September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಬದಿನಡೆ ಶ್ರೀ ವನದುರ್ಗಾ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,

ಕೊಯ್ಯೂರು: ಶ್ರೀ ವನದುರ್ಗಾ ದೇವಾಲಯ ಬದಿನಡೆ ಮಲೆಬೆಟ್ಟು ಇದರ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳ ನೇತೃತ್ವದಲ್ಲಿ ಫೆ.8ರಿಂದ ಪ್ರಾರಂಭಗೊಂಡು ಫೆ.12 ರವರೆಗೆ ಜರುಗಲಿದೆ.

ಫೆ.8 ರಂದು ಬೆಳಿಗ್ಗೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ಗಣಯಾಗ, ತೋರಣ ಮುಹೂರ್ತ, ಶ್ರೀ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಪ್ರಸನ್ನಪೂಜೆ ಸಂಜೆ ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರಿಂದ ಲಂಕಾದಹನ ಯಕ್ಷಗಾನ, ರಾತ್ರಿ ಶ್ರೀ ರಂಗಪೂಜೆ, ಶ್ರೀದೇವಿ ಉತ್ಸವ, ನಿತ್ಯ ಬಲಿ ನಡೆಯಿತು.

ಫೆ.9ರಂದು ಬೆಳಿಗ್ಗೆ ಶ್ರೀದೇವಿ ಉತ್ಸವ, ದರ್ಶನ ಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ ಶ್ರೀ ರಾಮ ಭಜನಾ ಮಂಡಳಿ ಮಲೆಬೆಟ್ಟು-ಇವರ ನೇತೃತ್ವದಲ್ಲಿ ಆಹ್ವಾನಿತ ಭಜನಾ ಮಂಡಳಿಗಳಿಂದ ‘ಕಮ್ಮಟ ಭಜನೋತ್ಸವ’, ರಾತ್ರಿ ಶ್ರೀ ರಂಗಪೂಜೆ, ಶ್ರೀದೇವಿ ಉತ್ಸವ, ಭೂತಬಲಿ, ಶಯನೋತ್ಸವ, ಕವಾಟ ಬಂಧನ ನಡೆಯಿತು.

ಇಂದು( ಫೆ.10) ಬೆಳಿಗ್ಗೆ ಕವಾಟ ಉದ್ಘಾಟನಾ, ಕಲಶಾಭಿಷೇಕ, ಪ್ರಸನ್ನ ಪೂಜೆ, ಚೂರ್ಣೋತ್ಸವ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಗಣೇಶ್ ಕಾಂತಾಜೆ , ಜಾತ್ರೋತ್ಸವ ಸಮಿತಿ ಅಧ್ಯಕ್ಷ ಶ್ರೀಧರ ಆಚಾರ್ಯ ಗುಂಡಿಜಾಲು, ಪ್ರಧಾನ ಅರ್ಚಕ ಅಶೋಕ್ ಕುಮಾರ್ ಕೊಯ್ಯೂರು, ಅರ್ಚಕರಾದ ಗೋಪಾಲ ಉಡುಪ, ರಾಘವೇಂದ್ರ ಉಡುಪ, ಸಮಿತಿ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ ಕಳೆಂಜ ಮೂಲಸ್ಥಾನದಿಂದ ಭಂಡಾರದ ಆಗಮನ, ರಾತ್ರಿ ಸ.ಉ.ಹಿ.ಪ್ರಾ.ಶಾಲೆ ಕೊಯ್ಯೂರು ಇಲ್ಲಿಯ ವಿದ್ಯಾರ್ಥಿಗಳಿಂದ ‘ನೃತ್ಯ ವೈವಿಧ್ಯ’, ಶ್ರೀ ದೇವಿಯ ಉತ್ಸವ, ಕೆರೆಕಟ್ಟೆ ಪೂಜೆ, ಅವಭೃತ, ಧ್ವಜಾವರೋಹಣ, ಪ್ರಸನ್ನ ಪೂಜೆ, ಶ್ರೀ ಧರ್ಮದೈವಗಳ ನೇಮೋತ್ಸವ ಶ್ರೀ ಧರ್ಮದೈವ ವಾರಾಹಿ, ಶ್ರೀ ಧೂಮಾವತಿ ನೇಮೋತ್ಸವ, ಶ್ರೀ ಕೊಡಮಣಿತ್ತಾಯ ಸಹಿತ ಧರ್ಮದೈವಗಳ ನೇಮೋತ್ಸವ ಜರುಗುವುದು.

Related posts

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಮತ್ತು ಕಾಲೇಜಿನಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ

Suddi Udaya

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya

ನ.4: ಭಜಕ ಸಹೋದರಿಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

Suddi Udaya

ಬಳಂಜ: ಅಟ್ಲಾಜೆ ಕ್ರಿಕೆಟರ್ಸ್ ತಂಡದಿಂದ ಮಾನವೀಯ ಕಾರ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊರ್ವರಿಗೆ ರೂ 23 ಸಾವಿರ ಹಸ್ತಾಂತರ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಬಸವ ಜಯಂತಿ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ : ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಹಾಗೂ ಎಂ.ಡಿ ಸಮೀರ್ ವಿರುದ್ಧ ತನಿಖೆ ಕೋರಿ ಕೋರ್ಟ್ ಗೆ ಅರ್ಜಿ

Suddi Udaya
error: Content is protected !!