾಯಕ್ ಗುರುವಾಯನಕೆರೆ, ಸತೀಶ್ ಬಂಗೇರ ಕುವೆಟ್ಟು, ಶಾಂಭವಿ ಪಿ ಬಂಗೇರ ಬೆಳ್ತಂಗಡಿ, ಧನಂಜಯ ರಾವ್ ಗುರುವಾಯನಕೆರೆ, ಹರಿಪ್ರಸಾದ್ ಇರ್ವತ್ರಾಯ, ಕೆ ರಾಜು ಪಡoಗಡಿ, ಸವಿತಾ ಆಚಾರ್ಯ ಉಪಸ್ಥಿತರಿದ್ದರು. ಊರ ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Related posts

ಜ.31-ಫೆ.4: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ನಾಳೆ (ಫೆ.8) : ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬೆಳ್ತಂಗಡಿಗೆ

Suddi Udaya

ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷರಾಗಿ ಚೈತ್ರಾ ಎಂ.ಜಿ., ಉಪಾಧ್ಯಕ್ಷರಾಗಿ ಪ್ರೇಮಾ ಸಿ.

Suddi Udaya

ನಾಳೆ(ಅ.19): ಅನುಗ್ರಹದಲ್ಲಿ ಹಿರಿಯ ವಿದ್ಯಾರ್ಥಿಗಳ “ಅನುಗ್ರಹ ಸಮಾಗಮ 2025”

Suddi Udaya

ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Suddi Udaya

ಬಂಗ್ಲೆಗುಡ್ಡೆ ಪ್ರದೇಶಕ್ಕೆ ಮತ್ತೆ ಎಸ್.ಐ‌.ಟಿ ಎಂಟ್ರಿ

Suddi Udaya
error: Content is protected !!